»   » ಅಚ್ಚರಿ ಮೂಡಿಸುವ ರಾಜ್ ಮತ್ತು ರಜನಿ ನಡುವಿನ ಸಾಮ್ಯತೆ!

ಅಚ್ಚರಿ ಮೂಡಿಸುವ ರಾಜ್ ಮತ್ತು ರಜನಿ ನಡುವಿನ ಸಾಮ್ಯತೆ!

By: ಶಿವರುದ್ರಯ್ಯ
Subscribe to Filmibeat Kannada
ರಾಜ್ ಮತ್ತು ರಜನಿ ಗೆ ಇರುವ ಮತ್ತೊಂದು ಹೆಸರೇ ಸರಳತೆ | Filmibeat Kannada

ವರನಟ ಡಾ. ರಾಜಕುಮಾರ್ ಮತ್ತು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಚಿತ್ರೋದ್ಯಮದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದವರು.

1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ರಾಜಣ್ಣ ಒಟ್ಟು 208 ಚಿತ್ರಗಳಲ್ಲಿ ನಟಿಸಿದ್ದಾರೆ. ತನ್ನ ಜೀವಿತಾವಧಿಯಲ್ಲಿ ಬಹಳಷ್ಟು ಆಫರ್ ಗಳು ಇದ್ದರೂ ರಾಜ್, ಕನ್ನಡ ಹೊರತಾಗಿ ಬೇರೆ ಭಾಷೆಯಲ್ಲಿ ನಟಿಸಿರಲಿಲ್ಲ.

ಇತ್ತ 1975ರಲ್ಲಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಸ್ಟೈಲ್ ಕಿಂಗ್ ರಜನೀಕಾಂತ್, ತಮಿಳು, ತೆಲುಗು, ಕನ್ನಡ, ಮಲಯಾಳಂ, ಇಂಗ್ಲಿಷ್, ಬೆಂಗಾಳಿ, ಹಿಂದಿ ಸೇರಿದಂತೆ ಸುಮಾರು 155ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಡಾ. ರಾಜಕುಮಾರ್ ಮತ್ತು ರಜನೀಕಾಂತ್ ಅವರ ನಡುವೆ ಕೆಲವು ಸಾಮ್ಯತೆಗಳನ್ನು ಕಾಣಬಹುದಾಗಿದೆ. ಕೆಲವೊಂದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಇಬ್ಬರೂ ಸರಳತೆಗೆ ಹೆಸರು

ಡಾ. ರಾಜಕುಮಾರ್ ಮತ್ತು ರಜನೀಕಾಂತ್ ಸರಳತೆಗೆ ಇರುವ ಇನ್ನೊಂದು ಹೆಸರು. ಇಬ್ಬರೂ ಮೇರು ಕಲಾವಿದರು ಅಭಿಮಾನಿಗಳನ್ನು ದೇವರು ಎಂದು ಗೌರವ ನೀಡುವವರು. ತಮ್ಮ ತಮ್ಮ ಭಾಷೆಯ ವಿಚಾರಕ್ಕೆ ಬಂದಾಗ ಹಲವು ಬಾರಿ ಹೋರಾಟಕ್ಕೆ ಇಳಿದವರು.

ಅರವತ್ತರಲ್ಲೂ

ರಾಜ್ ಮತ್ತು ರಜನೀಕಾಂತ್ ಅರವತ್ತರ ವಯಸ್ಸಿನಲ್ಲೂ ನಾಯಕನಟನಾಗಿ ನಟಿಸಿದವರು. ಪದ್ಮಭೂಷಣ ರಾಜಕುಮಾರ್ ಅರವತ್ತರ ವಯಸ್ಸಿನ ನಂತರವೂ ನಾಲ್ಕು ಚಿತ್ರದಲ್ಲಿ ನಟಿಸಿದ್ದರು (ಜೀವನಚೈತ್ರ, ಆಕಸ್ಮಿಕ, ಒಡಹುಟ್ಟಿದವರು, ಶಬ್ದವೇಧಿ). ಶಬ್ದವೇಧಿ ಚಿತ್ರದಲ್ಲಿ ನಟಿಸಬೇಕಾದರೆ ರಾಜ್ ಅವರಿಗೆ ಎಪ್ಪತ್ತು ವರ್ಷ. ಇತ್ತ ರಜನೀಕಾಂತ್ ಅರವತ್ತರ ನಂತರ ಎಂಥಿರನ್, ಕೊಚಾಡಿಯನ್ ಮತ್ತು ಲಿಂಗಾ ಹೀಗೆ ಮೂರು ಚಿತ್ರದಲ್ಲಿ ನಟಿಸಿದ್ದಾರೆ.

ಕಲಾಸೇವೆಗಾಗಿ ಜೀವನ

ರಾಜ್ ಮತ್ತು ರಜನಿ ಕುಟುಂಬ ಕಲಾಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟವರು. ರಾಜ್ ಅವರ ಮೂವರು ಪುತ್ರರು ಚಿತ್ರೋದ್ಯಮದಲ್ಲೇ ಬದುಕು ಕಟ್ಟಿಕೊಂಡಿದ್ದರೆ, ರಜನಿ ಪುತ್ರಿ ಸೌಂದರ್ಯ ಮತ್ತು ಅಳಿಯ ಧನುಸ್ ತಮಿಳು ಚಿತ್ರೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅಸಂಖ್ಯಾತ ಅಭಿಮಾನಿಗಳು

ಇಬ್ಬರಿಗೂ ಅಸಂಖ್ಯಾತ ಅಭಿಮಾನಿಗಳಿದ್ದಾರೆ, ಅಭಿಮಾನಿ ಸಂಘಗಳಿವೆ. ಇಬ್ಬರಿಗೂ ಆಧ್ಯಾತ್ಮಿಕ ಮತ್ತು ಯೋಗಗಳಲ್ಲಿ ಬಹಳ ನಂಬಿಕೆ, ಹೆಚ್ಚಿನ ಒಲವು. ರಾಜ್ ತಪ್ಪದೇ ಯೋಗಾಭ್ಯಾಸ ಮಾಡುತ್ತಿದ್ದರು, ರಜನೀಕಾಂತ್ ಹಲವು ಬಾರಿ ಆಧ್ಯಾತ್ಮಿಕದತ್ತ ಒಲವು ತೋರಿ ಹಿಮಾಲಯಕ್ಕೆ ಪಯಣಿಸಿದ್ದೂ ಉಂಟು.

ಇಬ್ಬರೂ ಸೂಪರ್ ಸ್ಟಾರ್ ಗಳು

ಅಣ್ಣಾವ್ರು ಮತ್ತು ರಜನೀಕಾಂತ್ ಇಬ್ಬರೂ ದಕ್ಷಿಣಭಾರತದ ಚಿತ್ರೋದ್ಯಮದ ಸೂಪರ್ ಸ್ಟಾರ್ ಗಳು. ಅಪ್ಪಾಜಿಯವರ ಪಯಣ ಸ್ಯಾಂಡಲ್ ವುಡ್ ನಲ್ಲಾದರೆ, ರಜನೀಕಾಂತ್ ಸಿನಿಪಯಣ ಹೆಚ್ಚಾಗಿ ಕಾಲಿವುಡ್ ನಲ್ಲಿ. ರಾಜ್ ಮತ್ತು ರಜನಿ ಇಬ್ಬರಿಗೂ ಪ್ರತಿಷ್ಟಿತ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.

ಇಬ್ಬರೂ ಸರಳತೆಗೆ ಹೆಸರು

ರಾಜ್ ಮತ್ತು ರಜನೀಕಾಂತ್ ಸರಳತೆಗೆ ಇರುವ ಇನ್ನೊಂದು ಹೆಸರು. ಇಬ್ಬರೂ ಮೇರು ಕಲಾವಿದರು ಅಭಿಮಾನಿಗಳನ್ನು ದೇವರು ಎಂದು ಗೌರವ ನೀಡುವವರು. ರಾಜ್ ಆಗಲಿ ರಜನಿ (ಇದುವರೆಗೆ) ಯಾಗಲಿ ರಾಜಕೀಯದ ಆಸಕ್ತಿ ತೋರಿದವರಲ್ಲ.

English summary
Similarities between Kannada Matinee idol Dr. Rajkumar and Kollywood Super Star Rajinikanth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada