For Quick Alerts
  ALLOW NOTIFICATIONS  
  For Daily Alerts

  ಈ ವಿಚಾರದಲ್ಲಿ ನಿಖಿಲ್ ಕುಮಾರ್-ಶ್ರೀದೇವಿ ಪುತ್ರಿ ಜಾಹ್ನವಿ ಒಂದೇ.!

  By Bharath Kumar
  |

  ಸ್ಯಾಂಡಲ್ ವುಡ್ ನಿಖಿಲ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಅಭಿಮಾನಿ ಬಳಗವನ್ನ ಹುಟ್ಟುಹಾಕಿ, ತನ್ನದೇ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. 'ಜಾಗ್ವಾರ್' ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಮೊದಲ ಚಿತ್ರದಲ್ಲೇ ತಮ್ಮ ಮೇಲಿದ್ದ ನಿರೀಕ್ಷೆಯನ್ನ ಉಳಿಸಿಕೊಂಡರು.

  ಈ ಕಡೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕೂಡ ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಧಡಕ್' ಚಿತ್ರದ ಮೂಲಕ ತಮ್ಮ ಸಿನಿಬದುಕು ಆರಂಭಿಸಿದ್ದಾರೆ. ಮೊದಲ ಸಿನಿಮಾ ಅಷ್ಟಾಗಿ ಯಶಸ್ಸು ಗಳಿಸಿಲ್ಲವಾದರೂ ಅಭಿನಯದಲ್ಲಿ ಜಾಹ್ನವಿ ಎಲ್ಲರಿಗೂ ಇಷ್ಟವಾಗಿದ್ದಾರೆ.

  ಈ ಇಬ್ಬರು ಯುವಕಲಾವಿದರು ತಮ್ಮದೇ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಹೀಗಿರುವಾಗ ನಿಖಿಲ್ ಕುಮಾರ್ ಮತ್ತು ಶ್ರೀದೇವಿ ಪುತ್ರಿಯ ಆರಂಭಿಕ ಜರ್ನಿಯಲ್ಲಿ ಒಂದು ಸಾಮ್ಯತೆ ಕಂಡುಬಂದಿದೆ. ಈ ಒಂದು ವಿಚಾರದಲ್ಲಿ ಇವರಿಬ್ಬರು ಒಂದೇ ಎನಿಸುತ್ತಿದೆ. ಅಷ್ಟಕ್ಕೂ, ಕನ್ನಡದ ನಿಖಿಲ್ ಕುಮಾರ್ ಗೂ ಹಿಂದಿಯ ಜಾಹ್ನವಿ ಕಪೂರ್ ಗೂ ಏನ್ ಸಂಬಂಧ ಎನ್ನಬಹುದು. ಈ ಸ್ಟೋರಿ ಓದಿ ಗೊತ್ತಾಗುತ್ತೆ. ಮುಂದೆ ಓದಿ.....

  ನಿಖಿಲ್ - ಜಾಹ್ನವಿ ಗೆ 'ಗಾಡ್ ಫಾದರ್' ಪೋಷಕರೇ

  ನಿಖಿಲ್ - ಜಾಹ್ನವಿ ಗೆ 'ಗಾಡ್ ಫಾದರ್' ಪೋಷಕರೇ

  ನಟ ನಿಖಿಲ್ ಕುಮಾರ್ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ. ಸಿನಿಮಾ ವಿಷ್ಯಕ್ಕೆ ಬಂದ್ರೆ ಕುಮಾರಸ್ವಾಮಿ ಖ್ಯಾತ ನಿರ್ಮಾಪಕ ಹಾಗೂ ವಿತರಕ. ಮಗನ ವಿಚಾರದಲ್ಲಿ ಕುಮಾರಸ್ವಾಮಿ ಅವರೇ ಅಂತಿಮ. ಪ್ರತಿಯೊಂದು ಸಿನಿಮಾವನ್ನ ತಂದೆಯ ಜೊತೆಯಲ್ಲಿ ಚರ್ಚಿಸಿ ನಿರ್ಧರಿಸುತ್ತಾರೆ. ಈ ಕಡೆ ಜಾಹ್ನವಿ ಕಪೂರ್ ಗೆ ಅಮ್ಮ ಶ್ರೀದೇವಿಯೇ ಎಲ್ಲವಾಗಿದ್ದರು. ಹಲವು ಆಫರ್ ಗಳಿದ್ದರೂ 'ಧಡಕ್' ಸಿನಿಮಾವನ್ನ ಆಯ್ಕೆ ಮಾಡಿಕೊಂಡಿದ್ದೇ ಶ್ರೀದೇವಿ. ಆದ್ರೆ, ಶ್ರೀದೇವಿ ಈಗಿಲ್ಲ. ಈಗ ಆ ಸ್ಥಾನದಲ್ಲಿ ಜಾಹ್ನವಿ ತಂದೆ ಬೋನಿ ಕಪೂರ್ ಇದ್ದಾರೆ. ಹೀಗಾಗಿ, ಇವರಿಬ್ಬರಿಗೂ ಗಾಡ್ ಫಾದರ್ ಪೋಷಕರೇ.

  ಎರಡನೇ ಚಿತ್ರವೇ ಐತಿಹಾಸಿಕ-ಪೌರಾಣಿಕ

  ಎರಡನೇ ಚಿತ್ರವೇ ಐತಿಹಾಸಿಕ-ಪೌರಾಣಿಕ

  ಜಾಗ್ವಾರ್ ನಂತರ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿಮನ್ಯು ಪಾತ್ರ ಮಾಡಿರುವ ನಿಖಿಲ್ ಕುಮಾರ್ ಎರಡನೇ ಸಿನಿಮಾದಲ್ಲೇ ಪೌರಾಣಿಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಡೆ ಜಾಹ್ನವಿ ಕಪೂರ್ ಕೂಡ 'ಧಡಕ್' ನಂತರ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹುಶಃ ಎರಡನೇ ಚಿತ್ರದಲ್ಲಿ ಇಂತಹ ಪಾತ್ರಗಳು ಸಿಗುವುದು ಅಪರೂಪ ಮತ್ತು ಅದೃಷ್ಟ ಕೂಡ ಹೌದು.

  ಎರಡನೇ ಚಿತ್ರದಲ್ಲೇ ಐತಿಹಾಸಿಕ ಪಾತ್ರ ಮಾಡಲಿದ್ದಾರೆ ಜಾಹ್ನವಿ ಕಪೂರ್ಎರಡನೇ ಚಿತ್ರದಲ್ಲೇ ಐತಿಹಾಸಿಕ ಪಾತ್ರ ಮಾಡಲಿದ್ದಾರೆ ಜಾಹ್ನವಿ ಕಪೂರ್

  ಜಾಹ್ನವಿ ಸಿನಿಮಾ ಯಾವುದು.?

  ಜಾಹ್ನವಿ ಸಿನಿಮಾ ಯಾವುದು.?

  ಅಂದ್ಹಾಗೆ, ಜಾಹ್ನವಿ ಕಪೂರ್ ಅಭಿನಯಿಸುತ್ತಿರುವ ಐತಿಹಾಸಿಕ ಚಿತ್ರ 'ತಖ್ತ್'. ಕರಣ್ ಜೋಹರ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಔರಂಗಜೇಬನ ಕುರಿತು ತಯಾರಾಗುತ್ತಿದೆಯಂತೆ. ಈ ಚಿತ್ರದಲ್ಲಿ ರಣ್ವೀರ್ ಸಿಂಗ್, ಕರೀನಾ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಲ್ ಜೊತೆ ಜಾಹ್ನವಿ ಕೂಡ ಇರಲಿದ್ದಾರೆ.

  ಎರಡನೇ ಚಿತ್ರದಲ್ಲೇ ಐತಿಹಾಸಿಕ ಪಾತ್ರ ಮಾಡಲಿದ್ದಾರೆ ಜಾಹ್ನವಿ ಕಪೂರ್ಎರಡನೇ ಚಿತ್ರದಲ್ಲೇ ಐತಿಹಾಸಿಕ ಪಾತ್ರ ಮಾಡಲಿದ್ದಾರೆ ಜಾಹ್ನವಿ ಕಪೂರ್

  ಇದು ಆದರೂ ಅಚ್ಚರಿಯಿಲ್ಲ

  ಇದು ಆದರೂ ಅಚ್ಚರಿಯಿಲ್ಲ

  ನಿಖಿಲ್ ಮೊದಲ ಸಿನಿಮಾ 'ಜಾಗ್ವಾರ್' ತೆಲುಗು ಮತ್ತು ಕನ್ನಡದಲ್ಲಿ ಸಿದ್ಧವಾಗಿತ್ತು. ಬಹುಶಃ ಮುಂದಿನ ದಿನದಲ್ಲಿ ನಿಖಿಲ್ ಜರ್ನಿ ಬಾಲಿವುಡ್ ಗೆ ಹೋದರು ಅಚ್ಚರಿಯಿಲ್ಲ. ಈ ಕಡೆ ಶ್ರೀದೇವಿ ಪುತ್ರಿಗೆ ದಕ್ಷಿಣ ಭಾರತದಲ್ಲಿ ಹೆಚ್ಚು ಆಫರ್ ಇದೆ. ಮುಂದಿನ ದಿನದಲ್ಲಿ ಸೌತ್ ಕಡೆ ಜಾಹ್ನವಿ ಬಂದರೂ ಅಚ್ಚರಿಯಿಲ್ಲ. ಅದರಲ್ಲೂ ಕನ್ನಡ ಸಿನಿಮಾ ಮಾಡಿದ್ರೆ, ಅದಕ್ಕಿಂತ ಖುಷಿ ಇನ್ನೊಂದಿಲ್ಲ.

  English summary
  Similarities between karnataka chief minister hd kumaraswamy son nikhil kumar and Evergreen Actress sridevi daughter jhanvi kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X