'ಸಿಂಪಲ್ ಸ್ಟೋರಿ'ಗೆ 10 ವರ್ಷ: "ಸ್ವರ್ಗ ರಫ್ ಅಂತ ಪಾಸಾಯ್ತು" ಡೈಲಾಗ್ ಕೇಳಿ ಥಿಯೇಟರ್‌ಗೆ ನುಗ್ಗಿದ್ದ ಪ್ರೇಕ್ಷಕರು

ಒಂದೇ ಒಂದು ಡೈಲಾಗ್ ಕೇಳಿ ಪ್ರೇಕ್ಷಕರು ಸಿನಿಮಾ ನೋಡ್ಲೇಬೇಕು ಎಂತ ಡಿಸೈಡ್ ಮಾಡಿದ ಸಿನಿಮಾ ಯಾವ್ದಾದ್ರು ಇದ್ರೇ ಅದು ಇದೇ ಅನ್ಸತ್ತೆ. 10 ವರ್ಷಗಳ ಹಿಂದೆ ಸುನಿ 'ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ' ಎನ್ನುವ ಸಿನಿಮಾ ಕಟ್ಟಿಕೊಟ್ಟಿದ್ದರು. ಬಹುತೇಕ ಎರಡೇ ಪಾತ್ರಗಳ ಸುತ್ತಾ ಸುತ್ತುವ ಸಿನಿಮಾ ಇದು. ರಕ್ಷಿತ್ ಶೆಟ್ಟಿ- ಶ್ವೇತಾ ಶ್ರೀವಾತ್ಸವ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಕಡಿಮೆ ಬಜೆಟ್ ಸಿನಿಮಾ ಗೆದ್ದಿತ್ತು.

ಯಾವುದೇ ನಿರೀಕ್ಷೆ ಇಲ್ಲದೇ ಬರೀ ಪ್ರೋಮೊದಲ್ಲಿದ್ದ ಡೈಲಾಗ್‌ ಕೇಳಿ ಈ ಸಿನಿಮಾ ನೋಡೋಕೆ ಪ್ರೇಕ್ಷಕರು ಮುಂದಾಗಿದ್ದರು. ಅದಕ್ಕೆ ಸೊಗಸಾದ ಸಾಂಗ್ಸ್ ಬಲ ಕೂಡ ಸಿಕ್ಕಿತ್ತು. ಬಜೆಟ್ ಇಲ್ಲ ಕಡಿಮೆ ಬಜೆಟ್‌ನಲ್ಲಿ ಒಂದು ಸಿನಿಮಾ ಮಾಡೋಣ ಅಂತ ಸುನಿ ಈ ರೀತಿ 2 ಪಾತ್ರ ಇಟ್ಟುಕೊಂಡು ಸಿನಿಮಾ ಮಾಡುವ ಐಡಿಯಾ ಮಾಡಿದ್ದರು. ಆ ಐಡಿಯಾ ವರ್ಕೌಟ್‌ ಆಗಿತ್ತು. ಸಿನಿಮಾ ಸೂಪರ್ ಹಿಟ್ ಆಯಿತು. ಬಿ, ಸಿ ಸೆಂಟರ್‌ಗಳಲ್ಲಿ ಸಿನಿಮಾ ಸದ್ದು ಮಾಡದಿದ್ದರೂ ಎ ಸೆಂಟರ್‌ಗಳಲ್ಲಿ ಒಳ್ಳೆ ಕಮಾಯಿ ಮಾಡಿತ್ತು.

Simple Agi Ondh Love Story Movie Completes 10 Years; Know Interesting Facts about the Movie

2013 ಮಾರ್ಚ್ 8ಕ್ಕೆ 'ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ' ಸಿನಿಮಾ ರಿಲೀಸ್ ಆಗಿತ್ತು. ಇದು ನಾಯಕ ಕುಶಾಲ್ ಮತ್ತು ನಾಯಕಿ ಖುಷಿ ನಡುವಿನ ಕಥೆ. ಇಬ್ಬರೂ ಅಚಾನಕ್‌ ಆಗಿ ಸಿಕ್ಕಿ ತಮ್ಮ ತಮ್ಮ ಹಳೇ ಲವ್ ಸ್ಟೋರಿ ಹೇಳುತ್ತಾ ಹೋಗುತ್ತಾರೆ. ಖುಷಿ ನನ್ನ ಲವರ್ ಎಂದು ಕಲ್ಪಿಸಿಕೊಂಡು ಕುಶಾಲ್ ತನ್ನ ಹಳೇ ಲವ್ ಸ್ಟೋರಿ ಹೇಳಿದರೆ, ಖುಷಿ ಕೂಡ ತನ್ನ ಹಳೇ ಲವ್ ಸ್ಟೋರಿ ಹೇಳ್ತಾಳೆ. ಆದರೆ ಅಲ್ಲೂ ಕಾಣೋದು ಇದೇ ಕುಶಾಲ್. ತಮ್ಮ ತಮ್ಮ ಲವ್ ಸ್ಟೋರಿ ಹೇಳುತ್ತಾ ಇಬ್ಬರು ಹತ್ತಿರ ಆಗ್ತಾರೆ. ಪ್ರಪೋಸ್ ಕೂಡ ಮಾಡ್ತಾರೆ.

ಇನ್ನೇನು ಲವ್ ಸ್ಟೋರಿ ಸುಖಾಂತ್ಯ ಆಯ್ತು ಎನ್ನುವಾಗಲೇ ನಾಯಕಿ ಖುಷಿಗೆ ಅಪರೂಪದ ಮರೆವಿನ ಕಾಯಿಲೆ ಇರೋದು ಗೊತ್ತಾಗುತ್ತೆ. ಅಲ್ಲಿಂದ ಮುಂದೆ ಸಿನಿಮಾ ಹೊಸ ತಿರುವು ಪಡೆದುಕೊಂಡು ಸಾಗುತ್ತೆ. ನಿರ್ದೇಶಕ ಸುನಿ ಮೊದಲ ಪ್ರಯತ್ನದಲ್ಲೇ ವಿಭಿನ್ನ ಕಥೆ ಹೇಳಿ ಗೆದ್ದಿದ್ದರು. ಸಿನಿಮಾ ರಿಲೀಸ್‌ಗೂ ಮುನ್ನ 8 ನಿಮಿಷ ಸ್ಪೆಷಲ್ ಪ್ರೋಮೊ ರಿಲೀಸ್ ಮಾಡಿದ್ದರು. ಅದರಲ್ಲಿದ್ದ ಡೈಲಾಗ್‌ಗಳು ನಗುವಿನ ಕಚಗುಳಿ ಕೊಟ್ಟಿತ್ತು. ಅದ್ರಲ್ಲೂ ಕೊನೆಗೆ ಬರುವ 'ಸ್ವರ್ಗ ರಫ್ ಅಂತ ಪಾಸಾಯ್ತು' ಕೊಂಚ ಜೋರಾಗೇ ಸದ್ದು ಮಾಡಿತ್ತು.

Simple Agi Ondh Love Story Movie Completes 10 Years; Know Interesting Facts about the Movie

ಪಡ್ಡೆ ಹುಡುಗರಿಗೆ ಈ ಡೈಲಾಗ್ ಸಖತ್ ಮಜಾ ಎನಿಸಿತ್ತು. ಚಿತ್ರದಲ್ಲಿ ಇಂತದ್ದೇ ಇನ್ನಷ್ಟು ಡೈಲಾಗ್‌ಗಳಿರುತ್ತವೆ ಎಂದು ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ಮೆಲ್ನೋಟಕ್ಕೆ ಡಬಲ್ ಮೀನಿಂಗ್ ಅನ್ನಿಸಿದರೂ ತೀರ ಮುಜುಗರ ಉಂಟು ಮಾಡದಂತಹ ವಿಚಿತ್ರ ಸ್ಟೈಲ್‌ ಡೈಲಾಗ್‌ಗಳವು. ಒಟ್ನಲ್ಲಿ ಕನ್ನಡದಲ್ಲಿ 'ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ' ಹೊಸ ಟ್ರೆಂಡ್ ಹುಟ್ಟಾಕ್ಕಿದ್ದು ಸುಳ್ಳಲ್ಲ. ಸಣ್ಣ ಪುಟ್ಟ ತಪ್ಪುಗಳನ್ನೆಲ್ಲಾ ಸುನಿ ಬರೀ ಡೈಲಾಗ್ಸ್ ಮತ್ತು ಹಾಡುಗಳಲ್ಲಿ ಬ್ಯಾಲೆನ್ಸ್ ಮಾಡಿಬಿಟ್ಟಿದ್ದರು. ಇನ್ನು ರಕ್ಷಿತ್, ಶ್ವೇತಾ ಪರ್ಫಾರ್ಮೆನ್ಸ್ ಕೂಡ ತೆರೆಮೇಲೆ ಜಾದೂ ಮಾಡಿತ್ತು.

'ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ' ಸಿನಿಮಾ 10 ವರ್ಷ ಪೂರೈಸಿರುವ ಸಂದರ್ಭದಲ್ಲಿ ನಿರ್ದೇಶಕ ಸಿಂಪಲ್ ಸುನಿ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. ಒಂದು ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡಲು ಕಥೆ ರೆಡಿ ಮಾಡಿಕೊಂಡಿದ್ದ ನಿರ್ದೇಶಕ ಸುನಿ ಕೊನೆಗೆ ನಿರ್ಮಾಪಕರು ಸಿಗದೇ ಚಿಕ್ಕ ಸಿನಿಮಾ ಮಾಡಲು ಹೊರಟರಂತೆ. 3 ಕೋಟಿ ಬಂಡವಾಳ ಹಾಕ್ತೀನಿ ಎಂದು ಬಂದ ನಿರ್ಮಾಪಕರು ಕೊನೆಗೆ 50 ಲಕ್ಷಕ್ಕೆ ಸಿನಿಮಾ ಮಾಡೋಣ ಎಂದರಂತೆ. 50 ಲಕ್ಷ ಆದರೆ ನಾವೇ ಮಾಡೋಣ ಎಂದು ಸುನಿ ಸ್ನೇಹಿತರ ಜೊತೆ ಸೇರಿ ಸಿನಿಮಾ ನಿರ್ಮಾಣ ಮಾಡಿದರು.

ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಹೇಗೆ ಅಂದಾಗ ಹುಟ್ಟಿಕೊಂಡಿದ್ದು 2 ಪಾತ್ರಗಳ 'ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ' ಕಥೆ. ಮೊದಲಿಗೆ 2 ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ಸಾಧ್ಯಾನಾ? ಎನ್ನುವ ಪ್ರಶ್ನೆ ಬಂದಾಗ 2 ದಿನಗಳ ಕಾಲ ಹೀಗೆ ನಾಯಕ- ನಾಯಕಿ ಸಂಭಾಷಣೆಯ ದೃಶ್ಯಗಳನ್ನು ಶೂಟ್ ಮಾಡಿದ್ದರಂತೆ. ಅಲ್ಲಿವರೆಗೂ ಕಥೆ ಕವನ ಬರೀತಿದ್ದ ಸುನಿ ತಾವೇ ಸಂಭಾಷಣೆ ಬರೆಯುವಂತಾಯಿತು. ಹಾಗಾಗಿ ಪ್ರತಿ ಡೈಲಾಗ್‌ನಲ್ಲೂ ಪಂಚ್ ಇರುವಂತೆ ಬರೆದರು. ಪ್ರೋಮೊ ರಿಲೀಸ್ ಆಗಿ ಹಿಟ್ ಆಯಿತು. ಮುಂದೆ ಪ್ರೇಕ್ಷಕರು ಸಿನಿಮಾ ನೋಡಿ ಗೆಲ್ಲಿಸಿದರು.

40 ಲಕ್ಷ ಎಂದು ಪ್ಲ್ಯಾನ್ ಮಾಡಿದ ಸಿನಿಮಾ ಫೈನಲ್ ಕಾಪಿ ಕೈಗೆ ಬರುವಷ್ಟರಲ್ಲಿ 62 ಲಕ್ಷ ರೂ. ಖರ್ಚಾಗಿತ್ತಂತೆ. ಇನ್ನು ಪ್ರಮೋಷನ್ ಎಲ್ಲಾ ಸೇರಿ 1.20 ಕೋಟಿ ರೂ.ವರೆಗೆ ಖಾಲಿ ಆಗಿತ್ತು ಎಂದು ಸುನಿ ಹೇಳುತ್ತಾರೆ. ಒಂದು ಅಂದಾಜಿನ ಪ್ರಕಾರ ಸಿನಿಮಾ 10 ಕೋಟಿಗೂ ಬ್ಯುಸಿನೆಸ್ ಮಾಡಿತ್ತು ಎನ್ನಲಾಗುತ್ತದೆ. ಇನ್ನುಆ ಸಿನಿಮಾ ಮೂಲಕ ಸುನೀಲ್ ಕುಮಾರ್ ಸಿಂಪಲ್ ಸುನಿ ಆದರು. ರಕ್ಷಿತ್ ಶೆಟ್ಟಿ ಸಿಂಪಲ್ ಸ್ಟಾರ್ ಆಗಿಬಿಟ್ಟರು. ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕರಿಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. ನಿರ್ದೇಶಕ ಸುನಿ ನನಗೆ ಈ ಸಿನಿಮಾ ಮರುಹುಟ್ಟು ಕೊಡ್ತು ಎಂದು ಹೇಳುತ್ತಾರೆ.

ಸುನಿ ಟ್ವೀಟ್ ಮಾಡಿ "2013 ಮಾರ್ಚ್ 8ರಂದು "ಇಂದಿನಿಂದ" ಎಂದು ಬರೆದು 10 ವರ್ಷಗಳು ಕಳೆದಿವೆ. ಆ ಗೆಲುವಿಗೆ ಕಾರಣರಾದ ನಿರ್ಮಾಪಕರಿಗೂ ಕಲಾವಿದರಿಗೂ ತಾಂತ್ರಿಕವರ್ಗದವರಿಗೂ ಹಾಗೂ ಹೊಸಬರನ್ನು ನಿಮ್ಮನೆಯವರಂತೆ ನೋಡಿದ ನಿಮ್ಮೆಲ್ಲರಿಗೂ ನನ್ನ ಹೃದಯದಾಳದ ವಂದನೆಗಳು" ಬರೆದುಕೊಂಡಿದ್ದಾರೆ. ಇನ್ನು ನಟ ರಕ್ಷಿತ್ ಶೆಟ್ಟಿ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಸುನಿ ಮತ್ತವರ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

More from Filmibeat

English summary
Simple Agi Ondh Love Story Movie Completes 10 Years; Know Interesting Facts about the Movie. Rakshit Shetty and suni thanked audience for their support and love. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X