For Quick Alerts
  ALLOW NOTIFICATIONS  
  For Daily Alerts

  'ಕೈ ಎತ್ತಿ ಮುಗಿವೆ ಕರುನಾಡ ಪ್ರೇಮಕ್ಕೆ': ಕನ್ನಡಿಗರಿಗೆ ಧನ್ಯವಾದ ಹೇಳಿದ ಮಂಗ್ಲಿ

  |

  ಯಾವುದೇ ಭಾಷೆಯ ಸಿನಿಮಾ ಆಗಲಿ, ಕಲಾವಿದರಾಗಲಿ ಅಥವಾ ಗಾಯಕ, ತಂತ್ರಜ್ಞರಾಗಲಿ ಕನ್ನಡಿಗರು ಒಮ್ಮೆ ಮೆಚ್ಚಿಕೊಂಡರೆ ಅವರು ಕನ್ನಡಿಗರೇ ಎನ್ನುವಷ್ಟು ಪ್ರೀತಿ ಕೊಡ್ತಾರೆ ಎನ್ನುವುದಕ್ಕೆ ತೆಲುಗು ಗಾಯಕಿ ಮಂಗ್ಲಿ ತಾಜಾ ಉದಾಹರಣೆ.

  ಕರ್ನಾಟಕದಲ್ಲಿ ಸಿಕ್ಕ ಪ್ರೀತಿ ಹಾಗೂ ಕನ್ನಡಿಗರಿಂದ ಸಿಗುತ್ತಿರುವ ಪ್ರತಿಕ್ರಿಯೆಗೆ ಮಂಗ್ಲಿ ಮನಸೋತಿದ್ದು, ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ. 'ಕೈ ಎತ್ತಿ ಮುಗಿವೆ ಕರುನಾಡ ಪ್ರೇಮಕ್ಕೆ.. ಕರುಣಿಸಲಿ ದೈವ ಮತ್ತಷ್ಟು ಹಾಡೋಕೆ. ನಿಮ್ಮ ಪ್ರೀತಿಯ ಮಂಗ್ಲಿ'' ಎಂದು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.

  ಮೊದಲ ಕನ್ನಡ ಹಾಡು ಹಾಡಿದ ಮಂಗ್ಲಿ: ಯಾವ ಸಿನಿಮಾ, ಹಾಡು ಯಾವುದು?ಮೊದಲ ಕನ್ನಡ ಹಾಡು ಹಾಡಿದ ಮಂಗ್ಲಿ: ಯಾವ ಸಿನಿಮಾ, ಹಾಡು ಯಾವುದು?

  ಚಿತ್ರದುರ್ಗ ಟು ಬಳ್ಳಾರಿ ಮಾರ್ಗದಲ್ಲಿ ಚಲಿಸುವ ಖಾಸಗಿ ಬಸ್‌ವೊಂದರ ಹಿಂಬದಿಯಲ್ಲಿ ಮಂಗ್ಲಿ ಅವರ ಭಾವಚಿತ್ರ ಹಾಕಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಈ ಫೋಟೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಗಾಯಕಿ '''ಕೈ ಎತ್ತಿ ಮುಗಿವೆ ಕರುನಾಡ ಪ್ರೇಮಕ್ಕೆ..'' ಎಂದು ಪೋಸ್ಟ್ ಹಾಕಿದ್ದಾರೆ. ಜೊತೆಗೆ ತೆಲುಗಿನಲ್ಲಿ 'ಈ ಜನ್ಮದಲ್ಲಿ ಇದಕ್ಕಿಂತ ಬೇಕಾ? ಸದಾ ನಿಮ್ಮ ಪ್ರೀತಿ ಬಯಸುವ ನಿಮ್ಮ ಮಂಗ್ಲಿ'' ಎಂದು ಬರೆದುಕೊಂಡಿದ್ದಾರೆ.

  ಇತ್ತೀಚಿಗಷ್ಟೆ ಮಸ್ಕಿ ವಿಧಾನಸಭೆ ಉಪ ಚುನಾವಣೆಯಲ್ಲಿ ಮಂಗ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಮತಯಾಚನೆ ಮಾಡಿದ್ದರು. ಮಸ್ಕಿ ಕ್ಷೇತ್ರದಲ್ಲಿ ಬಂಜಾರ ಸಮುದಾಯದವರು ಹೆಚ್ಚು ಜನರಿದ್ದು, ಅವರ ಮತ ಸೆಳೆಯಲು ಮಂಗ್ಲಿ ಅವರನ್ನು ಕರೆಸಲಾಗಿತ್ತು.

  ಕರ್ನಾಟಕದಲ್ಲಿ ಮಂಗ್ಲಿ ಇಷ್ಟೊಂದು ಖ್ಯಾತಿ ಗಳಿಸಲು ಕಾರಣ 'ಕಣ್ಣೇ ಅದಿರಿಂದಿ' ಹಾಡು. ತೆಲುಗು ಹಾಡಾಗಿದ್ದರೂ ಕರ್ನಾಟಕದಲ್ಲೇ ಹೆಚ್ಚು ಹಿಟ್ ಆಯಿತು. ಕನ್ನಡಕ್ಕಿಂತ ತೆಲುಗು ಹಾಡನ್ನು ಹೆಚ್ಚು ಇಷ್ಟ ಪಟ್ಟರು.

  Recommended Video

  ರಾಯಚೂರು ಜನರ ಮನಗೆದ್ದ ರಾಬರ್ಟ್ ಗಾಯಕಿ ಮಂಗ್ಲಿ | Filmibeat Kannada

  ರಾಬರ್ಟ್ ಬಳಿಕ ಸ್ಯಾಂಡಲ್‌ವುಡ್‌ಗೂ ಅಧಿಕೃತ ಪ್ರವೇಶ ಮಾಡಿದ್ದಾರೆ. 'ಕರಿಯಾ ಐ ಲವ್ ಯೂ' ಚಿತ್ರದಲ್ಲಿ ಹಾಡೊಂದನ್ನು ಮಂಗ್ಲಿ ದನಿಗೂಡಿಸಿದ್ದು, ಇದು ಮಂಗ್ಲಿಯ ಮೊದಲ ಕನ್ನಡ ಹಾಡು.

  English summary
  Singer Mangli Says Thanks to Karnataka Fans for their love.
  Monday, April 19, 2021, 13:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X