»   » 'ಚಮಕ್' ನಂತರದ ಸಿಂಪಲ್ ಸುನಿ ಚಿತ್ರಕ್ಕೆ ಟೈಟಲ್ ಫಿಕ್ಸ್! ಹೆಸರಲ್ಲೇ ಹೈಪವರ್..

'ಚಮಕ್' ನಂತರದ ಸಿಂಪಲ್ ಸುನಿ ಚಿತ್ರಕ್ಕೆ ಟೈಟಲ್ ಫಿಕ್ಸ್! ಹೆಸರಲ್ಲೇ ಹೈಪವರ್..

Posted By:
Subscribe to Filmibeat Kannada

ಕಥೆ ಸಿಂಪಲ್ಲಾಗೆ ಇದ್ರು ಸಖತ್ ಥ್ರಿಲ್ಲಿಂಗ್ ಮತ್ತು ಔಟ್ ಅಂಡ್ ಔಟ್ ಮನರಂಜನೆ ನೀಡುವ 'ಸಿಂಪಲ್ಲಾಗ್ ಒಂದ್ ಸ್ಟೋರಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯರಾದವರು ನಿರ್ದೇಶನ ಸಿಂಪಲ್ ಸುನಿ.

ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಸಿಂಪಲ್ ಸುನಿ ಸದ್ಯ 'ಆಪರೇಷನ್ ಅಲಮೇಲಮ್ಮ' ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದಾರೆ. ಅಲ್ಲದೇ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಚಮಕ್' ಚಿತ್ರೀಕರಣದಲ್ಲೂ ಬ್ಯುಸಿ ಆಗಿದ್ದಾರೆ. ಹೀಗಿರುವಾಗಲೇ ತಮ್ಮ ಮುಂದಿನ ಇನ್ನೊಂದು ಸಿನಿಮಾಗೆ ತಯಾರಿ ನಡೆಸಿ ಟೈಟಲ್ ಸಹ ಫಿಕ್ಸ್ ಮಾಡಿದ್ದಾರೆ.

ವಿಶೇಷ ಅಂದ್ರೆ 'ಚಮಕ್' ಚಿತ್ರದ ನಂತರ ಸುನಿ ನಿರ್ದೇಶನ ಮಾಡಲಿರುವ ಚಿತ್ರದ ಟೈಟಲ್ ನಲ್ಲೇ ಒಂದು ಹೈಪವರ್ ಇದೆ. ಚಿತ್ರಕ್ಕೆ ನಾಯಕನನ್ನು ಈಗಾಗಲೇ ಸೆಲೆಕ್ಟ್ ಮಾಡಿದ್ದು ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

ಟೈಟಲ್ ನಲ್ಲೇ ಕುತೂಹಲ ಕೆರಳಿಸಿದ ಸಿಂಪಲ್ ಸುನಿ

'ಚಮಕ್' ನಂತರ ಸಿಂಪಲ್ ಸುನಿ ನಿರ್ದೇಶನ ಮಾಡಲಿರುವ ಚಿತ್ರಕ್ಕೆ 'ಜಾನ್ ಸೀನ' ಎಂದು ಹೆಸರು ಇಟ್ಟಿದ್ದಾರೆ. ಈ ಟೈಟಲ್ ಏಕೆ ಅಂದ್ರೆ ಸುನಿ ರವರಿಗೆ ಚಿಕ್ಕಂದಿನಿಂದಲೂ WWF ನೋಡಲಾಗಿ ಅಂದಿನಿಂದಲೂ ಅವರಿಗೆ ಇಷ್ಟವಾದ ಹೆಸರು 'ಜಾನ್‌ಸೀನ' ಅಂತೆ. ಹೀಗಾಗಿ ಈ ಟೈಟಲ್.

'ಜಾನ್‌ ಸೀನ'ಗೆ ನಾಯಕ ಯಾರು ಗೊತ್ತಾ?

ಸಿಂಪಲ್ ಸುನಿ ತಾವೇ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ 'ಜಾನ್ ಸೀನ'ಗೆ ವಿದ್ಯುತ್ ಚಂದ್ರ ಎಂಬ ಹೊಸ ಹುಡುಗನನ್ನು ಆಯ್ಕೆ ಮಾಡಿದ್ದಾರೆ. ಜಾನ್ ಮತ್ತು ಸೀನ ರ ಕಥೆ ಹೊಂದಿರುವ ಈ ಚಿತ್ರದಲ್ಲಿ ವಿದ್ಯುತ್ ಚಂದ್ರ ಸೀನನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ನಿರ್ಮಾಪಕರು ಯಾರು?

ಚಿತ್ರವನ್ನು ಹೊಸ ನಿರ್ಮಾಪಕರಾದ ಚಂದ್ರಶೇಖರ್ ಟಿ ಆರ್ ಎಂಬುವವರು 'ಕ್ರಿಸ್ಟಲ್ ಪಾರ್ಕ್ ಸಿನೆಮಾಸ್' ಪ್ರೊಡಕ್ಷನ್ ಕಂಪನಿ ಅಡಿಯಲ್ಲಿ ನಿರ್ಮಾಣ ಮಾಡಲಿದ್ದಾರೆ.

ಕ್ಲಾಸ್ ಫೇಸು ಮಾಸ್ ಅಪಿಯರೆನ್ಸ್

'ಜಾನ್ ಸೀನ' ಚಿತ್ರ ಕ್ಲಾಸ್ ಫೇಸ್ ಮಾಸ್ ಅಪಿಯರೆನ್ಸ್ ಹೊಂದಿರುವ ವಿದ್ಯುತ್ ಚಂದ್ರ ಅಭಿನಯದಲ್ಲಿ ಮೂಡಿಬರಲಿದ್ದು ಟೋಟಲಿ ಬಿಂದಾಸ್ ಆಗಿರಲಿದೆಯಂತೆ. ಹೀಗಾಗಿ ಹೊಸ ಚುರುಕು ಹುಡುಗನನ್ನು ಅವನ ಹುಟ್ಟುಹಬ್ಬದ ದಿನ ಸೀನನ ಪಾತ್ರದಲ್ಲಿ ಪರಿಚಯಿಸುತ್ತಿದ್ದೇನೆ. ನಿಮ್ಮ ಮಗು, ಅಣ್ಣ.. ತಮ್ಮ.. ಗೆಳೆಯನಂತೆ ಆತನನ್ನು ಹರಸಿ, ಆಶೀರ್ವದಿಸಿ ಎಂದು ಸಿಂಪಲ್ ಸುನಿ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದಿದ್ದಾರೆ.

'ಚಮಕ್' ಕೊಡುವಲ್ಲಿ ಬ್ಯುಸಿ

ಸದ್ಯ ಇತ್ತೀಚೆಗಷ್ಟೆ 'ಆಪರೇಷನ್ ಅಲಮೇಲಮ್ಮ' ಮುಗಿಸಿದ್ದ ಸಿಂಪಲ್ ಸುನಿ ಈಗ 'ಚಮಕ್' ಚಿತ್ರೀಕರಣದಲ್ಲಿಯೂ ಬ್ಯುಸಿ ಆಗಿದ್ದಾರೆ. ಅಮೆರಿಕನ್ ಕುಸ್ತಿಪಟು 'ಜಾನ್‌ ಸೀನ' ಹೆಸರಿಟ್ಟು ಚಿತ್ರದ ಹೆಸರಲ್ಲೇ ಹೈಪವರ್ ಇರುವ ಸಿನಿಮಾ ಚಿತ್ರೀಕರಣವನ್ನು ಸಿಂಪಲ್ ಸುನಿ ಯಾವಾಗ ಶುರು ಮಾಡಲಿದ್ದಾರೆ ಎಂಬುದನ್ನು ತಿಳಿಸಿಲ್ಲ. ಈ ಚಿತ್ರ ಕಂಪ್ಲೀಟ್ ಎಂಟರ್ ಟೈನರ್ ಸಿನಿಮಾವಂತೆ.

English summary
Director Simple Suni has taken his Facebook account to anounce his next movie details like Title, Hero and Producer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada