ಬಿಗ್ ಬಾಸ್ 'ವಿನ್ನರ್‌' ಜೊತೆ ಹೀಗೊಂದು 'ಸಿಂಪಲ್‌' ಸಿನಿಮಾ..!

By ಪ್ರಿಯಾ ದೊರೆ

ಬಿಗ್‌ ಬಾಸ್‌ ಸೀಸನ್‌ 10ರ ವಿನ್ನರ್‌ ಕಾರ್ತಿಕ್‌ ಮಹೇಶ್‌ ಅವರಿಗೆ ರಾಜಯೋಗ ನಡೆಯುತ್ತಿದೆ ಎಂದು ಕಾಣಿಸುತ್ತದೆ. ನಟನಾಗಬೇಕು ಎಂದು ಕನಸೊತ್ತು ಬಂದ ಕಾರ್ತಿಕ್‌ ಅವರು ಇಂದು ನಾಯಕನಾಗಿ ಮಿಂಚುತ್ತಿದ್ದಾರೆ. ಸೀರಿಯಲ್‌ ಸೇರಿದಂತೆ ಕೆಲಸ ಸಿನಿಮಾಗಳಲ್ಲಿ ನಟಿಸಿದ್ದ ಕಾರ್ತಿಕ್‌ ಮಹೇಶ್‌ ಅವರು ಬಿಗ್‌ ಬಾಸ್‌ ನಲ್ಲಿ ವಿನ್ನರ್ ಅದ ಬಳಿಕ ಅವರ ಅದೃಷ್ಟ ಬದಲಾಗಿದೆ. ಈಗಷ್ಟೇ ಸಿನಿಮಾ ಒಂದರಲ್ಲಿ ಬ್ಯುಸಿ ಇದ್ದರು. ಅದು ಮುಗಿಯುತ್ತಿದ್ದಂತೆಯೇ ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ನಾಯಕನಾಗಿದ್ದು ಪೋಸ್ಟರ್‌ ರಿಲೀಸ್‌ ಆಗಿದೆ.

ಹೊಸ ಚಿತ್ರಕ್ಕೆ ನಾಯಕನಾದ ಕಾರ್ತಿಕ್

ಅರವಿಂದ್ ವೆಂಕಟೇಶ್ ರೆಡ್ಡಿ AVR ENTERTAINER ಬ್ಯಾನರ್‌ ಅಡಿಯಲ್ಲಿ ಹೊಸ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ರಿಚಿ ರಿಚ್ ಎಂದು ಹೆಸರಿಟ್ಟಿದ್ದು, ಸಿಂಪಲ್ ಸುನಿ ಅವರ ಸಾರಥ್ಯದಲ್ಲಿ ಮೂಡಿ ಸಿನಿಮಾ ಬರಲಿದೆ. ಈ ಸಿನಿಮಾಗೆ ಬಿಗ್‌ ಬಾಸ್‌ ಸೀಸನ್‌ 10ರ ವಿನ್ನರ್ ಕಾರ್ತಿಕ್ ಮಹೇಶ್ ಹೀರೋ ಆಗಿದ್ದಾರೆ. ಈ ಮೂಲಕ ತೆರೆಮೇಲೆ ಮತ್ತೆ ಮಿಂಚಲು ಕಾರ್ತಿಕ್‌ ಅವರು ತಯಾರಿ ನಡೆಸುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಕಾರ್ತಿಕ್‌ ಮಹೇಶ್‌ ಅವರು ರಿದ್ದೇಶ್ ಚಿನ್ನಯ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಕಾಮಿಡಿ ಮತ್ತು ಎಮೋಷನಲ್‌ ಸೀಕ್ವೆನ್ಸ್‌ ಇರಲಿದೆ. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ಸಂಗೀತ ಇರಲಿದ್ದು, ಅಭಿಲಾಷ್ ಕಳತ್ತಿ ಛಾಯಾಗ್ರಹಣ ಇರಲಿದೆ.

Simple Suni collaborates with BBK 10 winner Karthik Mahesh for a new film

ಕನಸನ್ನು ನನಸು ಮಾಡಿಕೊಂಡ ನಟ

ಇನ್ನು ಕಾರ್ತಿಕ್‌ ಮಹೇಶ್‌ ಅವರ ಬಗ್ಗೆ ಹೇಳಬೇಕು ಎಂದರೆ, ಮಾಡೆಲಿಂಗ್ ಮಾಡುವ ಮೂಲಕ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಮೂಲತಃ ಮೈಸೂರಿನವರಾದ ಕಾರ್ತಿಕ್‌ ಅವರಿಗೆ ಬಾಲ್ಯದಿಂದಲೂ ನಟನಾಗುವ ಆಸೆ ಇತ್ತು. ಬಿಎಸ್‌ ಸಿ ಶಿಕ್ಷಣ ಮುಗಿಸಿರುವ ಕಾರ್ತಿಕ್‌ ಅವರು ಖುಷಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಬಳಿಕ ಅಕ್ಕ, ಇಂತಿ ನಿಮ್ಮ ಆಶಾ, ದೇವಯಾನಿ, ಮಹಾಕಾಳಿ, ರಾಜಿ, ಪುಟ್ಟಕ್ಕನ ಮಕ್ಕಳು, ಅಂತರಪಟ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಮೂಲಕ ನಟನಾಗುವ ತಮ್ಮ ಕನಸನ್ನು ನನಸು ಮಾಡಿಕೊಂಡರು.

ಡೊಳ್ಳು ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ

ಇನ್ನು ಸಾಗರ್ ಪುರಾಣಿಕ್ ಅವರ ನಿರ್ದೇಶನದ ಡೊಳ್ಳು ಸಿನಿಮಾದಲ್ಲಿ ಕಾರ್ತಿಕ್‌ ಮಹೇಶ್‌ ಅವರು ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದರು. ಈ ಚಿತ್ರದಲ್ಲಿ ನಟಿಸುವ ಸಲುವಾಗಿ ಕಾರ್ತಿಕ್ ಅವರು ಸ್ವತಃ ಡೊಳ್ಳು ಬಡಿಯೋದನ್ನು ಕರಗತ ಮಾಡಿಕೊಂಡರು. ಈ ಚಿತ್ರಕ್ಕೆ 2022ರಲ್ಲಿ ಜರುಗಿದ 68ನೇ ಸಾಲಿನ ಅತ್ಯುತ್ತಮ ಕನ್ನಡ ಪ್ರಾದೇಶಿಕ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದಾದ ಬಳಿಕ ಕಾರ್ತಿಕ್‌ ಅವರು ಬಿಗ್‌ ಬಾಸ್‌ ಮನೆಗೆ ಕಾಲಿಟ್ಟರು.

ಹೊಸ ಚಿತ್ರದಲ್ಲಿ ನಟಿಸಲಿರುವ ಕಾರ್ತಿಕ್

ಬಿಗ್‌ ಬಾಸ್‌ ಮನೆಯಲ್ಲಿ ಕಾರ್ತಿಕ್‌ ಅವರು ತಮ್ಮ ಕುಚುಕು ವಿನಯ್‌ ಗೌಡ ಅವರ ಎದುರಿಗೆ ಪೈಪೋಟಿ ನೀಡಿ ವಿನ್ನರ್‌ ಪಟ್ಟವನ್ನು ಮುಡಿಗೇರಿಸಿಕೊಂಡರು. ಬಿಗ್‌ ಬಾಸ್‌ ಕಪ್‌ ಗೆದ್ದ ಕಾರ್ತಿಕ್‌ ಮಹೇಶ್‌ ಅವರು ಈಗ ಸಖತ್‌ ಬ್ಯುಸಿ ಮನುಷ್ಯ. ಡೊಳ್ಳು ಸಿನಿಮಾದ ಬಳಿಕ ರಾಮರಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಮುಗಿಯುವ ಮುನ್ನವೇ ಕಾರ್ತಿಕ್‌ ಅವರು ಮತ್ತಿಂದು ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದು, ಇಂದು ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಅದೇ ರಿಚಿ ರಿಚ್‌ ಸಿನಿಮಾ. ಕಾರ್ತಿಕ್‌ ಮಹೇಶ್‌ ಅವರ ನಟನಾ ಪಯಣ ಹೀಗೆ ಮುಂದುವರೆಯಲಿ ಎಂದು ಶು ಕೋರೋಣ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X