For Quick Alerts
  ALLOW NOTIFICATIONS  
  For Daily Alerts

  ವಿರಾಟ್ ಕೊಹ್ಲಿ ಸೆಂಚುರಿ ಹೊಡೆದರೆ 'ಅವತಾರ ಪುರುಷ' ಸಿನಿಮಾ ಟಿಕೆಟ್ ಫ್ರೀ : ಸಿಂಪಲ್ ಸುನಿ ಆಫರ್

  |

  ಸಿಂಪಲ್ ಸುನಿ ನಿರ್ದೇಶನದ 'ಅವತಾರ ಪುರುಷ' ರಾಜ್ಯದಾದ್ಯಂತ ರಿಲೀಸ್ ಆಗಲು ಸಜ್ಜಾಗಿದೆ. ಈಗಾಗಲೇ ಚಿತ್ರತಂಡ ಕೂಡ ಸಿನಿಮಾದ ಪ್ರಮೋಷನ್‌ ಮಾಡುತ್ತಿದೆ. ಈಗ ನಿರ್ದೇಶಕ ಸಿಂಪಲ್ ಸುನಿ ಸಾಮಾಜಿಕ ಜಾಲತಾಣದ ಮೂಲಕ ಸಿನಿ ಪ್ರೇಕ್ಷಕರಿಗೆ ಹೊಸ ಅವಕಾಶವೊಂದನ್ನು ನೀಡಿದ್ದಾರೆ. ಮೇ 6 ರಂದು ಸಿನಿಮಾ ರಿಲೀಸ್ ಆಗ್ತಿದ್ದು, ಸಿಂಪಲ್‌ ಸುನಿ ಪ್ರೇಕ್ಷಕರಿಗೆ ಹೊಸ ಆಫರ್ ಕೊಡೋ ಜೊತೆಗೆ ಸಿನಿಮಾ ಪ್ರಮೋಷನ್ ಕೂಡ ಮಾಡಿಕೊಳ್ಳುತ್ತಿದ್ದಾರೆ.

  ಹೌದು, ಏನಪ್ಪಾ ಆ ಆಫರ್ ಅಂದ್ರೆ, ಇವತ್ತು RCB ಮತ್ತು CSKಯ ಹೈ ವೊಲ್ಟೇಜ್‌ ಮ್ಯಾಚ್‌ ಇದೆ. ಹೀಗಾಗಿ ಇದನ್ನೇ ಪ್ರಮೋಷನ್‌ ದಾಳವನ್ನಾಗಿ ಮಾಡಿಕೊಂಡಿರುವ ಸಿನಿಮಾ ತಂಡ ಅದರಲ್ಲೂ ನಿರ್ದೇಶಕ ಸಿಂಪಲ್ ಸುನಿ ಸಿನಿ ಪ್ರೇಕ್ಷಕರಿಗೆ ಹೊಸ ಆಫರ್ ನೀಡಿದ್ದಾರೆ.

  'ರಾಬಿನ್ ಹುಡ್' ಕೈ ಬಿಟ್ಟ ಸಿಂಪಲ್ ಸುನಿಯ 'ಗತವೈಭವ': ಹಾಲಿವುಡ್ ನಟ ಅವತಾರವೆತ್ತಿದ ಹೀರೊ'ರಾಬಿನ್ ಹುಡ್' ಕೈ ಬಿಟ್ಟ ಸಿಂಪಲ್ ಸುನಿಯ 'ಗತವೈಭವ': ಹಾಲಿವುಡ್ ನಟ ಅವತಾರವೆತ್ತಿದ ಹೀರೊ

  ಈ ಕುರಿತು ಟ್ವೀಟ್ ಮಾಡಿರುವ ಸಿಂಪಲ್ ಸುನಿ ಇಂದು(ಮೇ 4) ವಿರಾಟ್ ಕೊಹ್ಲಿ ಸೆಂಚುರಿ ಹೊಡೆದರೆ, ಇದನ್ನು ರೀ ಟ್ವೀಟ್ ಮಾಡುವವರಿಗೆಲ್ಲಾ ಅವತಾರ ಪುರುಷ ಚಿತ್ರದ ಟಿಕೆಟ್‌ನ್ನು ನಿಮ್ಮ ಇಷ್ಟದ ಚಿತ್ರಮಂದಿಗಳಲ್ಲಿ ಉಚಿತವಾಗಿ ಬುಕ್‌ ಮಾಡಿ ಕೊಡಲಾಗುವುದು ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. ಈ ಮೂಲಕ ಸಿನಿಮಾ ಪ್ರಮೋಷನ್‌ನ ವಿಭಿನ್ನ ರೀತಿಯಲ್ಲಿ ಮಾಡಲು ಮುಂದಾಗಿದ್ದಾರೆ.

  ಸದ್ಯ ಸಿಂಪಲ್‌ ಸುನಿ ಮಾಡಿದ ಈ ಟ್ವೀಟ್‌ಗೆ ಅನೇಕರು ರೀ- ಟ್ವೀಟ್‌ ಮಾಡುತ್ತಿದ್ದು, ಕೊಹ್ಲಿ ಸೆಂಚುರಿ ಹೊಡೆಯಲ್ಲ. ಮ್ಯಾಚ್‌ ಗೆದ್ದರೆ ಸಾಕು ಅಂತ ಕೆಲವರು ಕಮೆಂಟ್ ಮಾಡಿದರೆ, ಇನ್ನು ಕೆಲವರು ಇದಪ್ಪಾ ಮೋವಿ ಪ್ರಮೋಷಷನ್ ಅಂದರೆ ಅಂತ ಸಿಂಪಲ್ ಸುನಿ ಕಾಲೆಳೆದಿದ್ದಾರೆ. ಇನ್ನು ಕೆಲವರು ಕೊಹ್ಲಿ ಸೆಂಚುರಿ ಹೊಡೆಯಲ್ಲ ಅಂತ ಗೊತ್ತು. ಅದಕ್ಕೆ ಈ ಆಫರ್‌ ಕೊಟ್ಟಿದ್ದೀರಾ ಅಂತ ಕಮೆಂಟ್ ಮಾಡುತ್ತಿದ್ದಾರೆ.

  ಬೆಚ್ಚಿ ಬೀಳಿಸುತ್ತೆ ಶರಣ್ ವಿಚಿತ್ರ ಅವತಾರ: ಇವರು ಅವರೇನಾ ಎನ್ನುವ ಪ್ರಶ್ನೆ ಹುಟ್ಟಿದೆ!ಬೆಚ್ಚಿ ಬೀಳಿಸುತ್ತೆ ಶರಣ್ ವಿಚಿತ್ರ ಅವತಾರ: ಇವರು ಅವರೇನಾ ಎನ್ನುವ ಪ್ರಶ್ನೆ ಹುಟ್ಟಿದೆ!

  ಏನೇ ಇರಲಿ ಸಿಂಪಲ್ ಸುನಿ ಐಡಿಯಾವನ್ನಂತೂ ಮೆಚ್ಚಲೇ ಬೇಕು. ಈ ಮೂಲಕವಾದರೂ ಸಿನಿಮಾ ಪ್ರಚಾರ ಯಾವುದೇ ಪ್ರಯಾಸವಿಲ್ಲದೆ ಸಾಗುತ್ತಿದೆ. ಸಿನಿಮಾ ಬಗ್ಗೆಯೂ ಜನರು ಮಾತಾಡಬೇಕು ಎಂಬ ಲೆಕ್ಕಚಾರದಲ್ಲೇ ಸಿಂಪಲ್ ಸುನಿ ಈ ಆಫರ್ ನೀಡಿದ್ದಾರೆ. ಒಟ್ಟಿನಲ್ಲಿ ಕೊಹ್ಲಿ ಸೆಂಚುರಿ ಹೊಡೆದರೆ ಇಂದು (ಮೇ 4) 'ಅವತಾರ ಪುರುಷ' ಸಿನಿಮಾ ತಂಡದಿಂದ ಫ್ರೀ ಟಿಕೆಟ್‌ ಅಂತೂ ಪಕ್ಕಾ. ಬಟ್ ಕೊಹ್ಲಿ ಸೆಂಚುರಿ ಹೊಡಿತಾರೋ ಇಲ್ವೋ. ಆದರೆ ಸಿನಿಮಾಗೆ ಮಾತ್ರ ಪ್ರಚಾರ ಅಂತೂ ಸಿಕ್ಕಿದಂತೆ ಆಗುತ್ತೆ ಅನ್ನೋದು ನೆಟ್ಟಿಗರ ಮಾತು.

  Simple Suni Offered to Give Avatara Purusha Movie Free Ticket to Fans if Kohli Scores Century in Todays IPL Match

  ಮೇ 6 ರಂದು ರಾಜ್ಯದಾದ್ಯಂತ 'ಅವತಾರ ಪುರುಷ' ರಿಲೀಸ್ ಆಗ್ತಿದ್ದು, ಶರಣ್‌ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಕರ ಮಲ್ಲಿಕಾರ್ಜುನಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 'ಟಗರು' ಖ್ಯಾತಿಯ ಚರಣರಾಜ್ ಸಂಗೀತ ನೀಡಿದ್ದಾರೆ. ಅರ್ಜುನ್ ಎ ಆರ್ ಸಂಭಾಷಣೆ ಮತ್ತು ಚಿತ್ರಕಥೆಯಲ್ಲಿ ಕೈ ಜೋಡಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಬಿಷ್ತ ಎಂಬ ಮಾಂತ್ರಿಕನ ಪಾತ್ರದಲ್ಲಿ ನಟಿಸಿದ್ದಾರೆ. ಹಾರರ್ ಕಾಮಿಡಿಯ ಈ ಚಿತ್ರದಲ್ಲಿ ಶರಣ್ ಜೊತೆ ಶರಣ್ ಪುತ್ರಿ ಪುಣ್ಯ ಕೂಡ ಅಭಿನಯಿಸುತ್ತಿದ್ದಾರೆ. ಸಾಯಿಕುಮಾರ್, ಸುಧಾರಾಣಿ ಮುಂತಾದವರು ಶರಣ್ - ಆಶಿಕಾ ಜೋಡಿಗೆ ಸಾಥ್ ನೀಡಿದ್ದಾರೆ. ಹೆಸರಿಗೆ ತಕ್ಕಂತೆ 'ಅವತಾರ ಪುರುಷ' ಸಿನಿಮಾದಲ್ಲಿ ಶರಣ್ ವಿವಿಧ ಅವತಾರಗಳನ್ನು ನೋಡಬಹುದಾಗಿದೆ.

  English summary
  Simple Suni Offered to Give Avatara Purusha Movie Free Ticket to Fans if Kohli Scores Century in Today's IPL Match. Know More.
  Wednesday, May 4, 2022, 15:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X