twitter
    For Quick Alerts
    ALLOW NOTIFICATIONS  
    For Daily Alerts

    ಫ್ರೊಫೆಸರ್ ಕೊಲೆ ಪ್ರಕರಣ: ಗಾಯಕಿ ಅನನ್ಯ ಭಟ್ ತಂದೆ ಬಂಧನ

    |

    ಮಾದೇವ ಹಾಡಿನಿಂದ ಖ್ಯಾತಿಯ ಉತ್ತಂಗಕ್ಕೇರಿದ ಗಾಯಕಿ ಅನನ್ಯ ಭಟ್ ಅವರ ತಂದೆ ವಿಶ್ವನಾಥ್ ಅನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಬಂಧಿಸಿದ್ದಾರೆ.

    ಸೆಪ್ಟೆಂಬರ್ 20 ರಂದು ಮೈಸೂರಿನಲ್ಲಿ ನಿವೇದಿತಾ ನಗರದಲ್ಲಿ ನಿವೃತ್ತ ಪ್ರಾಂಶುಪಾಲರನ್ನು ಕೊಲೆ ಮಾಡಲಾಗಿತ್ತು. ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

    ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ, ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಕಳೆದ ಸೆಪ್ಟೆಂಬರ್‌ 20 ರಂದು ತಮ್ಮ ಮನೆಯಲ್ಲೆ ಕೊಲೆಯಾಗಿದ್ದರು. ಮೃತರ ಪತ್ನಿ ಸವಿತ ನೀಡಿದ ದೂರಿನ ಮೇರೆಗೆ ಮೊಕದ್ದಮೆ ದಾಖಲಿಸಿದ್ದರು ಎಂದಿದ್ದಾರೆ.

    ತನಿಖೆಯ ವೇಳೆ ಕೊಲೆ ಮಾಡಿದ ಆರೋಪಿಗಳಾದ ಐಡಿಎಫ್ ಸಿ ಬ್ಯಾಂಕ್ ನಲ್ಲಿ ರಿಕವರಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಭುಗತಹಳ್ಳಿ ಗ್ರಾಮದ ನಿವಾಸಿ ನಾಗೇಶ ಎಂ.ಬಿನ್ ಮಹಾದೇವ (37), ಗಾರೆ ಕೆಲಸ ಮಾಡುವ ಭುಗತಹಳ್ಳಿ ಗ್ರಾಮದ ನಿವಾಸಿ ನಿರಂಜನ್ ಎನ್(22), ಮಡಿವಾಳಸ್ವಾಮಿ ಸಂಸ್ಕೃತ ಪಾಠಶಾಲೆಯ ಶಿಕ್ಷಕ, ಸಿದ್ದರಾಜು ಬಿನ್ ಮಹದೇವಪ್ಪ(54) ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ಕೆ.ಆರ್.ಮೊಹಲ್ಲಾ ನಿವಾಸಿ ವಿಶ್ವನಾಥ ಕೆ.ಬಿನ್ ಲೇಟ್ ಕೃಷ್ಣಭಟ್(52) ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಸಹಶಿಕ್ಷಕ, ಪರಶಿವ ಬಿನ್ ಪುಟ್ಟಸ್ವಾಮಿ(55) ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

    ಬಂಧಿತರಿಂದ ನಗದು ಹಣ ವಸೂಲಿ

    ಬಂಧಿತರಿಂದ ನಗದು ಹಣ ವಸೂಲಿ

    ಬಂಧಿತರಿಂದ 55,000ರೂ. ನಗದುಹಣ, ನಾಲ್ಕು ದ್ವಿಚಕ್ರವಾಹನಗಳು, ಒಂದು ಟಾಟಾ ಐಸ್ ಗೂಡ್ಸ್ ವಾಹನ, ಎಂಟು ಮೊಬೈಲ್ , ಎರಡು ಚಾಕು, ರಕ್ತಸಿಕ್ತ ಬಟ್ಟೆಗಳು ಹಾಗೂ ಇತರೆ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಹಿಂಸೆ ನೀಡುತ್ತಿದ್ದ ಪರಶಿವಮೂರ್ತಿ

    ಹಿಂಸೆ ನೀಡುತ್ತಿದ್ದ ಪರಶಿವಮೂರ್ತಿ

    ಮೃತ ಪರಶಿವಮೂರ್ತಿ ನಡೆಸುತ್ತಿದ್ದ ಸಂಸ್ಕೃತ ಪಾಠಶಾಲೆಯಲ್ಲಿನ ಶಿಕ್ಷಕರು ಪ್ರತಿತಿಂಗಳು ಅವರ ವೇತನದಲ್ಲಿ ನಿರ್ದಿಷ್ಟಪಡಿಸಿದ ಹಣ ನೀಡುವಂತೆ ನೀಡುತ್ತಿದ್ದ ಕಿರುಕುಳ, ಹಿಂಸೆ, ಹಾಗೂ ಅವಾಚ್ಯಶಬ್ದಗಳಿಂದ ಬೈದಾಡುತ್ತ ತುಚ್ಛವಾಗಿ ಕಾಣುತ್ತಿರುವುದೇ ಕೊಲೆಗೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಗಳು ಬಾಯ್ಬಿಟ್ಟಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಏಳು ಲಕ್ಷ ರೂಪಾಯಿಗೆ ಸುಫಾರಿ

    ಏಳು ಲಕ್ಷ ರೂಪಾಯಿಗೆ ಸುಫಾರಿ

    ಆರೋಪಿಗಳಾದ ಕೃಷ್ಣ ಭಟ್‌ ಮತ್ತು ಸಹ ಶಿಕ್ಷಕ ಪುಟ್ಟ ಸ್ವಾಮಿ ಅವರು ಮೃತರ ಬಗ್ಗೆ ದ್ವೇಷ ಹೊಂದಿದ್ದು ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ ಎಂದು ತಿಳಿಸಿದರು. ಕೊಲೆ ಮಾಡಲು ಏಳು ಲಕ್ಷ ರೂಪಾಯಿ ಸುಫಾರಿ ನೀಡಿದ್ದರಂತೆ, ಸುಫಾರಿ ಪಡೆದಿದ್ದ ನಿರಂಜನ್ ಮತ್ತು ನಾಗೇಶ್ ಕೊಲೆ ಮಾಡಿದ್ದರು.

    Recommended Video

    ಮತ್ತೆ ಶಾಲೆಗೆ ಸೇರಿದ ರಶ್ಮಿಕಾ ಮಂದಣ್ಣ | Pushpa | Allu Arjun | Filmibeat Kannada
    ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚನೆ

    ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚನೆ

    ಆರೋಪಿಗಳ ಪತ್ತೆಕಾರ್ಯದಲ್ಲಿ ಡಿಸಿಪಿ ಗೀತಪ್ರಸನ್ನ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ ಉಸ್ತುವಾರಿಯಲ್ಲಿ ಆರೋಪಿಗಳ ಪತ್ತೆಗಾಗಿ ಸರಸ್ವತಿಪುರಂ ಪೊಲೀಸ್ ಠಾಣೆಯ ಪಿಐ ಆರ್.ವಿಜಯಕುಮಾರ್, ಕುವೆಂಪುನಗರ ಪೊಲೀಸ್ ಠಾಣೆಯ ಪಿಐ ಜೆ.ಸಿ.ರಾಜು, ಸರಸ್ವತಿಪುರಂ ಪೊಲೀಸ್ ಠಾಣೆಯ ಪಿಎಸ್ ಐ ಭವ್ಯ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

    English summary
    Singer Ananya Bhatt's father arrested in professor Parashivamurthy murder case. Total five accused arrested by Mysuru police.
    Wednesday, October 28, 2020, 14:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X