For Quick Alerts
  ALLOW NOTIFICATIONS  
  For Daily Alerts

  ನಾಯಕನಾಗಲು ಸಜ್ಜಾದ ಗಾಯಕ ನವೀನ್ ಸಜ್ಜು

  |

  ಕೊರೊನಾ ಲಾಕ್‌ಡೌನ್ ನಂತರ ಕನ್ನಡ ಚಿತ್ರರಂಗ ನಿಧಾನಕ್ಕೆ ಮರಳಿ ಗರಿಗೆದರುತ್ತಿದೆ. ಹೊಸ ಚೈತನ್ಯದೊಂದಿಗೆ ಚಿತ್ರತಂಡಗಳು ಸಿನಿಮಾ ಕಾಯಕದಲ್ಲಿ ತೊಡಗಿಕೊಳ್ಳುತ್ತಿವೆ.

  ಹೊಸಬರು ಹೊಸ ಹುರುಪಿನೊಂದಿಗೆ ಸಿನಿಮಾ ಕಟ್ಟಲು ಪ್ರಾರಂಭಿಸುತ್ತಿದ್ದಾರೆ. ಹೊಸ ಮುಖಗಳು ಸಿನಿಮಾ ನಾಯಕರಾಗಲು ಸಜ್ಜಾಗುತ್ತಿದ್ದಾರೆ. ಅದರಲ್ಲಿ ಗಾಯಕ, ಮಾಜಿ ಬಿಗ್‌ಬಾಸ್ ಸ್ಪರ್ಧಿ ನವೀನ್ ಸಜ್ಜು ಸಹ ಒಬ್ಬರು.

  ನವೀನ್ ಸಜ್ಜು ಕೈಯಲ್ಲಿ ಮತ್ತೆ ಎಣ್ಣೆ ಬಾಟ್ಲು: ಸೌಂಡ್ ಮಾಡ್ತಿದೆ ಕುಡುಕರ ಸಾಂಗು.!

  ಆರ್ಕೇಸ್ಟ್ರಾ ಗಾಯಕರಾಗಿದ್ದ ನವೀನ್ ಸಜ್ಜು ಸಿನಿಮಾ ಗಾಯಕ, ಸಂಗೀತ ನಿರ್ದೇಶಕ ಆಗಿದ್ದೇ ಒಂದೊಳ್ಳೆ ಕತೆ, ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ಸಿನಿಮಾ ನಾಯಕನಾಗಲು ಹೊರಟಿದ್ದಾರೆ.

  ಲೂಸಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ

  ಲೂಸಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ

  ಹೌದು, ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಸಿನಿಮಾ ಮೂಲಕ ಹಿನ್ನೆಲೆ ಗಾಯಕನಾಗಿ ಚಿತ್ರರಂಗಕ್ಕೆ ಪರಿಚಿತಗೊಂಡ ನವೀನ್ ಸಜ್ಜು, ಆ ನಂತರ ಭರವಸೆಯ ಗಾಯಕರಾಗಿ ಬೆಳೆದರು. ಈಗ ಸಿನಿಮಾ ಒಂದಕ್ಕೆ ನಾಯಕರಾಗಿದ್ದಾರೆ ನವೀನ್ ಸಜ್ಜು.

  ಸ್ಕ್ರಿಪ್ಟ್ ಪೂಜೆ ಮುಗಿಸಿರುವ ಚಿತ್ರತಂಡ

  ಸ್ಕ್ರಿಪ್ಟ್ ಪೂಜೆ ಮುಗಿಸಿರುವ ಚಿತ್ರತಂಡ

  ಹೌದು, ನವೀನ್ ಸಜ್ಜು ನಾಯಕರಾಗುತ್ತಿದ್ದಾರೆ. ಈಗಾಗಲೇ ಕತೆಗೆ ಓಕೆ ಎಂದಿದ್ದು, ಸ್ಕ್ರಿಪ್ಟ್ ಪೂಜೆ ಸಹ ಮುಗಿಸಿದ್ದಾರೆ. ಉಳಿದ ತಾರಾಗಣ ಅಂತಿಮವಾಗಬೇಕಿದ್ದು, ಅದರ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ.

  ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ನಿರ್ದೇಶಕ ಕುಮಾರ್

  ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ನಿರ್ದೇಶಕ ಕುಮಾರ್

  ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ನವೀನ್ ಸಜ್ಜು ನಾಯಕರಾಗುತ್ತಿದ್ದಾರೆ. ಈ ಭಾರಿ ಭಿನ್ನ ಕತೆಯೊಂದಿಗೆ ಬರುತ್ತಿದ್ದಾರಂತೆ ನಿರ್ದೇಶಕ ಕುಮಾರ್.

  ಮಗು ಹುಟ್ಟಿದ ಕೂಡಲೇ ಮೇಘನಾ ಆಸೆ ಈಡೇರಿಸಿದ್ದು ಈ ವೈದ್ಯರು | Filmibeat Kannada
  ಲಾಕ್‌ಡೌನ್ ಕಾರಣ ಚಿತ್ರೀಕರಣ ತಡವಾಗಿ ಆರಂಭವಾಗುತ್ತಿದೆ

  ಲಾಕ್‌ಡೌನ್ ಕಾರಣ ಚಿತ್ರೀಕರಣ ತಡವಾಗಿ ಆರಂಭವಾಗುತ್ತಿದೆ

  ಬಿಗ್‌ಬಾಸ್ ರನರ್‌ಅಪ್ ಆಗಿದ್ದ ನವೀನ್ ಸಜ್ಜು, ಬಿಗ್‌ಬಾಸ್‌ ನಿಂದ ಹೊರಗೆ ಬಂದಾಗಲೆ ಕೆಲವು ಕತೆಗಳನ್ನು ಕೇಳಿದ್ದರು. ಆದರೆ ಕೊನೆಗೆ ಕುಮಾರ್ ಅವರ ಕತೆಗೆ ಓಕೆ ಹೇಳಿದ್ದಾರೆ. ಲಾಕ್‌ಡೌನ್ ಆದ್ದರಿಂದ ಚಿತ್ರೀಕರಣ ತಡವಾಗಿ ಆರಂಭವಾಗುತ್ತಿದೆ.

  English summary
  Playback Singer Naveen Sajju becoming hero. He is acting in director Kumar's movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X