For Quick Alerts
  ALLOW NOTIFICATIONS  
  For Daily Alerts

  ನಾಯಕಿಯಾದ 'ಸೋಜುಗಾದ ಸೂಜು ಮಲ್ಲಿಗೆ' ಗಾಯಕಿ ಅನನ್ಯಾ ಭಟ್

  |

  'ಸೋಜುಗಾದ ಸೂಜು ಮಲ್ಲಿಗೆ' ಹಾಡಿನಿಂದ ಮನೆಮಾತಾದ ಅನನ್ಯಾ ಭಟ್ ಈಗ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

  ಕನ್ನಡದ ಬಹುಬೇಡಿಕೆಯ ಗಾಯಕಿಯಾಗಿರುವ ಅನನ್ಯಾ ಭಟ್, ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅನನ್ಯಾ ಭಟ್.

  ಎರಡು ದಶಕಗಳ ಹಿಂದೆ ಕುಂದಾಪುರ, ಬೈಂದೂರು, ಭಟ್ಕಳಗಳಲ್ಲಿ ನಡೆದ ನಿಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡ ಗುರು ಸವನ್ ಎಂಬುವರು ಸಿನಿಮಾ ನಿರ್ದೇಶಿಸುತ್ತಿದ್ದು, ಸಿನಿಮಾಕ್ಕೆ 'ಸೇನಾಪುರ' ಎಂದು ಹೆಸರಿಡಲಾಗಿದೆ.

  ಸಿನಿಮಾವನ್ನು ಅಮಿತ್ ಕುಮಾರ್, ರಾಹುಲ್ ದೇವ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಅನನ್ಯಾ ಭಟ್, ದಿನೇಶ್ ಮಂಗಳೂರು, ಗಿರಿರಾಜ್ ಇನ್ನೂ ಕೆಲವು ಪ್ರಮುಖ ನಟರು ಇರಲಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡುವವರು ಮಿಲನ್ ಹರೀಶ್ ಮತ್ತು ಅನನ್ಯಾ ಭಟ್.

  Shivaraj Kumar and Rakshith Shetty awarded Dadasaheb Phalke Award south 2020 | Filmibeat kannada

  ಈ ಸಿನಿಮಾ ಅನನ್ಯಾ ಭಟ್ ಅವರಿಗೆ ಮೂರನೇ ಸಿನಿಮಾ ಅಂತೆ. ಈ ಹಿಂದೆ ಹಲವಾರು ಅವಕಾಶಗಳು ಬಂದಿದ್ದವಾದರೂ ಕತೆ ಇಷ್ಟವಾಗದೆ ನಟಿಸಿರಲಿಲ್ಲ ಅನನ್ಯಾ, ಈಗ ಕತೆ ಇಷ್ಟವಾದ ಕಾರಣ ನಟಿಸುತ್ತಿರುವುದಾಗಿ ಹೇಳಿದ್ದಾರೆ.

  English summary
  Singer Ananya Bhatt acting in new movie named 'Senapura' which is based on true story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X