For Quick Alerts
  ALLOW NOTIFICATIONS  
  For Daily Alerts

  ದೊಡ್ಡ ಸ್ಟಾರ್‌ ನಟನ ಜೊತೆ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ ಮಂಗ್ಲಿ

  |

  ರಾಜ್ಯದಲ್ಲಿ ಮಂಗ್ಲಿ ಹವಾ ಎದ್ದಿದೆ. 'ಕಣ್ಣೇ ಅದಿರಿಂದಿ' ಹಾಡೊಂದರ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಕರ್ನಾಟಕದಲ್ಲಿ ಸಂಪಾದಿಸಿದ್ದಾರೆ ಗಾಯಕಿ ಮಂಗ್ಲಿ.

  ಶಿವಣ್ಣನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ತೆಲುಗು ಗಾಯಕಿ ಮಂಗ್ಲಿ | Filmibeat Kannada

  'ರಾಬರ್ಟ್' ಸಿನಿಮಾದ ತೆಲುಗು ಡಬ್ ಸಿನಿಮಾದಲ್ಲಿ 'ಕಣ್ಣೇ ಅದಿರಿಂದಿ' ಹಾಡು ಹಾಡಿದ್ದ ಮಂಗ್ಲಿ ಕನ್ನಡಿಗರ ಪಾಲಿಗೆ ಅಚ್ಚು-ಮೆಚ್ಚಿನ ಗಾಯಕಿಯಾಗಿಬಿಟ್ಟರು. ಯಾವ ಮಟ್ಟಕ್ಕೆಂದರೆ ರಾಜ್ಯದಲ್ಲಿ ಚುನಾವಣೆ ಪ್ರಚಾರಗಳಿಗೆ ಮಂಗ್ಲಿಯನ್ನು ಕರೆತರಲಾಯಿತು. ಬಸ್ಸುಗಳ ಹಿಂದೆ ಮಂಗ್ಲಿ ಚಿತ್ರಗಳನ್ನು ಪ್ರಕಟಿಸಲಾಗಿದೆ.

  ಇದೀಗ ಮಂಗ್ಲಿಯನ್ನು ಮತ್ತೆ ರಾಜ್ಯಕ್ಕೆ ಕರೆತರಲಾಗುತ್ತಿದ್ದು ಕನ್ನಡದ ದೊಡ್ಡ ಸ್ಟಾರ್ ನಟನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಮಂಗ್ಲಿ.

  ಹೌದು, ಶಿವರಾಜ್‌ ಕುಮಾರ್ ನಟಿಸುವ ಮುಂದಿನ ಚಿತ್ರದಲ್ಲಿ ಮಂಗ್ಲಿ ಸಹ ನಟಿಸಲಿದ್ದಾರೆ. ಮಂಗ್ಲಿಗೆ ನಟನೆ ಹೊಸದೇನೂ ಅಲ್ಲ. ಆಕೆಯೇ ಪ್ರಧಾನ ಪಾತ್ರದಲ್ಲಿ ಲಂಬಾಣಿ ಸಿನಿಮಾವೊಂದರಲ್ಲಿ ನಟಿಸಿದ್ದಾರೆ ಮಂಗ್ಲಿ. ಹಲವು ರಿಯಾಲಿಟಿ ಶೋಗಳಲ್ಲಿಯೂ ಮಂಗ್ಲಿ ಭಾಗವಹಿಸಿದ್ದಾರೆ. ಹಾಗಾಗಿ ಮಂಗ್ಲಿಗೆ ನಟನೆ ಹೊಸತೇನೂ ಅಲ್ಲ.

  ಶಿವರಾಜ್ ಕುಮಾರ್ ನಟಿಸಲಿರುವ 124ನೇ ಸಿನಿಮಾವನ್ನು ತೆಲುಗಿನ ನಿರ್ದೇಶಕರೇ ಆಗಿರುವ ರಾಮ್ ಧುಲಿಪುಡಿ ನಿರ್ದೇಶನ ಮಾಡಲಿದ್ದು ಆ ಸಿನಿಮಾದಲ್ಲಿ ಮಂಗ್ಲಿ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

  ಸಿನಿಮಾದ ಚಿತ್ರೀಕರಣವು ಜೂನ್ ಮೊದಲ ವಾರದಿಂದ ಆರಂಭವಾಗಲಿದೆ. ಬೆಂಗಳೂರು, ಮಂಗಳೂರು, ಕಾಶ್ಮೀರಗಳಲ್ಲಿ ಚಿತ್ರೀಕರಣವಾಗಲಿರುವ ಈ ಸಿನಿಮಾ 70 ದಿನಗಳಲ್ಲಿ ಚಿತ್ರೀಕರಣ ಮುಗಿಯಲಿದೆ.

  ಸಿನಿಮಾದಲ್ಲಿ ಶಿವರಾಜ್ ಕುಮಾರ್, ಮಂಗ್ಲಿ ಜೊತೆಗೆ ನಾಸರ್, ಸಾಧು ಕೋಕಿಲ, ಸಂಪತ್ ಹಾಗೂ ಇನ್ನೂ ಕೆಲವು ನಟರು ಇರಲಿದ್ದಾರೆ. ಸಿನಿಮಾಕ್ಕೆ 'ಟಗರು' ಖ್ಯಾತಿಯ ಚರಣ್ ರಾಜ್ ಸಂಗೀತ ನೀಡಲಿದ್ದಾರೆ. ರವಿವರ್ಮ ಸಾಹಸ, ದೀಪು ಎಸ್ ಕುಮಾರ್ ಸಂಕಲನ ಮಾಡಲಿದ್ದಾರೆ. ಸಿನಿಮಾದ ನಾಯಕಿ ಇನ್ನಷ್ಟೆ ಆಯ್ಕೆ ಆಗಬೇಕಿದೆ.

  English summary
  Singer Mangli will act in Kannada movie with actor Shiva Rajkumar. Movie will be directed by Ram Dhulipudi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X