ಪುನೀತ್‌ಗೆ ಅರ್ಜುನ್ ಇಟಗಿಯ ಕಣ್ಣೀರ ಶ್ರದ್ಧಾಂಜಲಿ
ಪುನೀತ್ ಅಂದರೆ ಚಿಕ್ಕ ಮಕ್ಕಳಿಗೆ ತುಂಬ ಇಷ್ಟ. ಯಾವ ಹೀರೋ ನಿನಗೆ ಇಷ್ಟ ಅಂತ ಕೇಳಿದರೆ ಸಾಕು ಹೆಚ್ಚಿನ ಮಕ್ಕಳು ಅಪ್ಪು ಅಂದ್ರೆ ಇಷ್ಟ ಅನ್ನುತ್ತಾರೆ. ಅವರ ಡ್ಯಾನ್ಸ್‌ಗೆ ಹೆಚ್ಚಿನ ಮಕ್ಕಳು ಅಪ್ಪುರನ್ನು ಇಷ್ಟಪಡುತ್ತಾರೆ. ಪುನೀತ್ ನಿಧನದ ಸುದ್ದಿ ಕೇಳಿ ಅದೆಷ್ಟೋ ಪುಟ್ಟು ಪುಟ್ಟ ಅಭಿಮಾನಿಗಳು ಅಪ್ಪುನ ನೋಡಬೇಕು ಎಂದು ಕಣ್ಣೀರು ಸುರಿಸಿದ್ರು. ಮತ್ತಷ್ಟು ಮಂದಿ ತಮ್ಮ ಮಕ್ಕಳನ್ನು ಪುನೀತ್ ಅಂತಿಮ ದರ್ಶನಕ್ಕೆ ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಏನು ಅರಿಯದ ಪುಟ್ಟ ಮನಸ್ಸುಗಳು ಅದು ಹೇಗೆ ಬಿಕ್ಕಿ ಬಿಕ್ಕಿ ಅತ್ತರು ಅನ್ನೊದು ಎಲ್ಲರಿಗೂ ಗೊತ್ತು.
ಇದೀಗ ಅಪ್ಪುರನ್ನು ತುಂಬ ಇಷ್ಟಪಡುತ್ತಿದ್ದ ಬಾಲ ಗಾಯಕ ಅರ್ಜುನ್ ಇಟಕಿ ಗೊಂಬೆ ಹೇಳುತೈತೆ ಹಾಡನ್ನು ಹಾಡಿ ಪುನೀತ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಬಿಕ್ಕಿ ಬಿಕ್ಕಿ ಅಳುತ್ತಲೇ ಈ ಹಾಡನ್ನು ಹಾಡಿದ್ದಾರೆ ಬಾಲ ಪ್ರತಿಭೆ ಅರ್ಜುನ್ ಇಟಗಿ. ಕಣ್ಣಲ್ಲಿ ಕಣ್ಣೀರು ಸುರಿಸುತ್ತಲೇ ಭಾವಪೂರ್ವವಾಗಿ ಹಾಡಿ ಅಪ್ಪುವಿಗೆ ಅರ್ಪಿಸಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.
ಅರ್ಜುನ್ ಇಟಗಿ ರಿಯಾಲಿಟಿ ಶೋ ಮೂಲಕ ಸಾಕಷ್ಟು ಪ್ರಸಿದ್ಧಿಯನ್ನು ಪಡೆದವರು. ಪುನೀತ್ ಹಾಡುಗಳನ್ನು ಸಾಕಷ್ಟು ಹಾಡಿ ಜನ ಮೆಚ್ಚುಗೆ ಪಡೆದಿದ್ದರು. ಅಷ್ಟೆ ಅಲ್ಲದೇ ನಾನು ಪುನೀತ್ ಅವರು ಹಾಡು ಮತ್ತು ಡ್ಯಾನ್ಸ್‌ಗೆ ಅಭಿಮಾನಿ ಎಂದು ಕೂಡ ಅರ್ಜುನ್ ಹೇಳಿಕೊಂಡಿದ್ದಾರೆ. ಇದೀಗ ನೆಚ್ಚಿನ ನಟನನ್ನು ಕಳೆದುಕೊಂಡಿರುವುದಕ್ಕೆ ಬೇಸರಗೊಂಡು ಈ ಹಾಡನ್ನು ಹಾಡಿದ್ದಾರಂತೆ.

ಸಾಕಷ್ಟು ಆರ್ಕೆಸ್ಟ್ರಾದಲ್ಲೂ ಪುನೀತ್ ಹಾಡುಗಳನ್ನು ಇವರು ಹಾಡಿದ್ದಾರೆ. ಇವರು ಸ್ಟೇಜ್‌ಗೆ ಬಂದರೆ ಪುನೀತ್ ಹಾಡು ಹಾಡಿ ಅಂತ ಜನ ಕೇಳಿಕೊಳ್ಳುತ್ತಿದ್ದರಂತೆ. ಅವರನ್ನೆ ಹೆಚ್ಚಾಗಿ ಅರ್ಜುನ್ ಅನುಸರಿಸುತ್ತಿದ್ದರು. ಹೆಚ್ಚಾಗಿ ದೇಸಿ ಹಾಡುಗಳು, ಜಾನಪದ ಹಾಡುಗಳನ್ನೆ ಹಾಡುತ್ತಿದ್ದ ಅರ್ಜುನ್ ಸಿನಿಮಾ ಹಾಡುಗಳು ಅಂತ ಬಂದರೆ ಮೊದಲು ಆಯ್ಕೆ ಮಾಡಿಕೊಳ್ಳುತ್ತಿದ್ದದ್ದು ಪುನೀತ್ ಹಾಡುಗಳನ್ನು ಅಂತೆ. ಹೀಗೆ ಪುನೀತ್ ಅವರನ್ನೇ ಉಸಿರಾಗಿಸಿಕೊಂಡಿದ್ದ ಅರ್ಜುನ್ ಅಪ್ಪು ಅವರನ್ನು ಕಳೆದುಕೊಂಡಿರುವ ನೋವು ಸಹಿಸಲಾಗದೇ ದುಖಿಃಸುತ್ತಿದ್ದಾರೆ.


Click it and Unblock the Notifications











