ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈಗ ಗುಪ್ತಚರ ಅಧಿಕಾರಿ

ಗಾಯಕ ಮತ್ತು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈಗ ಮತ್ತೊಂದು ಸಾಧನೆ ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ರಘು ದೀಕ್ಷಿತ್ ಈಗ ಗುಪ್ತಚರ ಅಧಿಕಾರಿಯಾಗಿದ್ದಾರೆ. ಅಚ್ಚರಿ ಪಡಬೇಡಿ ರಘು ದೀಕ್ಷಿತ್ ನಟನೆಗೆ ಇಳಿದಿದ್ದಾರೆ. ಮೊದಲ ಬಾರಿಗೆ ಬಣ್ಣ ಹಚ್ಚುವ ಮೂಲಕ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಅಂದ್ಹಾಗೆ ರಘು ದೀಕ್ಷಿತ್ 'ಗರುಡ' ಚಿತ್ರದ ಮೂಲಕ ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದಲ್ಲಿ ರಘು ಗುಪ್ತಚರ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ವಿಶೇಷ ಅಂದ್ರೆ ಈ ಪಾತ್ರಕ್ಕೆ ರಾಷ್ಟ್ರೀಯ ಭದ್ರತಾ ಸಲಹೇಗಾರ ಅಜಿತ್ ದೋವಲ್ ಅವರೆ ಸ್ಫೂರ್ತಿ ಅಂತೆ.

ಪಾತ್ರದ ಬಗ್ಗೆ ಹೆಚ್ಚೇನು ಬಿಟ್ಟಕೊಡದ ಚಿತ್ರತಂಡ ರಘು ಬಣ್ಣ ಹಚ್ಚಿರುವ ಕೆಲವು ಫೋಟೋಗಳನ್ನು ಸಾಮಾಜಿಕಾ ಜಾಲತಾಣದಲ್ಲಿ ಹರಿಬಿಟ್ಟಿದೆ. ಈಗಾಗಲೆ ಚಿತ್ರೀಕರಣ ಮುಗಿಸಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. 'ಗರುಡ' ಧನುಕುಮಾರ್ ನಿರ್ದೇಶನದ ಸಿನಿಮಾ.

Singer and composer Raghu Dixit makes acting debut with Garuda

'ಸಿಪಾಯಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಿದ್ಧಾರ್ಥ್ ಮಹೇಶ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮಹೇಶ್ ಗೆ ಇಲ್ಲಿ ಇಬ್ಬರು ನಾಯಕಿಯರು. ಐಂದ್ರಿತಾ ರೇ ಮತ್ತು ಆಶಿಕಾ ರಂಗನಾಥ್, ವಿಶೇಷ ಅಂದ್ರೆ ರಘು ದೀಕ್ಷಿತ್ ಚಿತ್ರದಲ್ಲಿ ನಟನೆ ಜೊತೆಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ 'ಗರುಡ' ಸದ್ಯದಲ್ಲೆ ತೆರೆಗೆ ಬರಲಿದೆ.

More from Filmibeat

English summary
Singer and composer Raghu Dixit makes his Sandalwood acting debut with the upcoming 'Garuda'. The film, which has Siddharth Mahesh, Ashika Ranganath and Aindrita Ray in the lead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X