For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ವಿಚಾರದಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿಕೊಂಡ ಗೂಗಲ್

  |

  ಕನ್ನಡ ಕಲಾಭಿಮಾನಿಗಳ ಆರಾಧ್ಯ ದೈವ, ವರನಟ ಡಾ ರಾಜ್‌ಕುಮಾರ್ ಗೂಗಲ್ ಅಪಮಾನ ಮಾಡಿದ್ದ ಘಟನೆ ಇತ್ತೀಚಿಗಷ್ಟೆ ವರದಿಯಾಗಿತ್ತು. ತಮಿಳು ಚಿತ್ರದಲ್ಲಿ ಕಲಾವಿದರ ತಂಡದಲ್ಲಿ ರಾಜ್ ಕುಮಾರ್ ಫೋಟೋ ಬಳಸಿದ್ದಲ್ಲದೇ ಅದರ ಕೆಳಗೆ 'ಹಾಫ್ ಬಾಯ್ಲ್' ಎಂದು ಹೆಸರು ಹಾಕಲಾಗಿತ್ತು.

  ಕನ್ನಡಿಗರಿಗೆ ಹೆದರಿ ಅಣ್ಣಾವ್ರ ವಿಚಾರದಲ್ಲಿ ತಪ್ಪು ತಿದ್ದಿಕೊಂಡ Google | Filmibeat Kannada

  ಗೂಗಲ್ ಮಾಡಿದ ಈ ಎಡವಟ್ಟಿಗೆ ಕನ್ನಡ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಕನ್ನಡಕ್ಕೆ ಮಾಡಿದ ಅವಮಾನ, ಅಣ್ಣಾವ್ರ ಹೆಸರಿಗೆ ಮಾಡಿದ ಅವಮಾನ ಎಂದು ಟೀಕಿಸಿದ್ದರು. ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಸಹ ಟ್ವೀಟ್ ಮಾಡಿ ಖಂಡಿಸಿದ್ದರು. ಇದೀಗ, ಗೂಗಲ್ ಈ ತಪ್ಪನ್ನು ಸರಿಪಡಿಸಿಕೊಂಡಿದೆ. ಮುಂದೆ ಓದಿ...

  ಕನ್ನಡ ಆಯ್ತು ಈಗ ಅಣ್ಣಾವ್ರಿಗೆ ಅವಮಾನ: ಗುಮಾನಿ ವ್ಯಕ್ತಪಡಿಸಿದ ಕುಮಾರಸ್ವಾಮಿಕನ್ನಡ ಆಯ್ತು ಈಗ ಅಣ್ಣಾವ್ರಿಗೆ ಅವಮಾನ: ಗುಮಾನಿ ವ್ಯಕ್ತಪಡಿಸಿದ ಕುಮಾರಸ್ವಾಮಿ

  ಅಣ್ಣಾವ್ರ ಫೋಟೋ ತೆಗೆದ ಗೂಗಲ್

  ಅಣ್ಣಾವ್ರ ಫೋಟೋ ತೆಗೆದ ಗೂಗಲ್

  ಗೂಗಲ್‌ನಲ್ಲಿ ವಿಕ್ರಂವೇದ ಸಿನಿಮಾ ಎಂದು ಟೈಪ್ ಮಾಡಿದರೆ, ಆ ಚಿತ್ರದ ಕಲಾವಿದರ ಪಟ್ಟಿಯಲ್ಲಿ ರಾಜ್‌ಕುಮಾರ್ ಭಾವಚಿತ್ರ ಬರ್ತಿತ್ತು. ಈಗ, ಈ ಪಟ್ಟಿಯಲ್ಲಿ ಅಣ್ಣಾವ್ರ ಫೋಟೋ ತೆಗೆಯಲಾಗಿದೆ. ರಾಜ್ ಕುಮಾರ್ ಎಂಬ ಕಲಾವಿದ ನಟಿಸಿದ್ದು, ಈಗ ಮೂಲ ವ್ಯಕ್ತಿಯ ಫೋಟೋ ಹಾಕಲಾಗಿದೆ.

  ಮತ್ತೆ ಇಂತಹ ತಪ್ಪು ಮಾಡುವುದು ಬೇಡ

  ಮತ್ತೆ ಇಂತಹ ತಪ್ಪು ಮಾಡುವುದು ಬೇಡ

  #ವಿಕ್ರಂವೇದ ತಂಡ ಅವರ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ... ಮತ್ತೆ ತಪ್ಪಾಗದಂತೆ,,ತಪ್ಪಾದರು ಬೇಗ ಎಚ್ಚೆತ್ತುಕೊಳ್ಳುವಂತೆ ಮುನ್ನೆಚ್ಚರಿಕೆ ಇರಲಿ.. #Google @GoogleIndia #ಅಣ್ಣಾವ್ರು ಎಂದಿಗೂ ಅಜರಾಮರ'' ಎಂದು ನಿರ್ದೇಶಕ ಸುನಿ ಮಾಹಿತಿ ಹಂಚಿಕೊಂಡಿದ್ದಾರೆ.

  ತಮಿಳು ಚಿತ್ರದಲ್ಲಿ ಡಾ.ರಾಜ್ ಫೋಟೋ; ಗೂಗಲ್ ನಲ್ಲಿ ರಿಪೋರ್ಟ್ ಮಾಡಿ ಎಂದ ರಿಷಬ್ ಶೆಟ್ಟಿತಮಿಳು ಚಿತ್ರದಲ್ಲಿ ಡಾ.ರಾಜ್ ಫೋಟೋ; ಗೂಗಲ್ ನಲ್ಲಿ ರಿಪೋರ್ಟ್ ಮಾಡಿ ಎಂದ ರಿಷಬ್ ಶೆಟ್ಟಿ

  ರಿಪೋರ್ಟ್ ಮಾಡಲು ಒತ್ತಾಯಿಸಿದ ಕಲಾವಿದರು

  ರಿಪೋರ್ಟ್ ಮಾಡಲು ಒತ್ತಾಯಿಸಿದ ಕಲಾವಿದರು

  ಅಣ್ಣಾವ್ರ ಫೋಟೋ ಮತ್ತು ಹೆಸರು ಗೂಗಲ್‌ನಲ್ಲಿ ತಪ್ಪಾಗಿ ಬಳಕೆಯಾಗುತ್ತಿದೆ ಎನ್ನುವ ವಿಚಾರ ತಿಳಿದ ಮೇಲೆ, ಕನ್ನಡ ನಟ-ನಿರ್ದೇಶಕ ರಿಷಬ್ ಶೆಟ್ಟಿ ರಿಪೋರ್ಟ್ ಮಾಡಲು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು.

  ವಿಜಯ್ ಸೇತುಪತಿ ಸಿನಿಮಾ

  ವಿಜಯ್ ಸೇತುಪತಿ ಸಿನಿಮಾ

  ಅಂದ್ಹಾಗೆ, ವಿಕ್ರಂವೇದ 2017ರಲ್ಲಿ ತೆರೆಕಂಡು ಸೂಪರ್ ಆದ ಚಿತ್ರ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ, ಆರ್ ಮಾಧವನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಹಿಂದಿಯಲ್ಲೂ ಈ ಸಿನಿಮಾ ರಿಮೇಕ್ ಆಗುತ್ತಿದೆ. ಕನ್ನಡದ ಖ್ಯಾತ ನಿರ್ಮಾಪಕರೊಬ್ಬರು ಈ ಚಿತ್ರದ ರಿಮೇಕ್ ಹಕ್ಕು ಖರೀದಿಸಿದ್ದಾರೆ ಎಂಬ ಮಾಹಿತಿ ಇದೆ.

  English summary
  Simple Suni Tweets After Vikram Veda Google Page Correct Dr Rajkumar Image Mistake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X