ಆರ್‌ಸಿಬಿ ಮ್ಯಾಚಿನ ದಿನ ಸಿಂಪಲ್ ಸುನಿಯ ಈ ವಿಡಿಯೋ ನೋಡಲೇ ಬೇಕು

ನಿರ್ದೇಶಕ ಸಿಂಪಲ್ ಸುನಿ ಸಿನಿಮಾ ಪ್ರೇಮಿ ಅದರಲ್ಲಿ ಅನುಮಾನವಿಲ್ಲ, ಸಿನಿಮಾ ಹೊರತಾಗಿ ಅವರ ಬಹುವಾಗಿ ಪ್ರೀತಿಸುವುದು ಕ್ರಿಕೆಟ್. ಅದರಲ್ಲೂ ಆರ್‌ಸಿಬಿ ಯ ದೊಡ್ಡ ಅಭಿಮಾನಿ ಸಿಂಪಲ್ ಸುನಿ.

Recommended Video

ಇದಪ್ಪ RCB ಫ್ಯಾನ್ ವರಸೆ ಅಂದ್ರೆ | Simple Suni | Filmibeat Kannada

ಈ ಐಪಿಎಲ್‌ ನಲ್ಲಿಯಂತೂ ಆರ್‌ಸಿಬಿಯ ಒಂದೂ ಮ್ಯಾಚನ್ನು ತಪ್ಪದೇ ನೋಡಿದ್ದಾರೆ ಮಾತ್ರವಲ್ಲದೆ ವಿಶ್ಲೇಷಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮ್ಯಾಚಿನ ಕುರಿತು ಅಭಿಪ್ರಾಯ ಹಂಚಿಕೊಳ್ಳುತ್ತಲೇ ಇದ್ದಾರೆ.

ಆರ್‌ಸಿಬಿ ಮ್ಯಾಚ್ ಇದ್ದ ದಿನ ಸಿಂಪಲ್ ಸುನಿ ಅವರು ಮ್ಯಾಚ್ ಬಿಟ್ಟು ಕದಲುವುದಿಲ್ಲ. ಬೆಳಿಗಿನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಮ್ಯಾಚ್‌ ಬಗ್ಗೆ ಅಭಿಪ್ರಾಯಗಳು, ಜೋಕ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಂದು (ಅಕ್ಟೋಬರ್ 25) ಆರ್‌ಸಿಬಿ-ಸಿಎಸ್‌ಕೆ ಮ್ಯಾಚ್‌ ಇದ್ದು, ಇಂದು ಸಣ್ಣ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ ಸಿಂಪಲ್ ಸುನಿ.

'ಯಾರಿಗೂ ಉರಿಸಲು ಅಲ್ಲ, ಮನರಂಜನೆಗೆ ಮಾತ್ರ'

ವಿಡಿಯೋದ ಆರಂಭದಲ್ಲಿಯೇ 'ಈ ವಿಡಿಯೋ ಯಾರಿಗೋ ಉರಿಸಲು ಅಲ್ಲ, ಮನರಂಜನೆ ಮಾತ್ರವೇ ನಮ್ಮ ಉದ್ದೇಶ' ಎಂಬ ಡಿಸ್‌ಕ್ಲೇಮರ್‌ ಹಾಕಿದ್ದಾರೆ ಸುನಿ. ವಿಡಿಯೋದಲ್ಲಿ ಸುನಿ ಸ್ವತಃ ಅಭಿನಯಿಸಿದ್ದು, ಜೊತೆಗೆ ಅವರ ಗೆಳೆಯರೂ ಒಬ್ಬರಿದ್ದಾರೆ.

'ನೀನೂ ಸಹ ಸಿಎಸ್‌ಕೆ ಅಭಿಮಾನಿ'

'ನೀನೂ ಸಹ ಸಿಎಸ್‌ಕೆ ಅಭಿಮಾನಿ'

ಸಿಂಪಲ್ ಸುನಿ ಯನ್ನು ಭೇಟಿ ಮಾಡಲು ಬರುವ ಸಿಎಸ್‌ಕೆ ಅಭಿಮಾನಿ, ಹಳದಿ ಬಣ್ಣದ ಬಟ್ಟೆ ಧರಿಸುತ್ತಾರೆ. ಸಿಂಪಲ್ ಸುನಿಯ ಶರ್ಟ್‌ನಲ್ಲೂ ಹಳದಿ ಬಣ್ಣ ಇರುತ್ತದೆ. 'ನಿನ್ನ ಬಟ್ಟೆಯಲ್ಲಿ ಹಳದಿ ಬಣ್ಣ ಇದೆ, ನೀನು ಚೆನ್ನೈ ಅಭಿಮಾನಿ' ಎನ್ನುತ್ತಾನೆ.

ಕೈಗೆ ಗಾಯ ಮಾಡುವ ಸಿಂಪಲ್ ಸುನಿ

ಕೈಗೆ ಗಾಯ ಮಾಡುವ ಸಿಂಪಲ್ ಸುನಿ

ಕೈಯಲ್ಲಿ ಚಾಕು ಹಿಡಿದು ಹಣ್ಣು ಕತ್ತರಿಸುತ್ತಿದ್ದ ಸುನಿ, ಗೆಳೆಯನ ಕೈಯನ್ನು ಚಾಕುವಿನಿಂದ ಗಾಯಗೊಳಿಸಿ, ನಿನ್ನ ಮೈಯ, ಕಣ-ಕಣದಲ್ಲೂ ಆರ್‌ಸಿಬಿ ಇದೆ (ಕೆಂಪು ಬಣ್ಣ) ನಿನಗೇ ಗೊತ್ತಿಲ್ಲ, ನೀನು ಆರ್‌ಸಿಬಿ ಫ್ಯಾನ್‌' ಎನ್ನುತ್ತಾರೆ.

ಆರ್‌ಸಿಬಿ ಅಭಿಮಾನಿಗಳಿಗೆ ಮಾತ್ರ

ಆರ್‌ಸಿಬಿ ಅಭಿಮಾನಿಗಳಿಗೆ ಮಾತ್ರ

ಸುಮ್ಮನೇ ಕೂತು ಹರಟೆ ಹೊಡೆಯುವಾಗ ಈ ಐಡಿಯಾ ಹೊಳೆಯಿತು ಹಾಗಾಗಿ ವಿಡಿಯೋ ಮಾಡಿದ್ದೀವಿ ಎಂದಿದ್ದಾರೆ ಸಿಂಪಲ್ ಸುನಿ. ಈ ವಿಡಿಯೋ ಮನರಂಜನೆಗೆ ಹಾಗೂ ಆರ್.ಸಿ.ಬಿ ಅಭಿಮಾನಿಗಳಿಗೆ ಮಾತ್ರ ಎಂಬ ಸೂಚನೆಯನ್ನೂ ಕೊಟ್ಟಿದ್ದಾರೆ ಸುನಿ.

More from Filmibeat

English summary
Director Simple Suni posted video about RCB-CSK match in Instagram. Simple Suni is a die hard fan of RCB.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X