ಸಿಎಂ ವಿಜಯ್ ರೀತಿ ಹೊಸ ನಟನ ಪ್ರಮಾಣ ವಚನ; ರಾಜ್ಯಪಾಲರ ಗೆಟಪ್‌ನಲ್ಲಿ ಸುನಿ, ಸಖತ್ ಫನ್

ನಿರ್ದೇಶಕ ಸಿಂಪಲ್ ಸುನಿ ತಮ್ಮ ಕ್ರಿಯೇಟಿವ್ ಐಡಿಯಾಗಳ ಮೂಲಕ ಗಮನ ಸೆಳೆಯುತ್ತಾರೆ. 'ಮೋಡ ಕವಿದ ವಾತಾವರಣ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಹೊಸ ಪ್ರತಿಭೆಗಳಿಗೆ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ನಾನಾ ಕಸರತ್ತು ಮಾಡ್ತಿದೆ. ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದನ್ನು ನೆನಪಿಸುತ್ತಾ ಹೊಸ ಪ್ರಮೋಷನಲ್ ವೀಡಿಯೋ ಬಿಟ್ಟಿದ್ದಾರೆ.

ಮೇ 10, 2026ರಂದು ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ತಮಿಳುನಾಡಿನ 18ನೇ ಮುಖ್ಯಮಂತ್ರಿಯಾಗಿ ವಿಜಯ್ ಪದಗ್ರಹಣ ಮಾಡಿದ್ದರು. ರಾಜ್ಯದ ರಾಜ್ಯಪಾಲ ಆರ್.ಎನ್. ರವಿ ಅವರು ವಿಜಯ್ ಅವರಿಗೆ ಅಧಿಕಾರದ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಆದರೆ ಮೊದಲಿಗೆ ವಿಜಯ್ ಸಿನಿಮಾ ಡೈಲಾಗ್ ರೀತಿ ತಮ್ಮದೇ ಶೈಲಿಯಲ್ಲಿ ಕೊಂಡ ಪ್ರಮಾಣ ವಚನವನ್ನು ಹೇಳಿದ್ದರು. ಬಳಿಕ ಅದನ್ನು ರಾಜ್ಯಪಾಲರು ಸರಿಪಡಿಸಿಕೊಳ್ಳಲು ಹೇಳಿದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಇದು 'ಬಾಹುಬಲಿ' ಚಿತ್ರದಲ್ಲಿ ಅಮರೇಂದ್ರ ಬಾಹುಬಲಿ ಮಾಹಿಷ್ಮತಿ ಸಾಮ್ರಾಜ್ಯದ ಸೇನಾಧಿಪತಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನೆನಪಿಸುವಂತಿದೆ ಎಂದು ವೀಡಿಯೋಗಳು ವೈರಲ್ ಆಗಿತ್ತು. ಸದ್ಯ ಇದೇ ರೀತಿ 'ಮೋಡ ಕವಿದ ವಾತಾವರಣ' ಚಿತ್ರದ ನವ ನಾಯಕ ನಟನ ಪ್ರಮಾಣ ವಚನ ಕಾರ್ಯಕ್ರಮ ನಡೆದಿದೆ.

Simple Suni s Moda Kavida Vatavarana Grabs Attention with Creative CM Vijay-Themed Promo

ಸ್ವತಃ ನಿರ್ದೇಶಕ ಸಿಂಪಲ್ ಸುನಿ ರಾಜ್ಯಪಾಲರ ರೀತಿ ಶೀಲಂ ಎಂ ಸ್ವಾಮಿ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಸಖತ್ ಫನ್ನಿಯಾಗಿ ಈ ವೀಡಿಯೋ ಶೂಟ್ ಮಾಡಲಾಗಿದೆ. ಮಲ್ಲೇಶ್ವರಂನ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಈ ಪ್ರಮೋಷನಲ್ ವೀಡಿಯೋ ಸೆರೆ ಹಿಡಿಯಲಾಗಿದೆ. ನಟ ಶೀಲಂ ಕಪ್ಪು ಬಣ್ಣದ ಕೋಟ್ ಧರಿಸಿದ್ದಾರೆ. ಸುನಿ ಶೈಲಿಯಲ್ಲೇ ಪ್ರಮಾಣ ವಚನ ಬೋಧನಾ ವಿಧಿ ಸಾಲುಗಳು ಇವೆ. ಅದನ್ನು ಮತ್ತಷ್ಟು ಫನ್ನಿಯಾಗಿ ನಾಯಕನ ಜೊತೆ ಸೇರಿಸಿ ಸ್ಕಿಟ್ ಮಾಡಿದ್ದಾರೆ. ಜೂನ್ 16ರಂದು ನಾಯಕ ನಟನ ಪ್ರೋಮೊ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ.

'ಮೋಡ ಕವಿದ ವಾತಾವರಣ' ಚಿತ್ರದಲ್ಲಿ ಮೋಕ್ಷ ಕುಶಾಲ್, ಸಾತ್ವಿಕ ನಾಯಕಿಯರಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ 2 ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿದೆ. ಕಳೆದ 'ಗತವೈಭವ' ಚಿತ್ರವನ್ನು ಸುನಿ ಕಟ್ಟಿಕೊಟ್ಟಿದ್ದರು. ಸುನಿ ಗರಡಿಯಲ್ಲೇ ಶೀಲಂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಹೀರೊ ಆಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ವೈಜ್ಞಾನಿಕ ಹಿನ್ನೆಲೆಯಲ್ಲಿ ನಡೆಯುವ ರೊಮ್ಯಾಂಟಿಕ್ ಸಿನಿಮಾ ಇದು. ಸುನಿ ನಿರ್ದೇಶನದ 'ಒಂದು ಸರಳ ಪ್ರೇಮಕಥೆ' ಚಿತ್ರ ನಿರ್ಮಿಸಿದ್ದ ರಾಮ್ ಮೂವೀಸ್ ಸಂಸ್ಥೆ ಮೂಲಕ ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಮತ್ತು ಗೋವಾ ರಮೇಶ್ ಈ ಚಿತ್ರಕ್ಕೂ ಹಣ ಹೂಡಿದ್ದಾರೆ. ಅಂದಹಾಗೆ ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣ, ಜೂಡಾ ಸ್ಯಾಂಡಿ ಹಾಗೂ ಜೇಡ್ ಸಂಗೀತ ಚಿತ್ರಕ್ಕಿದೆ.

ಜೂನ್ 26ಕ್ಕೆ 'ಮೋಡ ಕವಿದ ವಾತಾವರಣ' ಸಿನಿಮಾ ತೆರೆಗೆ ಬರಲಿದೆ. ಈ ವರ್ಷ ಕನ್ನಡ ಸಿನಿಮಾಗಳ ಸಾಧನೆ ಹೇಳಿಕೊಳ್ಳುವಂತಿಲ್ಲ. ಹಾಗಾಗಿ 'ಮೋಡ ಕವಿದ ವಾತಾವರಣ' ಸಿನಿಮಾ ಮೇಲೆ ಕೊಂಚ ನಿರೀಕ್ಷೆಯಿದೆ. ಸದಭಿರುಚಿ ಸಿನಿಮಾಗಳ ಮೂಲಕ ಸುನಿ ಪದೇ ಪದೆ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಪ್ಯಾನ್ ಇಂಡಿಯಾ ಹುಚ್ಚಿಗೆ ಬೀಳದೇ ನಮ್ಮ ಪ್ರೇಕ್ಷಕರಿಗೆ ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಸಿನಿಮಾಗಳಿಗೆ ಒಂದು ಪ್ರೇಕ್ಷಕ ವರ್ಗ ಸೃಷ್ಟಿಸಿಕೊಂಡಿದ್ದಾರೆ.

ಸದ್ಯ ಶಿಷ್ಯನನ್ನೇ ಹೀರೊ ಮಾಡುವ ಸಾಹಸ ಮಾಡುತ್ತಿದ್ದಾರೆ. ವಿಭಿನ್ನ ಪ್ರಯೋಗಾತ್ಮಕ ಸಿನಿಮಾಗಳನ್ನು ಕೊಡಲು ಸುನಿ ಪ್ರಯತ್ನಿಸುತ್ತಾರೆ. 'ಮೋಡ ಕವಿದ ವಾತಾವರಣ' ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಕಾದು ನೋಡಬೇಕು.

Read more about: vijay suni sanalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X