ರಜನಿಯ 'ಕಾಲಾ' ಮತ್ತು ಜಗ್ಗೇಶ್ '8MM'ಗೂ ಒಂದು ನಂಟಿದೆ
ನವರಸ ನಾಯಕ ಜಗ್ಗೇಶ್ ಒಂದು ಕಾಲದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿ ಆಗಿದ್ದರು. ರಜನಿ ಯಾವಾಗ ಕಾವೇರಿ ವಿಚಾರವಾಗಿ ಮಾತನಾಡಿದ್ರೋ ಆಗ ನಾನು ಕನ್ನಡ ತಾಯಿಯ ಅಭಿಮಾನಿ ಎನ್ನುತ್ತಾ ರಜನಿ ಮುಖ ನೋಡಲು ಬೇಸರ ಪಟ್ಟುಕೊಳ್ಳುವಂತಾದ್ರು.
ಸದ್ಯ ವಿಷ್ಯ ಏನಪ್ಪಾ ಅಂದ್ರೆ ರಜನಿ ಅಭಿನಯದ 'ಕಾಲಾ' ಸಿನಿಮಾಗೂ ನವರಸ ನಾಯಕ ಆಕ್ಟ್ ಮಾಡಿರುವ '8 ಎಂಎಂ' ಚಿತ್ರಕ್ಕೂ ಭಾರಿ ನಂಟಿದೆ ಎನ್ನುತಿದೆ ಗಾಂಧಿನಗರ. ಕೇವಲ ಸ್ಟೈಲ್ ನಿಂದ ಸಿನಿಮಾ ಪ್ರಖ್ಯಾತಿಗಳಿಸೊಲ್ಲ. ಸೈಲೆಂಟಾಗಿ ಆಕ್ಟಿಂಗ್ ಮಾಡಿನೂ ಸೂಪರ್ ಹಿಟ್ ಆಗಬಹುದು ಎಂದು ರಜನಿ ವೃತ್ತಿ ಜೀವನದಲ್ಲಿ ತೋರಿಸಿಕೊಟ್ಟಂತ ಚಿತ್ರ 'ಕಾಲಾ'
ಈಗ ಅದೇ ಸ್ಟೈಲ್ ಗೆಟಪ್ ನಲ್ಲಿ ವೃತ್ತಿ ಜೀವನದಲ್ಲಿಯೇ ಬಿಗ್ ಚೇಂಜ್ ಓವರ್ ನೊಂದಿಗೆ ಅಭಿಮಾನಿಗಳ ಮುಂದೆ ಬರಲು ಮುಂದಾಗಿದ್ದಾರೆ ನಟ ಜಗ್ಗೇಶ್. ನೀರ್ದೋಸೆ ಚಿತ್ರದ ಬಳಿಕ ಪ್ರಯೋಗಗಳಿಗೆ ಮನಸ್ಸು ಮಾಡಿರುವ ಜಗ್ಗೇಶ್ 8 ಎಂಎಂ ಚಿತ್ರದಲ್ಲಿ ಖಳನಟನಾಗಿ ಮಿಂಚಲು ಹೊರಟಿದ್ದಾರೆ.

ಜಗ್ಗೇಶ್ ಗೆಟಪ್, ಸ್ಟೈಲ್, ಲುಕ್ ಎಲ್ಲವೂ ಗಮನ ಸೆಳೆಯುತ್ತಿದೆ. ಅಂದ್ಹಾಗೆ, ಇಲ್ಲಿ ರಜನಿಕಾಂತ್ ಅಭಿನಯದ ಕಾಲಾಗೂ ಮತ್ತು ಜಗ್ಗೇಶ್ 8 ಎಂಎಂಗೂ ಒಂದು ಸಂಬಂಧವಿದೆ. ಅದೇನಪ್ಪಾ ಅಂದ್ರೆ, ಈ ಎರಡು ಚಿತ್ರದ ಟೈಟಲ್ ಕಾರ್ಡ್ ಒಂದೇ ರೀತಿ ಇದೆ.
ಕೆಂಪು ಬಣ್ಣದಲ್ಲಿ ಮೂಡಿಬಂದಿದ್ದ ಕಾಲಾ ಟೈಟಲ್ ನಂತೆ 8 ಎಂಎಂ ಟೈಟಲ್ ರೂಪುಗೊಂಡಿದೆ. ಅಲ್ಲಿ ಟೈಟಲ್ ಪಕ್ಕದಲ್ಲೇ ರಜನಿಕಾಂತ್ ಮುಖವಿತ್ತು. ಇಲ್ಲಿಯೂ ಟೈಟಲ್ ಪಕ್ಕದಲ್ಲೇ ಜಗ್ಗೇಶ್ ಮುಖವಿದೆ.

ಇತ್ತೀಚಿಗಷ್ಟೆ 8ಎಂಎಂ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಆಡಿಯೋ ಬಿಡುಗಡೆ ಮಾಡಿರುವ ಈ ಸಿನಿಮಾ ರಿಲೀಸ್ ಗೆ ಸಜ್ಜಾಗಿದೆ. ಜಗ್ಗೇಶ್, ವಸಿಷ್ಠ ಮಯೂರಿ, ಆದಿ ಲೋಕೇಶ್, ರಾಕ್‌ಲೈನ್ ವೆಂಕಟೇಶ್ ಮುಖ್ಯಭೂಮಿಕೆಯಲ್ಲಿರೋ ಈ ಸಿನಿಮಾವನ್ನ ಹರಿಕೃಷ್ಣ ಎಸ್ ನಿರ್ದೇಶನ ಮಾಡಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಸಿದ್ದಾರೆ.


Click it and Unblock the Notifications











