For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕರು ಕೊಟ್ಟಿದ್ದ ಚೆಕ್ ಬೌನ್ಸ್: ಕೋರ್ಟ್ ಮೆಟ್ಟಿಲೇರಿದ ನಟಿ ಸಿಂಧು ಲೋಕನಾಥ್

  By Harshitha
  |

  ಮೂರು ವರ್ಷಗಳ ನಂತರ ನಟಿ ಸಿಂಧು ಲೋಕನಾಥ್ ಬಣ್ಣ ಹಚ್ಚಿದ್ದು 'ಹೀಗೊಂದು ದಿನ' ಚಿತ್ರಕ್ಕಾಗಿ. ಮದುವೆ ಆದ ಬಳಿಕ ಬಿಡುಗಡೆ ಆದ ಸಿಂಧು ಲೋಕನಾಥ್ ರವರ ಮೊದಲ ಸಿನಿಮಾ 'ಹೀಗೊಂದು ದಿನ'.

  'ಹೀಗೊಂದು ದಿನ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಇದರಲ್ಲಿ ಸಿಂಧು ಲೋಕನಾಥ್ ಜಾನವಿ ಎಂಬ ಹುಡುಗಿಯ ಪಾತ್ರ ನಿರ್ವಹಿಸಿದ್ದರು. 'ಅನ್ ಕಟ್' ಸಿನಿಮಾ ಬೇರೆ ಆಗಿದ್ದರಿಂದ, ಇದಕ್ಕಾಗಿ ಪೂರ್ವ ತಯಾರಿ ಕೂಡ ಮಾಡಿಕೊಂಡಿದ್ದರು.

  ಸಂದರ್ಶನ: 'ಹೀಗೊಂದು ದಿನ'ದಲ್ಲಿ 'ರೆಬೆಲ್' ಆದ ಸಿಂಧು ಲೋಕನಾಥ್ಸಂದರ್ಶನ: 'ಹೀಗೊಂದು ದಿನ'ದಲ್ಲಿ 'ರೆಬೆಲ್' ಆದ ಸಿಂಧು ಲೋಕನಾಥ್

  ವಿಕ್ರಂ ಯೋಗಾನಂದ್ ನಿರ್ದೇಶನ ಮಾಡಿದ ಪ್ರಯೋಗಾತ್ಮಕ ಚಿತ್ರವಾಗಿದ್ದ 'ಹೀಗೊಂದು ದಿನ' ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಲಿಲ್ಲ. ಹಾಗೇ, ನಾಯಕಿ ಸಿಂಧು ಲೋಕನಾಥ್ ಗೆ ಬರಬೇಕಿದ್ದ ಸಂಭಾವನೆ ಕೂಡ ಬಂದಿಲ್ಲ.

  ಹೌದು, ನಟಿ ಸಿಂಧು ಲೋಕನಾಥ್ ಗೆ ಕೊಡಬೇಕಿದ್ದ ಸಂಭಾವನೆಯಲ್ಲಿ ನಿರ್ಮಾಪಕರು ಎರಡು ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದ್ದರು. ಅದಕ್ಕಾಗಿ ಚೆಕ್ ಕೊಟ್ಟಿದ್ದರು. ಆದ್ರೆ, ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಕೊಟ್ಟಿದ್ದ ಎರಡು ಲಕ್ಷ ರೂಪಾಯಿ ಚೆಕ್ ಬೌನ್ಸ್ ಆಗಿದೆ.

  ಹೀಗಾಗಿ, 'ಹೀಗೊಂದು ದಿನ' ನಿರ್ಮಾಪಕರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ, ಕೋರ್ಟ್ ಮೆಟ್ಟಿಲೇರಿದ್ದಾರೆ ನಟಿ ಸಿಂಧು ಲೋಕನಾಥ್.

  English summary
  Kannada Actress Sindhu Lokanath approaches court against Producer of 'Heegondu Dina'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X