ರಿಲೀಸ್ ಆದ ಎರಡೇ ಎರಡನೇ ಪೈರಸಿ ಆಯ್ತು 'ಸಿಂಗ' ಸಿನಿಮಾ
ಸಿನಿಮಾಗಳಿಗೆ ದೊಡ್ಡ ಶತ್ರು ಪೈರಸಿ. ಸಿನಿಮಾದ ಒಳಗೆ ಹೀರೋಗೆ ವಿಲನ್ ಕಾಟ ಕೊಡುವುದಕ್ಕಿಂತ ಹೆಚ್ಚಾಗಿ, ಪೈರಸಿ ಚಿತ್ರತಂಡಕ್ಕೆ ತೊಂದರೆ ನೀಡುತ್ತದೆ. ಈಗ ಪೈರಸಿ ವಿರುದ್ಧ ಹೋರಾಡುವ ಸಮಯ ಬಂದಿರುವುದು 'ಸಿಂಗ' ಚಿತ್ರತಂಡಕ್ಕೆ.
ಕಳೆದ ಶುಕ್ರವಾರ ಬಿಡುಗಡೆಯಾಗಿರುವ 'ಸಿಂಗ' ಸಿನಿಮಾ ಈಗ ಆನ್ ಲೈನ್ ನಲ್ಲಿ ಲೀಕ್ ಆಗಿದೆ. ತಮಿಳು ಎಮ್ ವಿ ವೆಬ್ ಸೈಟ್ ನಲ್ಲಿ ಪೂರ್ತಿ ಸಿನಿಮಾ ಪೈರಸಿ ಆಗಿದೆ. 720K ಕ್ವಾಲಿಟಿಯ ವಿಡಿಯೋವನ್ನೇ ಈ ವೆಬ್ ಸೈಟ್ ನಲ್ಲಿ ಲೀಕ್ ಮಾಡಿದೆ.
ಒಂದು ಕಡೆ ಚಿತ್ರಮಂದಿರದಲ್ಲಿ ಸಿನಿಮಾ ಇದ್ದರೆ, ಮತ್ತೊಂದು ಕಡೆ ತಮಿಳು ಎಮ್ ವಿ ವೆಬ್ ಸೈಟ್ ಚಿತ್ರವನ್ನು ಅಪ್ ಲೋಡ್ ಮಾಡಿದೆ. ಇದರ ವಿರುದ್ಧ ಚಿತ್ರತಂಡ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ಪ್ರಶ್ನೆ ಮೂಡಿದೆ.

'ಸಿಂಗ' ಚಿರಂಜೀವಿ ಸರ್ಜಾ, ಅತಿದಿ ಪ್ರಭುದೇವ ಹಾಗೂ ತಾರ ನಟನೆಯ ಸಿನಿಮಾವಾಗಿದೆ. ಸಿನಿಮಾ ಹಾಡುಗಳು ಹಿಟ್ ಆಗಿದೆ. ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಒಳ್ಳೆ ಮಾತುಗಳು ಕೇಳಿ ಬರುತ್ತಿವೆ.
ಅಂದಹಾಗೆ, ಹೊಸ ಹೊಸ ಸಿನಿಮಾಗಳು ಈ ರೀತಿ ಪೈರಸಿ ಆಗುತ್ತಿರುವುದು ಚಿತ್ರತಂಡ ಮೇಲೆ ನೇರವಾಗಿ ಹೊಡೆತ ಕೊಡುತ್ತಿದೆ.


Click it and Unblock the Notifications











