For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ಕಾಲ್‌ನಲ್ಲಿ ವಿಜಿ ತಾಯಿಯ ನೆಚ್ಚಿನ ಹಾಡು ಹಾಡಿದ್ದ ನವೀನ್ ಸಜ್ಜು

  |

  ಕನ್ನಡದ ನಟ-ನಿರ್ದೇಶಕ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಕೊನೆಯುಸಿರೆಳೆದಿದ್ದಾರೆ. ಕಳೆದ 20ಕ್ಕೂ ಅಧಿಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಿ ತಾಯಿ ಜೂನ್ 8 ರಂದು ನಿಧನರಾದರು.

  ಕೊನೆ ಕ್ಷಣದಲ್ಲಿ ಒಳಿತು ಮಾಡು ಮನುಷ್ಯ ಹಾಡು ಹಾಡಿದ ನವೀನ್ ಸಜ್ಜು | Filmibeat Kannada

  ವಿಜಯ್ ತಾಯಿ ನಾರಾಯಣಮ್ಮ ಅವರಿಗೆ 'ಒಳಿತು ಮಾಡು ಮನುಷಾ.....' ಹಾಡಂದ್ರೆ ಬಹಳ ಇಷ್ಟವಂತೆ. ಅದರಲ್ಲೂ ನವೀನ್ ಸಜ್ಜು ಕಂಠದಲ್ಲಿ ಕೇಳುವುದು ಹೆಚ್ಚು ಖುಷಿ ಕೊಡುತ್ತಂತೆ.

  'ಸಾವಿರ ದೇವರಿಗೂ ಮಿಗಿಲಿವಳು ನಮ್ಮಮ್ಮ': ತಾಯಿಯಲ್ಲಿ ದೇವರ ಕಂಡಿದ್ದ ವಿಜಯ್'ಸಾವಿರ ದೇವರಿಗೂ ಮಿಗಿಲಿವಳು ನಮ್ಮಮ್ಮ': ತಾಯಿಯಲ್ಲಿ ದೇವರ ಕಂಡಿದ್ದ ವಿಜಯ್

  ವಿಜಯ್ ಅವರ ತಾಯಿ ಕೋಮಾ ಪರಿಸ್ಥಿತಿಯಲ್ಲಿರುವಾಗ ನವೀನ್ ಸಜ್ಜು ಅವರು ವಿಡಿಯೋ ಕಾಲ್ ಮೂಲಕ 'ಒಳಿತು ಮಾಡು ಮನುಷಾ.....' ಹಾಡು ಹಾಡುವ ಮೂಲಕ ನಾರಾಯಣಮ್ಮರಿಗೆ ಖುಷಿ ಪಡಿಸಿದ್ದರು.

  ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾ ವೈರಲ್ ಆಗಿದೆ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವಿಜಯ್ ಅವರ ತಾಯಿ ಕೊನೆ ಕ್ಷಣದಲ್ಲಿ ಖುಷಿಯಾಗಿರಬೇಕು ಎಂಬ ಕಾರಣಕ್ಕೆ ಅವರ ಆಸೆಯೊಂದನ್ನು ಪೂರೈಸಿದ್ದರು.

  ಆನೇಕಲ್ ಹುಟ್ಟೂರಿನಲ್ಲಿ ಅಂತ್ಯ ಸಂಸ್ಕಾರ

  ದುನಿಯಾ ವಿಜಯ್ ತಾಯಿಯ ಅಂತ್ಯಕ್ರಿಯೆಯನ್ನು ಅನೇಕಲ್ ಬಳಿಯಿರುವ ಹುಟ್ಟೂರು ಕುಂಬಾರಹಳ್ಳಿಯಲ್ಲಿ ನೆರವೇರಿಸಲಾಗುವುದು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ದುನಿಯಾ ವಿಜಯ್ ''ತಮ್ಮ ತಾಯಿಯ ಆಸೆಯಂತೆ ಹುಟ್ಟೂರಿನಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಕಾಶಿ ಅಂದ್ರೆ ಅವರಿಗೆ ಇಷ್ಟ. ಹಾಗಾಗಿ, ಕಾಶಿಯಿಂದ ಗಂಗಾಜಲ ತರಿಸಿದ್ವಿ. ಗಂಗಾಜಲ ಕುಡಿದ ನಂತರವೇ ಅಮ್ಮ ನಮ್ಮನ್ನು ಬಿಟ್ಟು ಹೋದರು'' ಎಂದು ತಿಳಿಸಿದರು.

  English summary
  Kannada Singer Naveen Sajju sung favourite song of Duniya Vijay Mother, when she is in Coma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X