For Quick Alerts
  ALLOW NOTIFICATIONS  
  For Daily Alerts

  'ಕಣ್ಣೇ ಅದಿರಿಂದಿ' ಮೂಲಕ ಕನ್ನಡಿಗರ ಮನಗೆದ್ದ ಮಂಗ್ಲಿ ಈಗ ಚುನಾವಣೆ ಪ್ರಚಾರಕ್ಕೆ ಎಂಟ್ರಿ

  |

  'ರಾಬರ್ಟ್' ಚಿತ್ರದ 'ಕಣ್ಣೇ ಅದಿರಿಂದಿ' ಹಾಡಿನ ಮೂಲಕ ಕನ್ನಡಿಗರ ಮನಗೆದ್ದ ತೆಲುಗು ಗಾಯಕಿ ಮಂಗ್ಲಿ ಈಗ ಕರ್ನಾಟಕ ಉಪ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಹಾಡಿನೊಂದಿಗೆ ಕರ್ನಾಟಕದಲ್ಲಿ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡ ಗಾಯಕಿ ಈಗ ಮಸ್ಕಿ ಉಪಚುನಾವಣೆಯಲ್ಲಿ ಮತಯಾಚನೆ ಮಾಡಲಿದ್ದಾರೆ.

  ಕರ್ನಾಟಕ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟ ರಾಬರ್ಟ್ ಮಂಗ್ಲಿ | Filmibeat Kannada

  ಏಪ್ರಿಲ್ 17 ರಂದು ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿ ಪರ ಸ್ಟಾರ್ ಸಿಂಗರ್ ಮಂಗ್ಲಿ ಮತಯಾಚಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರ ಪರವಾಗಿ ಮಂಗ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಮುಂದೆ ಓದಿ...

  ತಾಂಡಾದಲ್ಲಿ ಹುಟ್ಟಿದ ಸತ್ಯವತಿ, ಮಂಗ್ಲಿ ಆದ ಮುಳ್ಳಿನ ಹಾದಿಯ ಪಯಣತಾಂಡಾದಲ್ಲಿ ಹುಟ್ಟಿದ ಸತ್ಯವತಿ, ಮಂಗ್ಲಿ ಆದ ಮುಳ್ಳಿನ ಹಾದಿಯ ಪಯಣ

  ಏಪ್ರಿಲ್ 13ಕ್ಕೆ ಮಂಗ್ಲಿ ಪ್ರಚಾರ

  ಏಪ್ರಿಲ್ 13ಕ್ಕೆ ಮಂಗ್ಲಿ ಪ್ರಚಾರ

  ಏಪ್ರಿಲ್ 13 ರಂದು ಮಂಗಳವಾರ ತೆಲುಗು ಗಾಯಕಿ ಮಂಗ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರ ಹಲವು ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಮತಯಾಚಿಸಲಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ತೆಲುಗು ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ, ತೆಲುಗು ಜನರನ್ನು ಬಿಜೆಪಿ ಪರ ಸೆಳೆಯಲು ಮಂಗ್ಲಿ ಅವರನ್ನು ಕರೆತರುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

  'ಕಣ್ಣೇ ಅದಿರಿಂದಿ' ಮೂಲಕ ಸಂಚಲನ

  'ಕಣ್ಣೇ ಅದಿರಿಂದಿ' ಮೂಲಕ ಸಂಚಲನ

  ಗಾಯಕಿ ಮಂಗ್ಲಿ ಹಲವು ವರ್ಷಗಳಿಂದ ಟಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ, 'ಕಣ್ಣೇ ಅದಿರಿಂದಿ' ಹಾಡಿನ ಮೂಲಕ ಕರ್ನಾಟಕದ ಪಾಲಿಗೆ ಹತ್ತಿರವಾದರು. ದರ್ಶನ್ ನಟನೆಯ ರಾಬರ್ಟ್ ಚಿತ್ರದ 'ಕಣ್ಣೇ ಅದಿರಿಂದಿ' (ತೆಲುಗು ಹಾಡು) ಮಂಗ್ಲಿಗೆ ಬಹಳ ದೊಡ್ಡ ಖ್ಯಾತಿ ತಂದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಂತೂ 'ಕಣ್ಣೇ ಅದಿರಿಂದಿ' ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿತ್ತು. ಹೀಗಾಗಿ, ಕರ್ನಾಟಕದಲ್ಲಿ ಮಂಗ್ಲಿ ಹೆಚ್ಚು ಫಾಲೋವರ್ಸ್ ಹೊಂದಿದರು.

  ಮೊದಲ ಕನ್ನಡ ಹಾಡು ಹಾಡಿದ ಮಂಗ್ಲಿ: ಯಾವ ಸಿನಿಮಾ, ಹಾಡು ಯಾವುದು?ಮೊದಲ ಕನ್ನಡ ಹಾಡು ಹಾಡಿದ ಮಂಗ್ಲಿ: ಯಾವ ಸಿನಿಮಾ, ಹಾಡು ಯಾವುದು?

  ಮೊದಲ ಹಾಡು ಹಾಡಿದ ಮಂಗ್ಲಿ

  ಮೊದಲ ಹಾಡು ಹಾಡಿದ ಮಂಗ್ಲಿ

  'ಕಣ್ಣೇ ಅದಿರಿಂದಿ' ಮೂಲಕ ಸ್ಯಾಂಡಲ್‌ವುಡ್ ಗಮನ ಸೆಳೆದ ಮಂಗ್ಲಿ ಇತ್ತೀಚಿಗಷ್ಟೆ ಕನ್ನಡದಲ್ಲಿ ಮೊದಲ ಹಾಡು ಹಾಡಿದ್ದಾರೆ. ಕನ್ನಡದ 'ಕರಿಯಾ ಐ ಲವ್ ಯೂ' ಸಿನಿಮಾದಲ್ಲಿ ಮೊದಲ ಬಾರಿಗೆ ಮಂಗ್ಲಿ ಕನ್ನಡದ ಹಾಡಿಗೆ ದನಿ ಆಗಿದ್ದಾರೆ. ಇದೊಂದು ಯುಗಳ ಗೀತೆ ಆಗಿದ್ದು, ಮಂಗ್ಲಿ ಜೊತೆಗೆ ನವೀನ್ ಸಜ್ಜು ಸಹ ಹಾಡಿಗೆ ದನಿಗೂಡಿಸಿದ್ದಾರೆ.

  ಪ್ರತಾಪ್ ಗೌಡ ಪಾಟೀಲ್‌ಗೆ ಕೊರೊನಾ

  ಪ್ರತಾಪ್ ಗೌಡ ಪಾಟೀಲ್‌ಗೆ ಕೊರೊನಾ

  ಮಸ್ಕಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಕೋವಿಡ್ ಸೋಂಕು ತಗುಲಿದ್ದು, ಕ್ವಾರಂಟೈನ್ ಆಗಿದ್ದಾರೆ ಎಂಬ ಮಾಹಿತಿ ಇದೆ. ಹಾಗಿದ್ದರೂ, ಮಂಗ್ಲಿ ಅವರು ಮಂಗಳವಾರ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಕಮಲದ ಪರ ಪ್ರಚಾರ ನಡೆಸಲಿದ್ದಾರೆ.

  English summary
  Telugu famous singer Mangli to Campaign for Bjp candidate Prathap Gowda Patil in Maski. Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X