ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಸಿಂಪಲ್ ಸುನಿ
ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೋವಿಡ್ ಕಾರಣದಿಂದ ಪ್ರತಿವರ್ಷದಂತೆ ಈ ವರ್ಷ ಬರ್ತಡೇ ಸೆಲೆಬ್ರೆಷನ್ ಇಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ಮಳೆ ಹುಡುಗನ ಜನುಮದಿನದ ಸಂಭ್ರಮ ಜೋರಾಗಿಯೇ ಇದೆ. ಮತ್ತೊಂದೆಡೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರಗಳು ಟೀಸರ್, ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿವೆ.
ಯೋಗರಾಜ್ ಭಟ್ ಜೊತೆಗಿನ 'ಗಾಳಿಪಟ-2' ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಿದೆ. 'ತ್ರಿಬಲ್ ರೈಡಿಂಗ್' ಸಿನಿಮಾ ಟೀಸರ್ ರಿಲೀಸ್ ಮಾಡುವ ಸಾಧ್ಯತೆ ಇದೆ. ಇದರ ಜೊತೆ 'ಸಖತ್' ಸಿನಿಮಾನೂ ಟೀಸರ್ ಬಿಡುಗಡೆ ಮಾಡಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ನಿರ್ದೇಶಕ ಸುನಿ ಟೀಸರ್ ಇಲ್ಲ ಎಂದು ನಿರಾಸೆ ಮೂಡಿಸಿದ್ದಾರೆ. ಮುಂದೆ ಓದಿ...

ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಸುನಿ
''ಗೋಲ್ಡನ್ ಸ್ಟಾರ್ ಗಣೇಶ್ ರವರ ಗಾಳಿಪಟ-2 ಮೋಷನ್ ಪೋಸ್ಟರ್ ಹಾಗೂ ತ್ರಿಬಲ್ ರೈಡಿಂಗ್ ಚಿತ್ರದ ಟೀಸರ್ ಕೂಡ ಆನಂದ್ ಆಡಿಯೋದಲ್ಲೇ ಬಿಡುಗಡೆಯಾಗಲಿದ್ದು,ನಮ್ಮ ಸಖತ್ ಚಿತ್ರವು ಅದೇ ಆಡಿಯೋದಿಂದ ಹೊರಬರುವುದರಿಂದ ಯೂಟ್ಯೂಬ್ ಕಲಹ ತಪ್ಪಿಸಲು, ಸಖತ್ ಚಿತ್ರದ ಟೀಸರ್ ಅನ್ನು ಸ್ವಲ್ಪ ದಿನಗಳ ಕಾಲ ಮುಂದೂಡಲಾಗಿದೆ. ಅಭಿಮಾನಿಗಳಲ್ಲಿ ಕ್ಷಮೆ ಕೋರಿಕೆ'' ಎಂದು ಸುನಿ ಟ್ವೀಟ್ ಮಾಡಿದ್ದಾರೆ.

'ಸಖತ್' ಪೋಸ್ಟರ್ ರಿಲೀಸ್
ಸಿಂಪಲ್ ಸುನಿ ಮತ್ತು ನಟ ಗಣೇಶ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಖತ್ ಸಿನಿಮಾದ ಬರ್ತಡೇ ಪೋಸ್ಟರ್ ಬಿಡುಗಡೆಯಾಗಿದೆ. ಸದ್ಯಕ್ಕೆ ಪೋಸ್ಟರ್ ಮಾತ್ರ ಎಂದು ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದಾರೆ ನಿರ್ದೇಶಕ ಸುನಿ.

'ದಿ ಸ್ಟೋರಿ ಆಫ್ ರಾಯಗಢ' ಪೋಸ್ಟರ್
ಸಖತ್ ಸಿನಿಮಾದ ಟೀಸರ್ ಇಲ್ಲ ಎಂದು ನಿರಾಸೆ ಮೂಡಿಸಿದ ಸುನಿ, ಗಣೇಶ್ ಜೊತೆ ಮಾಡುತ್ತಿರುವ ಮತ್ತೊಂದು ಚಿತ್ರದ ಪೋಸ್ಟರ್ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. 'ದಿ ಸ್ಟೋರಿ ಆಫ್ ರಾಯಗಢ' ಚಿತ್ರದ ಪೋಸ್ಟರ್ ಅನ್ನು ನಾಳೆ (ಜುಲೈ -2) ರಾತ್ರಿ 11;59 ಕ್ಕೆ ಬಿಡುಗಡೆ ಮಾಡಲಾಗುವುದು...ಎಂದಿನಂತೆ ಜೊತೆಗಿರಿ...ಇಚ್ಛಿಸಿ.. ಹಂಚಿ.. ಹರಸಿ'' ಎಂದು ಸುನಿ ನಿನ್ನೆ ಪೋಸ್ಟ್ ಮಾಡಿದ್ದರು.
Recommended Video

ಹುಟ್ಟುಹಬ್ಬಕ್ಕೆ ಶುಭಕೋರಿದ ಸುನಿ
''ಸಿನಿಮಾ ರೈತರು ಕಾದ ಮಳೆ.. ಹೊನ್ನಿನ ನಕ್ಷತ್ರದ ಬೆಳೆ .. ಚೆಲುವಿನ ಹೂ ನ ಪಕಳೆ.. ಕರ್ನಾಟಕದ ಮಾತಿನ ಕಹಳೆ.. ನಟ ಗಣೇಶ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು .. ಸಖತ್ತಾಗಿರಲಿ ನಿಮ್ಮ ಜೀವನ'' ಎಂದು ಸುನಿ ಬರ್ತಡೇಗೆ ಶುಭ ಕೋರಿದ್ದಾರೆ.(ಚಿತ್ರಕೃಪೆ: KGSGFA)


Click it and Unblock the Notifications











