Don't Miss!
- News
ವಂಚನೆ ಪ್ರಕರಣ: ಮತ್ತೋರ್ವ ನಟಿಯನ್ನು ಮದುವೆಯಾಗಲು ಬಯಸಿದ್ದ ಸುಕೇಶ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರೋಹಿಣಿ ಸಿಂಧೂರಿ ವಿರುದ್ಧ ಖ್ಯಾತ ಗಾಯಕ ಲಕ್ಕಿ ಅಲಿ ಆರೋಪ
ಬಾಲಿವುಡ್‌ನ ಖ್ಯಾತ ಗಾಯಕ ಹಾಗೂ ನಟ ಲಕ್ಕಿ ಅಲಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಅವರ ಪತಿಯ ವಿರುದ್ಧ ಅಕ್ರಮ ಜಮೀನು ಅತಿಕ್ರಮಣದ ಆರೋಪ ಹೊರಿಸಿದ್ದಾರೆ.
ಬಾಲಿವುಡ್‌ನ ದಂತಕತೆ ಮೆಹಮೂದ್ ಖಾನ್‌ರ ಪುತ್ರರಾಗಿರುವ ಲಕ್ಕಿ ಅಲಿ ಬೆಂಗಳೂರಿನ ಹೊರವಲಯದಲ್ಲಿ ತಮ್ಮ ಫಾರಂ ಹೌಸ್‌ನಲ್ಲಿ ಬಹಳ ವರ್ಷಗಳಿಂದಲೂ ವಾಸವಿದ್ದು, ಅವರ ಜಮೀನನ್ನು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಅವರ ಪತಿ ಸುಧೀರ್ ರೆಡ್ಡಿ ಅವರುಗಳು ಅಕ್ರಮವಾಗಿ ತಮ್ಮ ಜಮೀನು ಅತಿಕ್ರಮಣ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಗಾಯಕ, ನಟ ಲಕ್ಕಿ ಅಲಿ, ''ನಾನು ಮಕ್ಸೂದ್ ಮೊಹಮ್ಮದ್ ಅಲಿ ಅಲಿಯಾಸ್ ಲಕ್ಕಿ ಅಲಿ, ಖ್ಯಾತ ನಟ ಮೆಹಮೂದ್ ಅಲಿಯ ಪುತ್ರ. ಪ್ರಸ್ತುತ ನಾನು ಕೆಲಸದ ನಿಮಿತ್ತ ದುಬೈಗೆ ಬಂದಿದ್ದೇನೆ. ಆದರೆ ಇದು ತುರ್ತಿನ ವಿಚಾರವಾಗಿರುವ ಕಾರಣ ಟ್ವೀಟ್ ಮೂಲಕ ನಿಮ್ಮ ಗಮನಕ್ಕೆ ತರುತ್ತಿದ್ದೇನೆ'' ಎಂದು ಡಿಜಿಪಿ ಕರ್ನಾಟಕ ಅವರಿಗೆ ಟ್ವೀಟ್ ಮಾಡಿದ್ದಾರೆ ಲಕ್ಕಿ ಅಲಿ.
''ನನ್ನ ಅಧಿಕೃತ ಫಾರಂ ಯಲಹಂಕದ ಕೆಂಚೇನಹಳ್ಳಿಯಲ್ಲಿ ಸ್ಥಿತವಾಗಿದ್ದು, ಈ ನನ್ನ ಪ್ರಾಪರ್ಟಿಯನ್ನು ಅಕ್ರಮವಾಗಿ ಸುಧೀರ್ ರೆಡ್ಡಿ ಹಾಗೂ ಮಧು ರೆಡ್ಡಿ ಎಂಬುವರು ಬೆಂಗಳೂರಿನ ಲ್ಯಾಂಡ್ ಮಾಫಿಯಾ ಸಹಾಯದೊಂದಿಗೆ ಅತಿಕ್ರಮಿಸಿದ್ದಾರೆ. ಇದಕ್ಕೆ ಸುಧೀರ್ ರೆಡ್ಡಿಯ ಪತ್ನಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನೆರವು ಸಹ ಇದೆ'' ಎಂದು ಟ್ವೀಟ್ ಮಾಡಿದ್ದಾರೆ ಲಕ್ಕಿ ಅಲಿ.

50 ವರ್ಷಗಳಿಂದಲೂ ಅಲ್ಲಿ ನೆಲೆಸಿದ್ದೇನೆ: ಲಕ್ಕಿ ಅಲಿ
ಅವರುಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ರಾಜ್ಯದ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸುಧೀರ್, ಮಧು ರೆಡ್ಡಿ ಅವರುಗಳು ಬಲವಂತವಾಗಿ ಮತ್ತು ಅಕ್ರಮವಾಗಿ ನನ್ನ ಜಮೀನಿನೊಳಗೆ ನುಗ್ಗಿದ್ದಾರೆ ಮತ್ತು ಸೂಕ್ತ ದಾಖಲೆಗಳನ್ನು ತೋರಿಸಲು ಕೇಳಿದರೆ ನಿರಾಕರಿಸುತ್ತಿದ್ದಾರೆ. ಸುಧೀರ್ ಹಾಗೂ ಮಧು ಮಾಡಿರುವ ಕೃತ್ಯ ಸಂಪೂರ್ಣ ಕಾನೂನು ಬಾಹಿರವಾಗಿದೆ ಎಂಬುದನ್ನು ನನ್ನ ಕಾನೂನು ಸಲಹೆಗಾರರು ನನಗೆ ತಿಳಿಸಿದ್ದಾರೆ. ಅಲ್ಲದೆ ನಾನು ನನ್ನ ಪ್ರಾಪರ್ಟಿಯ ಕಾನೂನುಬದ್ಧ ಮಾಲೀಕನಾಗಿದ್ದೇನೆ ಹಾಗೂ ಕಳೆದ 50 ವರ್ಷಗಳಿಂದಲೂ ನಾನು ಅಲ್ಲಿ ನೆಲೆಸಿದ್ದೇನೆ ಎಂದಿದ್ದಾರೆ ಲಕ್ಕಿ ಅಲಿ.

ಪೊಲೀಸರೂ ಅವರಿಗೆ ಬೆಂಬಲಿಸುತ್ತಿದ್ದಾರೆ: ಲಕ್ಕಿ ಅಲಿ
ನಾನು ದುಬೈಗೆ ಹೊರಟುಬರುವ ಮುನ್ನ ನಿಮ್ಮನ್ನು ಭೇಟಿ ಮಾಡಲು ಯತ್ನಿಸಿದೆ ಆದರೆ ನನಗೆ ಅದು ಸಾಧ್ಯವಾಗಲಿಲ್ಲ. ನಾನು ಎಸಿಪಿ ಬಳಿ ದೂರು ದಾಖಲಿಸಿದ್ದೇನೆ ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಸ್ಥಳೀಯ ಪೊಲೀಸರಿಗೂ ದೂರು ನೀಡಿದ್ದೇನಾದರೂ ಅವರಿಂದ ಯಾವುದೇ ಸಹಾಯ ನನಗೆ ದೊರೆತಿಲ್ಲ. ಬದಲಿಗೆ ಅವರು ಅತಿಕ್ರಮಣ ಮಾಡಿದವರಿಗೇ ಬೆಂಬಲ ನೀಡುತ್ತಿದ್ದಾರೆ'' ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ ಲಕ್ಕಿ ಅಲಿ.

ಸಹಾಯ ಮಾಡಿ ಎಂದ ಲಕ್ಕಿ ಅಲಿ
ಡಿಸೆಂಬರ್ 7 ರಂದು ನ್ಯಾಯಾಲಯದಲ್ಲಿ ವಿಚಾರಣೆ ಇದ್ದು, ಸುಳ್ಳು ದಾಖಲೆಗಳ ಮೂಲಕ ಅವರು ಆಸ್ತಿಯ ಮೇಲೆ ತಮ್ಮ ಒಡೆತನ ಸಾಭೀತುಪಡಿಸಲು ಯತ್ನಿಸುತ್ತಿದ್ದಾರೆ ಆದರೆ ಇದು ಸಾಧ್ಯವಾಗದ ರೀತಿಯಲ್ಲಿ ತಾವು ನನಗೆ ಸಹಾಯ ಮಾಡಿ ಎಂದು ಲಕ್ಕಿ ಅಲಿ ಕರ್ನಾಟಕ ಡಿಜಿಪಿ ಬಳಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಲಕ್ಕಿ ಅಲಿ ಬಾಲಿವುಡ್‌ನ ಖ್ಯಾತ ಗಾಯಕ
ಲಕ್ಕಿ ಅಲಿ ಬಾಲಿವುಡ್‌ನ ಖ್ಯಾತ ಗಾಯಕರಾಗಿದ್ದಾರೆ ಜೊತೆಗೆ ನಟರೂ ಹೌದು. ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಸ್ಟಾರ್ ನಟರೊಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಸೂಪರ್ ಹಿಟ್ ಆಲ್ಬಂಗಳನ್ನು ಬಿಡುಗಡೆ ಮಾಡಿರುವ ಲಕ್ಕಿ ಅಲಿ, ಎ.ಆರ್.ರೆಹಮಾನ್ ಸೇರಿದಂತೆ ಹಲವು ಖ್ಯಾತನಾಮ ಸಂಗೀತ ನಿರ್ದೇಶಕರಿಗಾಗಿ ಹಾಡುಗಳನ್ನು ಸಹ ಹಾಡಿದ್ದಾರೆ. ಹಿಂದಿ ಸಂಗೀತ ಲೋಕದಲ್ಲಿ ದೊಡ್ಡ ಮಟ್ಟದ ಖ್ಯಾತಿಯಲ್ಲಿ ಲಕ್ಕಿ ಅಲಿ ಹೊಂದಿದ್ದಾರೆ. ಜೊತೆಗೆ ಬಾಲಿವುಡ್‌ನ ದಂತಕತೆ ಮೆಹಮೂದ್ ಖಾನ್ ಹಾಗೂ ನಟಿ ಮೀನಾ ಕುಮಾರಿಯವರ ಮಗ ಸಹ ಹೌದು.