twitter
    For Quick Alerts
    ALLOW NOTIFICATIONS  
    For Daily Alerts

    ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದ ಗಾಯಕಿ ಎಂ ಡಿ ಪಲ್ಲವಿ

    |

    ಎಂ ಡಿ ಪಲ್ಲವಿ ಕನ್ನಡದ ಅದ್ಭುತ ಗಾಯಕಿ. ಎಷ್ಟೋ ಭಾವ ಗೀತೆಗೆ ಭಾವ ತುಂಬಿರುವ ಇವರು ಅದೆಷ್ಟೋ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ. ಅದರೊಂದಿಗೆ ಇದೀಗ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಕೂಡ ಅವರ ಕೈ ಸೇರಿದೆ.

    ಉಸ್ತದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ 2018 ಪ್ರಶಸ್ತಿ ಪಟ್ಟಿ ಘೋಷಣೆ ಆಗಿದೆ. ಈ ಬಾರಿ 32 ಯುವ ಪ್ರತಿಭೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಗಾಯಕಿ ಎಂ ಡಿ ಪಲ್ಲವಿ ಅವರ ಹೆಸರು ಸಹ ಇದೆ.

    ಗಾಯಕಿ ಪಲ್ಲವಿ ಅವರ ವಿಶೇಷ 'ಸ್ವರ ಸ್ಮರಣೆ' ಗಾಯಕಿ ಪಲ್ಲವಿ ಅವರ ವಿಶೇಷ 'ಸ್ವರ ಸ್ಮರಣೆ'

    ಸಂಗೀತ ನಾಟಕ ಅಕಾಡಮಿ ಕಡೆಯಿಂದ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತಿದೆ. 40 ವರ್ಷಕ್ಕಿಂತ ಕೆಳಗಿನ ಸಾಧಕರಿಗೆ ಪ್ರಶಸ್ತಿ ಕೊಡಲಾಗುತ್ತಿದೆ. ಈ ಮೂಲಕ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಾಯ ಮಾಡಲಾಗುತ್ತಿದೆ. ಪ್ರಶಸ್ತಿಯ ಜೊತೆಗೆ 25 ಸಾವಿರ ಪ್ರೋತ್ಸಾಹ ಧನ ಕೂಡ ಸಾಧಕರಿಗೆ ಸಿಗಲಿದೆ.

    singer md pallavi got bismillah khan yuva puraskar award

    2006 ರಿಂದ ಸಂಗೀತ ನಾಟಕ ಅಕಾಡಮಿ ಸಂಸ್ಥೆ ಉಸ್ತದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಶಸ್ತಿಯನ್ನು ನೀಡುತ್ತಿದೆ. ಸಂಗೀತ, ನೃತ್ಯ ಹಾಗೂ ನಾಟಕ ವಿಭಾಗದ ಸಾಧಕರನ್ನು ಇಲ್ಲಿ ಗುರುತಿಸಲಾಗುತ್ತಿದೆ.

    ಅಂದಹಾಗೆ, ಎಂ ಡಿ ಪಲ್ಲವಿ ಸುಗಮ ಸಂಗೀತ ಗಾಯಕಿ ಆಗಿದ್ದಾರೆ. ಅದೆಷ್ಟೋ ಭಾವಗೀತೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. 15ಕ್ಕೂ ಹೆಚ್ಚು ಸಿನಿಮಾ ಹಾಡುಗಳಿಗೆ ಧ್ವನಿಯಾಗಿದ್ದಾರೆ. ದುನಿಯಾ ಸಿನಿಮಾ 'ನೋಡಯ್ಯ ಕ್ವಾಟೆ ಲಿಂಗವೇ..' ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

    English summary
    Kannada singer MD Pallavi got Bismillah Khan Yuva Puraskar award.
    Monday, July 22, 2019, 13:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X