twitter
    For Quick Alerts
    ALLOW NOTIFICATIONS  
    For Daily Alerts

    ಆರ್.ಸಿ.ಬಿ ಮ್ಯಾಚ್ ಸೋತಿದ್ದಕ್ಕೆ ಬೇಡಿಕೆ ಬದಲಾಯಿಸಿದ ಸಿಂಪಲ್ ಸುನಿ

    By Bharath Kumar
    |

    Recommended Video

    ಆರ್ ಸಿ ಬಿ ಮ್ಯಾಚ್ ಸೋತಿದ್ದಕ್ಕೆ ಸುನಿ ಗರಂ | Simple suni speaks about Virat cap | Filmibeat Kannada

    'ಈ ಸಲ ಕಪ್ ನಮ್ದೆ'.....ಬಹುಶಃ ಅಭಿಮಾನಿಗಳ ಈ ಬೇಡಿಕೆ ಕೇಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸಲ ಐಪಿಎಲ್ ಟ್ರೋಪಿ ಗೆಲ್ಲುತ್ತೆ ಎಂಬ ಆಶಯ ಕೋಟ್ಯಾಂತರ ಅಭಿಮಾನಿಗಳದ್ದು ಆಗಿದೆ. ಆದ್ರೆ, ಅದ್ಯಾಕೋ ಆ ಆಸೆ ಈ ಬಾರಿಯೂ ನನಸಾಗುವ ರೀತಿ ಕಾಣುತ್ತಿಲ್ಲ.

    ಯಾಕಂದ್ರೆ, ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯ ಸೋತು ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ ಆರ್.ಸಿ.ಬಿ. ಹೀಗಾಗಿ, ಕೆಲವು ಅಭಿಮಾನಿಗಳಿಗೆ ಆರ್.ಸಿ.ಬಿ ಟ್ರೋಪಿ ಗೆಲ್ಲಬೇಕು ಎಂಬ ಆಸೆ ಬಿಟ್ಟು, ಬೇರೆಯದ್ದೇ ಬೇಡಿಕೆ ಇಡುತ್ತಿದ್ದಾರೆ. ಇದಕ್ಕೊಂದು ಉದಾಹರಣೆ ನಿರ್ದೇಶಕ ಸಿಂಪಲ್ ಸುನಿ.

    ವಾಂಖೇಡೆ ಅಂಗಳದಲ್ಲಿ ಏಕಾಂಗಿಯಾದರು ವಿರಾಟ್ ಕೊಹ್ಲಿ

    simple suni tweet on rcb

    ಆರ್.ಸಿ.ಬಿ ಪಂದ್ಯ ಸೋತ ಬಳಿಕ ಟ್ವೀಟ್ ಮಾಡಿರುವ ಸಿಂಪಲ್ ಸುನಿ, ''ಕಪ್ ಗೆಲ್ರೋ ಅಂದ್ರೆ ಕ್ಯಾಪ್ ಗೆಲ್ತೀರಾ.!! ಹೋಗ್ಲಿ ಬಿಡಿ, ಈ ಸಲ ಆರೆಂಜ್ ಕ್ಯಾಪ್ ನಮ್ದೇ.....ಟೂರ್ನಿ ಮುಗಿಯೋಷ್ಟರಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಕನ್ನಡದ ಆಟಗಾರರಿಗೂ ಅವಕಾಶ ಕೊಡಿ'' ಎಂದು ಮನವಿ ಮಾಡಿದ್ದಾರೆ.

    ಹೌದು, ಕೇವಲ ಸುನಿಯ ಬೇಡಿಕೆ ಅಥವಾ ಆಸೆಯಲ್ಲ. ಸಾವಿರಾರು ಅಭಿಮಾನಿಗಳ ಆಸೆಯೂ ಆಗಿದೆ. ಹೆಸರಿಗೆ ಬೆಂಗಳೂರು ತಂಡವಾಗಿದ್ದರೂ, ಪ್ಲೇಯಿಂಗ್ ಇಲೆವೆನ್ ನಲ್ಲಿ ಒಬ್ಬರು ಕನ್ನಡಿಗರು ಕಾಣಿಸಿಕೊಂಡಿಲ್ಲ. ಇದು ಕೊಂಚ ಬೇಸರ ಮೂಡಿಸಿದೆ. ಹಾಗಾಗಿ, ಕನ್ನಡಿಗರನ್ನ ನೋಡುವ ಕಾತುರ ಕರ್ನಾಟಕ ಅಭಿಮಾನಿಗಳದ್ದು.

    ಮತ್ತೆ ಆರ್‌ಸಿಬಿ ಆಟಗಾರರ ಕಾಲೆಳೆದರು ಟ್ವಿಟ್ಟಿಗರು

    ಸದ್ಯ, ಆರ್.ಸಿ.ಬಿ ತಂಡದಲ್ಲಿ ಪವನ್ ದೇಶಪಾಂಡೆ, ಅನಿರುದ್ಧ್ ಜೋಶಿ, ಮತ್ತು ಕರಿಯಪ್ಪಾ ಅವಕಾಶ ಪಡೆದುಕೊಂಡಿದ್ದಾರೆ. ಆದ್ರೆ, 11ರ ಬಳಗದಲ್ಲಿ ಕಾಣಿಸಿಕೊಂಡಿಲ್ಲ.

    ಆರ್.ಸಿ.ಬಿ ತಂಡದಲ್ಲಿ ಹೊರತು ಪಡಿಸಿದರೇ ಬೇರೆ ಬೇರೆ ತಂಡಗಳಲ್ಲಿ ಕನ್ನಡಿಗರು ಅಬ್ಬರಿಸುತ್ತಿದ್ದಾರೆ. ಪಂಜಾಬ್ ತಂಡದಲ್ಲಿ ಕೆ.ಡಲ್ ರಾಹುಲ್, ಮಾಯಂಕ್ ಅಗರ್ವಾಲ್, ಕರುಣ್ ನಾಯರ್, ಕೊಲ್ಕತ್ತಾ ತಂಡದಲ್ಲಿ ರಾಬಿನ್ ಉತ್ತಪ್ಪ, ವಿನಯ್ ಕುಮಾರ್, ಹೈದ್ರಾಬಾದ್ ತಂಡದಲ್ಲಿ ಮನೀಶ್ ಪಾಂಡೆ...ಹೀಗೆ ಐಪಿಎಲ್ ನಲ್ಲಿ ಕನ್ನಡಿಗರು ಮಿಂಚುತ್ತಿದ್ದಾರೆ. ಆದ್ರೆ, ಮೂಲತಃ ಕರ್ನಾಟಕ ತಂಮಡವೇ ಆಗಿರುವ ಆರ್.ಸಿ.ಬಿಯಲ್ಲಿ ಮಾತ್ರ ಕನ್ನಡಿಗರಿಗೆ ಇನ್ನೂ ಅವಕಾಶ ಕೊಟ್ಟಿಲ್ಲ.

    English summary
    Kannada director simple suni has taken his twitter account to express his opinion about royal challengers bangalore team.
    Wednesday, April 18, 2018, 13:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X