»   » ಸಿಂಪಲ್ ಸುನಿಯಿಂದ ಇನ್ನೊಂದು ಲವ್ ಸ್ಟೋರಿ

ಸಿಂಪಲ್ ಸುನಿಯಿಂದ ಇನ್ನೊಂದು ಲವ್ ಸ್ಟೋರಿ

Posted By:
Subscribe to Filmibeat Kannada

ಚಿತ್ರದ ತುಂಬಾ ಮಾತು, ಹಾಡುಗಳೇ ತುಂಬಿ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಚಿತ್ರ ಯಶಸ್ವಿಗೊಳಿಸಿದ ನಿರ್ದೇಶಕ ಸುನಿಲ್ ಕುಮಾರ್ ಅಲಿಯಾಸ್ ಸಿಂಪಲ್ ಸುನಿ ಈಗ ಏನು ಮಾಡುತ್ತಿದ್ದಾರೆ. ಸಿಂಪಲ್ ಆಗಿ ಒಂದು ಪ್ರೇಮ ಕಥೆಯನ್ನು ಬೆಳ್ಳಿತೆರೆಗೆ ತಂದು ಸಿನಿರಸಿಕರ ಮನಗೆದ್ದ ಸುನಿ ಈಗ ಉಳಿದವರು ಕಂಡಂತೆ ಹಾಗೂ ಬಹುಪರಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇದರ ನಂತರ ಏನು?

ಇದೇ ಪ್ರಶ್ನೆಯನ್ನು ಸುನಿ ಅವರಿಗೆ ನಮ್ಮ ಪ್ರತಿನಿಧಿ ಕೇಳಿದಾಗ ಬಂದ ಉತ್ತರ 'ಸಿಂಪಲ್ ಆಗಿ ಇನ್ನೊಂದು ಲವ್ ಸ್ಟೋರಿ' ಹೌದು, ಸುನಿ ಮತ್ತೊಂದು ಪ್ರೇಮಕಥೆಯೊಂದನ್ನು ಸಿದ್ಧಪಡಿಸಿದ್ದಾರೆ. ವಿಶೇಷವೆಂದರೆ ಹೊಸ ಚಿತ್ರದಲ್ಲಿ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಚಿತ್ರದ ಯಶಸ್ವಿ ತಂಡವೇ ಮುಂದುವರೆಯಲಿದೆ. ಹಾಗಾದರೆ ಇದು ಸಿಂಪಲ್ಲಾಗೊಂದ್ ಪಾರ್ಟ್ 2ನಾ ಎಂದರೆ ಛೇ ಛೇ ಹಾಗೇನಿಲ್ಲ. ಅದೇ ಚಿತ್ರ ತಂಡ ಆದರೆ ಹೊಸ ಕಥೆ ಎಂದಿದ್ದಾರೆ.

ಸುನಿ ಸಿನಿಮಾಸ್ ಲಾಂಛನ ನಿರ್ಮಾಣದ ರಕ್ಷಿತ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ 'ಉಳಿದವರು ಕಂಡಂತೆ ಚಿತ್ರ ಮಾ.28ರಂದು ತೆರೆಗೆ ಬರುತ್ತಿದೆ. ಸದ್ಯಕ್ಕೆ ಈ ಬಗ್ಗೆ ಸುನಿ ಗಮನ ಹರಿಸಿದ್ದಾರೆ. ನಂತರ ಶ್ರೀನಗರ ಕಿಟ್ಟಿ ಅಭಿನಯದ ಸುನಿ ನಿರ್ದೇಶನದ ಬಹುಪರಾಕ್ ಚಿತ್ರದ ಆಡಿಯೋ ರಿಲೀಸ್, ಚಿತ್ರ ಬಿಡುಗಡೆ ಬಗ್ಗೆ ತಯಾರಿ ನಡೆಸಲಿದ್ದಾರೆ. ಇದೆಲ್ಲ ಆದ ಮೇಲೆ ಹೊಸ ಚಿತ್ರ ಕೈಗೆತ್ತಿಕೊಳ್ಳುತ್ತಿದ್ದಾರೆ.

Suni Gears Up For Simpleaag Innond Love Story

ಸಿಂಪಲ್ಲಾಗೊಂದ್ ಲವ್ ಸ್ಟೋರಿ ಚಿತ್ರದಲ್ಲಿ ಪಟಪಟನೆ ಮಾತನಾಡುತ್ತಾ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟ ಶ್ವೇತಾ ಶ್ರೀವಾತ್ಸವ ಅವರು 'ಇನ್ನೊಂದು ಲವ್ ಸ್ಟೋರಿ' ಬಗ್ಗೆ ಕೇಳಿ ಥ್ರಿಲ್ ಆಗಿದ್ದಾರೆ. ಸುನಿ ಈ ಬಗ್ಗೆ ಹೇಳಿದಾಗ ನನಗೆ ಸಕತ್ ಖುಷಿಯಾಯಿತು. ನಾನಂತೂ ಸಿಂಪಲ್ ತಂಡದೊಡನೆ ಮತ್ತೊಮ್ಮೆ ಕಾಣಿಸಿಕೊಳ್ಳಲು ಈಗಲೇ ರೆಡಿ ಎಂದು ಒಪ್ಪಿಗೆ ಸೂಚಿಸಿದ್ದಾರೆ. ಸಿಂಪಲ್ ಹುಡ್ಗಿ ಶ್ವೇತಾ ಅವರು ಸದ್ಯಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಜತೆಯಲ್ಲಿ ಫೇರ್ ಅಂಡ್ ಲವ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿಂಪಲ್ಲಾಗೊಂದ್ ಲವ್ ಸ್ಟೋರಿ ಚಿತ್ರದ ಯಶಸ್ಸನ್ನು ಸರಿಯಾಗಿ ಸೆಲೆಬ್ರೇಟ್ ಮಾಡಲು ನಮಗೆ ಆಗಲೇ ಇಲ್ಲ. ಮತ್ತೊಂದು ಚಿತ್ರದಲ್ಲಿ ಇದೇ ತಂಡವನ್ನು ಉಳಿಸಿಕೊಂಡು ಯಶಸ್ಸು ಗಳಿಸುವ ಯೋಜನೆ ಸುನಿಗಿದೆ. ಇದು ಲವ್ ಸ್ಟೋರಿ ಎನ್ನುವುದಕ್ಕಿಂತ ಮದುವೆ ನಂತರದ ಲವ್ ಸ್ಟೋರಿ ಎನ್ನಬಹುದು ಎಂದು ಶ್ವೇತಾ ಹೇಳಿದ್ದಾರೆ. ಒಟ್ಟಾರೆ ಸಿಂಪಲ್ ಸುನಿ ತಂಡ ಮತ್ತೊಂದು ಯಶಸ್ಸು ನೀಡಲಿ ಎಂಬುದು ನಮ್ಮ ಹಾರೈಕೆ

English summary
After the success of Simple Aag Ond Love Story, director Sunil Kumar aka Simple Suni has now geared up for Simpleaag Innond Love Story. The movie, which was released a year ago received rave reviews from the both critics and audience.
Please Wait while comments are loading...