»   » ಹೌದು. ಬಾಲಿವುಡ್‌ ಸದ್ದಿನ ಪ್ರಕಾರ ಪ್ರಭುದೇವ್‌ ಸೋದರ, ಅಮಿತಾಬ್‌ ನೆಚ್ಚಿನ ರಾಜು ಉರುಫ್‌ ಮೂಗೂರು ಬಸವರಾಜ್‌ ಈಗ ಸಿಮ್ರಾನ್‌ ಗಂಡ.

ಹೌದು. ಬಾಲಿವುಡ್‌ ಸದ್ದಿನ ಪ್ರಕಾರ ಪ್ರಭುದೇವ್‌ ಸೋದರ, ಅಮಿತಾಬ್‌ ನೆಚ್ಚಿನ ರಾಜು ಉರುಫ್‌ ಮೂಗೂರು ಬಸವರಾಜ್‌ ಈಗ ಸಿಮ್ರಾನ್‌ ಗಂಡ.

Subscribe to Filmibeat Kannada

‘ಉಷೆ ಬಂದಾಳಮ್ಮ’ ಎನ್ನುವ ಶಿವರಾಜ್‌ ಹಾಡು ಕುಣಿತಕ್ಕೆ ಸಿಂಹದ ಮರಿಯಲ್ಲಿ ಬಿಡು ಬೀಸಾಗಿ ಕುಣಿದಿದ್ದ ಸಿಮ್ರಾನ್‌ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಬಾಲಿವುಡ್‌ ಓಣಿಗಳಿಂದ ಸಣ್ಣಗೆ ಕೇಳಿಬರುತ್ತಿದೆ.

ಮೂಳೆಯಿಲ್ಲದ ಮನುಷ್ಯ ಪ್ರಭುದೇವ್‌ ಸೋದರ ಬಸವರಾಜ್‌ ಸುಂದರಂ ಅವರನ್ನು ಸಿಮ್ರಾನ್‌ ಮದುವೆಯಾಗಿದ್ದಾರೆ, ಆ ಮೂಲಕ ಸಿಮ್ರಾನ್‌ ಸುಂದರಂ ಆಗಿದ್ದಾರೆ ಎನ್ನುವುದು ಸುದ್ದಿ. ಇದು ನಿಜವಾದಲ್ಲಿ ಸಿಮ್ರಾನ್‌ ಕನ್ನಡದ ಸೊಸೆಯಾಗುತ್ತಾರೆ. ಏಕೆಂದರೆ ಬಸವರಾಜ್‌ ಕನ್ನಡ ಸಿನಿಮಾದ ಪ್ರಖ್ಯಾತ ನೃತ್ಯ ನಿರ್ದೇಶಕ ಮೂಗೂರು ಸುಂದರಂ ಅವರ ಪುತ್ರ. ಲಾಕಪ್‌ಡೆತ್‌ ಸಿನಿಮಾ ನೋಡಿದ್ದಲ್ಲಿ ಸಿಲ್ಕ್‌ ಜೊತೆಗೆ ಬಸವರಾಜ್‌ರ ಮಿಂಚಿನ ಹೆಜ್ಜೆಗಳನ್ನು ಮರೆತಿರಲಾರಿರಿ.


ಈಚೆಗೆ ತಮಿಳು ಚಿತ್ರರಂಗದಲ್ಲಿ ಅಣ್ಣನನ್ನೂ ಹಿಂದಿಕ್ಕಿದ ಬಸವರಾಜು, ಈಗ ಅಮಿತಾಬ್‌ರ ನೆಚ್ಚಿನ ರಾಜು ಕೂಡ ಹೌದು. ಇತ್ತೀಚೆಗೆ ತೆರೆ ಕಂಡ ಅಮಿತಾಬ್‌ ಅಭಿನಯದ ‘ಅಕ್ಸ್‌’ ಚಿತ್ರದ ಕೊರಿಯೋಗ್ರಫಿ ರಾಜು ಅವರದ್ದೇ. ಅಮಿತಾಬ್‌ಗೆ ಹೆಜ್ಜೆ ಹಾಕೋದು ಹೇಗೆ ಎಂದು ಹೇಳಿಕೊಡುವ ಭಾಗ್ಯ ತಮ್ಮದಾಗಿದ್ದಕ್ಕೆ ಸಂತೋಷಿಸುವ ಬಸವರಾಜ್‌, ಸಿಮ್ರಾನ್‌ ಎಂದಾಕ್ಷಣ ನಿಂತಲ್ಲೇ ಕುಣಿದಾಡುತ್ತಾರೆ.

ಜ್ಯೋತಿಕಾ, ರಿಯಾ ಸೇನ್‌ ಹಾವಳಿ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿರುವ ಈ ದಿನಗಳಲ್ಲಿ ಸಿಮ್ರಾನ್‌ಗೆ ಸಾಕಷ್ಟು ಬಿಡುವು ಸಿಕ್ಕಿದೆ. ಈ ಕಾರಣಕ್ಕೇ ಏನೋ, ಅವರು ಮದುವೆ ಮಾಡಿಕೊಂಡು ಸದ್ಯಕ್ಕೆ ಹೌಸ್‌ವೈಫ್‌ ಆಗಿದ್ದಾರೆ. ಯಾವ ನಾಯಕನಿಗೂ ಒಲಿಯದ ಭಾಗ್ಯ ರಾಜು ಎಂಬ ಕನ್ನಡದ ಕಪ್ಪು ಹುಡುಗನಿಗೆ ಒಲಿಯಿತಲ್ಲಾ ಅಂತ ಅನೇಕರು ಕರುಬುತ್ತಿರುವುದು ಸುಳ್ಳಲ್ಲ.

Post your opinion

ಮದುವೆ, ಮರು ಮದುವೆ ಮತ್ತು ಬದುಕು

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada