For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಿ 'ಮಾಸ್ತಿ ಗುಡಿ'ಯಲ್ಲಿ ಸಿ ಅಶ್ವಥ್ ಗಾಯನದ ಕಂಪು

  By Suneetha
  |

  ನಟ ಕಮ್ ನಿರ್ದೇಶಕ ನಾಗಶೇಖರ್ ಅವರು ಸಿ.ಅಶ್ವಥ್ ಅವರ ಕಟ್ಟಾ ಅಭಿಮಾನಿ ಎಂಬ ವಿಚಾರ ನಿಮಗೆ ಗೊತ್ತೇ ಇದೆ. ನಾಗಶೇಖರ್ ಅವರು ಸಿ.ಅಶ್ವಥ್ ಅವರ ಹಾಡುಗಳನ್ನು ಹಾಡುವುದು ಮಾತ್ರವಲ್ಲದೇ, ತಮ್ಮ ಚಿತ್ರಕ್ಕೆ ಕೂಡ ಬಳಸಿಕೊಳ್ಳುತ್ತಾರೆ.

  ಈ ಮೊದಲು 'ಮೈನಾ' ಸಿನಿಮಾದಲ್ಲಿ ಅಶ್ವಥ್ ಅವರು ಹಾಡಿರುವ 'ಕಾಣದ ಕಡಲಿಗೆ ಹಂಬಲಿಸಿದೆ ಮನ' ಎಂಬ ಹಾಡನ್ನು ಬಳಸಿಕೊಂಡಿದ್ದರು. ಗಾಂಧಿನಗರದಲ್ಲಿ ಆ ಹಾಡು ಮಾತ್ರವಲ್ಲದೇ, ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು.[ಚಿತ್ರಗಳು: ವಿಜಿ 'ಮಾಸ್ತಿ ಗುಡಿ'ಗೆ ಅಮ್ಮಂದಿರಿಂದ ಮುಹೂರ್ತ]

  ಇದೀಗ ಹೊಸ ಸುದ್ದಿ ಏನಪ್ಪಾ ಅಂದ್ರೆ ನಾಗಶೇಖರ್ ಅವರು ದುನಿಯಾ ವಿಜಯ್ ಅವರೊಂದಿಗೆ ಮಾಡುತ್ತಿರುವ 'ಮಾಸ್ತಿ ಗುಡಿ' ಚಿತ್ರಕ್ಕೂ ಅಶ್ವಥ್ ಅವರ ಜನಪ್ರಿಯ ಗೀತೆಯೊಂದನ್ನು ಬಳಸಿಕೊಳ್ಳಲು ತಯಾರಾಗಿದ್ದಾರೆ.[75ರ ಮುದುಕನ ಪಾತ್ರದಲ್ಲಿ ದುನಿಯಾ ವಿಜಿ ಮಿಂಚಿಂಗು]

  ಸಿ ಅಶ್ವಥ್ ಅವರು ಹಾಡಿರುವ 'ಒಳಿತು ಮಾಡು ಮನುಸ' ಹಾಡನ್ನು ದುನಿಯಾ ವಿಜಯ್ ಅವರ 'ಮಾಸ್ತಿ ಗುಡಿ' ಚಿತ್ರಕ್ಕೆ ನಿರ್ದೇಶಕ ನಾಗಶೇಖರ್ ಅವರು ಈ ಬಾರಿ ಬಳಸಿಕೊಂಡಿದ್ದಾರೆ. ಇನ್ನು ಈ ಹಾಡನ್ನು ಚಿತ್ರಕ್ಕೆ ಬಳಸಿಕೊಂಡಿರುವ ಬಗ್ಗೆ ನಾಗಶೇಖರ್ ಅವರೇ ಇತ್ತೀಚೆಗೆ ಹೇಳಿಕೊಂಡಿದ್ದಾರೆ.

  'ಒಳಿತು ಮಾಡು ಮನುಸ' ಹಾಡು ಬರೀ ಅರ್ಥಪೂರ್ಣವಾಗಿರುವುದಷ್ಟೇ ಅಲ್ಲ, ನಮ್ಮ ಚಿತ್ರದ ಸನ್ನಿವೇಶಗಳಿಗೆ ಹೇಳಿ ಮಾಡಿಸಿದಂತಿದೆ. ಅದೇ ಕಾರಣಕ್ಕಾಗಿ ಈ ಹಾಡನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ನಾಗಶೇಖರ್ ನುಡಿದಿದ್ದಾರೆ.

  ಈ ಹಿಂದೆ 'ಮೈನಾ' ಚಿತ್ರಕ್ಕೆ ಅಶ್ವಥ್ ಅವರ ಹಾಡನ್ನು ಬಳಸಿಕೊಂಡಾಗ, ತಮ್ಮ ಅನುಮತಿ ಇಲ್ಲದೆ ಹಾಡನ್ನು ಬಳಸಿಕೊಳ್ಳಲಾಗಿದೆ ಎಂದು ಲಹರಿ ವೇಲು ಅವರು ಕಿರಿಕ್ ಮಾಡಿದ್ದರು.

  ಈ ಬಾರಿ ಪೂರ್ವ ಅನುಮತಿ ಪಡೆದುಕೊಂಡು ಈ ಹಾಡನ್ನು ಬಳಸಿಕೊಳ್ಳುತ್ತಿರುವುದರಿಂದ ಅಂತಹ ಸಮಸ್ಯೆ ಏನೂ ಆಗುವುದಿಲ್ಲ ಎಂದು ನಿರ್ದೇಶಕ ನಾಗಶೇಖರ್ ಅವರೇ ಹೇಳಿದ್ದಾರೆ.

  English summary
  Singer cum Music Composer C Aswath's 'Olithu Maadu Manusa' song in Duniya Vijay's Kannada Movie 'Maasti Gudi'. The movie is directed by Nagashekhar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X