'ಕೃಷ್ಣ ಟಾಕೀಸ್' ಓನರ್ ಆದ ಸಿಂಧು ಲೋಕನಾಥ್
ನಟಿ ಸಿಂಧು ಲೋಕನಾಥ್ ವೈವಾಹಿಕ ಜೀವನದ ಬಗ್ಗೆ ಕೆಲವು ಗಾಸಿಪ್ ಗಳು ಹರಿದಾಡಿದ್ದವು. ಅದೇನೇ ಇದ್ದರೂ ಈಗ ಅವರು ಹೊಸ ಸಿನಿಮಾ ಶುರು ಮಾಡಿದ್ದಾರೆ.
'ಕೃಷ್ಣ ಟಾಕೀಸ್' ಎಂಬ ಸಿನಿಮಾದಲ್ಲಿ ಸಿಂಧು ಲೋಕನಾಥ್ ನಾಯಕಿಯಾಗಿದ್ದಾರೆ. ಇದು ಕೃಷ್ಣ ಅಜಯ್ ರಾವ್ ನಟನೆಯ ಹೊಸ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಅಪೂರ್ವ ಹಾಗೂ ಸಿಂಧು ತೆರೆ ಹಂಚಿಕೊಳ್ಳಲಿದ್ದಾರೆ.
ಈ ಹಿಂದೆ ಅಜಯ್ ರಾವ್ ಹಾಗೂ ಸಿಂಧು ಲೋಕನಾಥ್ 'ಜೈ ಭಜರಂಗ ಬಲಿ' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ಮತ್ತೆ ಈ ಜೋಡಿ ಸಿನಿಮಾ ಮಾಡುತ್ತಿದ್ದಾರೆ.

ಅಜಯ್ ಕೆರಿಯರ್ ನಲ್ಲಿ ಕೃಷ್ಣ ಸೀರಿಸ್ ಮತ್ತೆ ಈ ಚಿತ್ರದ ಮೂಲಕವೂ ಮುಂದುವರೆದಿದೆ. ಈ ಸಿನಿಮಾದ ಮುಹೂರ್ತ ಇಂದು ನೆಲಮಂಗಲದ ಬಳಿ ನೆರವೇರಿದೆ. ಆನಂದ್ ಪ್ರಿಯಾ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಿಂದ ಅವರು ವಿಜಯಾನಂದ ಎಂದು ಹೆಸರು ಬದಲಿಸಿಕೊಂಡಿದ್ದಾರೆ.
ಶ್ರೀಧರ್ ಸಂಭ್ರಮ್ ಮ್ಯೂಸಿಕ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಗೋಕುಲ ಎಂಟಟೈನರ್ಸ್ ಬ್ಯಾನರ್ ನಲ್ಲಿ ಅಜಯ್ ಹೊಸ ಸಿನಿಮಾವನ್ನು ಮಾಡುತ್ತಿದ್ದಾರೆ. ಗೋವಿಂದ ರಾಜು ಎ ಹೆಚ್ ಹಾಗೂ ಕೃಷ್ಣಮೂರ್ತಿ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ.
'ಇರುವುದೆಲ್ಲವ ಬಿಟ್ಟು' ಹಾಗೂ 'ರಂಗಿತರಂಗ' ಚಿತ್ರಗಳಿಗೆ ಕೆಲಸ ಮಾಡಿದ್ದ ವಿಲಿಯಂ ಡೇವಿಡ್ ಈ ಸಿನಿಮಾದ ಛಾಯಾಗ್ರಾಹಕರಾಗಿದ್ದಾರೆ.


Click it and Unblock the Notifications











