ರಕ್ಷಿತ್ ಶೆಟ್ಟಿ ಮದುವೆಯಂತೆ ಹೌದಾ..! ಏನಂತಾರೆ ಸಿಂಪಲ್ ಸ್ಟಾರ್?

ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ಹೊಂಬಾಳೆ ಫಿಲಂಮ್ಸ್ ನಲ್ಲಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ದೊಡ್ಡ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುತ್ತಿರುವ ರಕ್ಷಿತ್ ನಾಯಕನಾಗಿ ಕಾಣಿಸಿಕೊಳ್ಳುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಜುಲೈ 11ರಂದು ಸಿನಿಮಾದ ಟೈಟಲ್ ಘೋಷಣೆ ಮಾಡಲಾಗಿದ್ದು, ಚಿತ್ರಕ್ಕೆ ರಿಚರ್ಡ್ ಆಂಟನಿ ಎಂದು ಟೈಟಲ್ ಇಡಲಾಗಿದೆ.

ಹೊಸ ಸಿನಿಮಾ ಅನೌನ್ಸ್ ಮಾಡಿದ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ್ದ ರಕ್ಷಿತ್ ಶೆಟ್ಟಿ, ಖಾಸಗಿ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ಮಾಡಿದ ಒಂದಿಷ್ಟು ಆರೋಪಗಳಿಗೆ ಸ್ಪಷ್ಟನೆ ನೀಡಿದ್ರು. ರಕ್ಷಿತ್ ರಿಂದ ನಿರ್ಮಾಪಕ ಪುಷ್ಕರ್‌ಗೆ ನಷ್ಟ ಆಗಿದೆ ಎನ್ನುವ ಆರೋಪದ ಬಗ್ಗೆ ಮಾತನಾಡಿದ ಸಿಂಪಲ್ ಸ್ಟಾರ್, ನಿರ್ಮಾಪಕ ಪುಷ್ಕರ್ ಮತ್ತು ತನ್ನ ನಡುವಿನ ಸ್ನೇಹ ಮತ್ತು ವ್ಯವಹಾರದ ಬಗ್ಗೆಯೂ ಎಳೆ ಎಳೆಯಾಗಿ ಬಿಚ್ಚಿಟ್ಟರು.

ತನ್ನಿಂದ ಯಾವುದೇ ನಷ್ಟವಾಗಿಲ್ಲ ಎಂದಿರುವ ರಕ್ಷಿತ್, "ಸಿನಿಮಾ ಓಡಿಲ್ಲ ಎಂದ ಮಾತ್ರಕ್ಕೆ ಚಿತ್ರದ ಬಗ್ಗೆ 'ಲೂಸ್ ಟಾಕ್' ಮಾಡುತ್ತಾನೆ ಎಂದರೆ ಆತ ಸಿನಿಮಾವನ್ನು ಪ್ರೀತಿಸಿಲ್ಲ ಎಂದು ಅರ್ಥ" ಎಂದು ಹೇಳುವ ಮೂಲಕ ಪುಷ್ಕರ್ ವಿರುದ್ಧ ಅಸಮಾಧಾನ ಹೊರಹಾಕಿದ್ರು.

 Simple Star Rakshit Shetty reaction about his marriage rumours

ಇದೇ ಸಮಯದಲ್ಲಿ ಮಾಧ್ಯಮದವರು ಮದುವೆ ವಿಚಾರದ ಕುರಿತು ಪ್ರಶ್ನೆ ಮಾಡಿದ್ರು. ಇದಕ್ಕೆ ನಗುತ್ತಲೇ ಉತ್ತರಿಸಿದ ರಕ್ಷಿತ್, "ಮದುವೆ ವಿಷಯನಾ? ಯಾರನ್ನ ಮದುವೆ ಆಗ್ತೀನಂತೆ ನಾನು?" ಎಂದರು. "ನನ್ನ ಮದುವೆ ವಿಷಯ ನನಗೆ ಇನ್ನು ಗೊತ್ತಿಲ್ಲ" ಎಂದು ಉತ್ತರಿಸುವ ಮೂಲಕ ಮದುವೆ ಪ್ರಶ್ನೆಯಿಂದ ನಾಜೂಕಾಗಿ ಜಾರಿಕೊಂಡರು.

ರಕ್ಷಿತ್ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಿರುತ್ತೆ. ಈ ಹಿಂದೆಯೂ ಪ್ರಶ್ನೆ ಕೇಳಿದ್ದಕ್ಕೆ ಮೊದಲು ಮನೆ ಕಟ್ಟಬೇಕು ಬಳಿಕ ಮದುವೆ ವಿಚಾರ ಎಂದಿದ್ದರು. ಇದೀಗ ಮತ್ತೆ ಮದುವೆ ಪ್ರಶ್ನೆಯಿಂದ ಜಾರಿಕೊಂಡಿದ್ದಾರೆ. ರಕ್ಷಿತ್ ಮದುವೆ ಯಾವಾಗ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ರಕ್ಷಿತ್ ಸದ್ಯ ಚಾರ್ಲಿ, ಸಪ್ತಸಾಗರದಾಚೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚಾರ್ಲಿ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಟೀಸರ್‌ಗೆ ಅದ್ಭುತವಾದ ಪ್ರತಿಕ್ರಿಯೆ ಬಂದಿದೆ ಎಂದಿರುವ ರಕ್ಷಿತ್, ಇದುವರೆಗೂ ಸುಮಾರು 40ಕ್ಕೂ ಅಧಿಕ ಮಂದಿಗೆ ಸಿನಿಮಾ ತೋರಿಸಿದ್ದೇವೆ, ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಚಿತ್ರದ ಮೇಲೆ ನಿರೀಕ್ಷೆ ಜಾಸ್ತಿ ಇದೆ ಎಂದರು. ಮುಂದಿನ ವರ್ಷದಿಂದ ರಿಚರ್ಡ್ ಆಂಟನಿ ಸಿನಿಮಾ ಪ್ರಾರಂಭವಾಲಿದೆ ಎಂದು ರಕ್ಷಿತ್ ತನ್ನ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ರು.

More from Filmibeat

English summary
Simple Star Rakshit Shetty reaction about his marriage rumours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X