ಅಂತರಾಷ್ಟ್ರೀಯ ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ಗಾಯನ

ಮೇ 21 ರಿಂದ ನಡೆಯುವ 75ನೇ ಕಾನ್‌ ಚಲನಚಿತ್ರೋತ್ಸವದಲ್ಲಿ ಭಾರತದ ಅನೇಕ ಸೆಲೆಬ್ರೆಟಿಗಳು ಭಾಗಿಯಾಗಲಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ನಟಿಯರೇ ಹೆಚ್ಚಾಗಿ ಕಾನ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ಕೂಡ ಕಾನ್‌ ಫೆಸ್ಟಿವಲ್‌ನಲ್ಲಿ ಸಂಗೀತ ಮಳೆ ಸುರಿಸಲು ಸಜ್ಜಾಗಿದ್ದಾರೆ. ಕಾನ್‌ ಫೆಸ್ಟಿವಲ್‌ನಲ್ಲಿ ರಘು ದೀಕ್ಷಿತ್ ಭಾಗಿಯಾಗಲಿದ್ದು, ಕನ್ನಡ ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಖ್ಯಾತಿಗಳಿಸಿರುವ ಕಾನ್‌ ಫೆಸ್ಟಿವಲ್‌ನಲ್ಲಿ ಕನ್ನಡದ ಖ್ಯಾತ ಗಾಯಕ ಕೂಡ ಭಾಗಿಯಾಗುತ್ತಿರುವುದು ಈ ಬಾರಿಯ ಚಲನಚಿತ್ರೋತ್ಸವಕ್ಕೆ ಮತ್ತಷ್ಟು ಮೆರಗು ತಂದಿದೆ. ಕಾನ್‌ನಂತಹ ಅಂತರಾಷ್ಟ್ರೀಯ ಚಲನಚಿತ್ಸೋವದಲ್ಲಿ ಕನ್ನಡ ಹಾಡುಗಳನ್ನು ಹಾಡಲು ಅವಕಾಶ ಸಿಕ್ಕಿರುವುದು ಕನ್ನಡಿಗರ ಹೆಮ್ಮೆಯ ವಿಚಾರವಾಗಿದೆ. ಅದರಲ್ಲೂ ತಮ್ಮ ಮ್ಯಾಜಿಕಲ್ ಮ್ಯೂಸಿಕ್ ಹಾಗೂ ಸುಮಧುರ ಕಂಠದ ಮೂಲಕ ರಂಜಿಸಿದ್ದ ರಘು ದೀಕ್ಷಿತ್ ಕೂಡ ಕಾರ್ಯಕ್ರಮದ ಭಾಗವಾಗುತ್ತಿರುವುದು ವಿಶೇಷ.

ಈ ಕುರಿತು ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಗಾಯಕ ರಘು ದೀಕ್ಷಿತ್ ನಮ್ಮ ಕೈಗೆ ವೀಸಾ ಸಿಗುವವರೆಗೂ ಈ ಬಗ್ಗೆ ಘೋಷಣೆ ಮಾಡಲು ಇಷ್ಟ ಪಡುವುದಿಲ್ಲ. ನಾನು ನನ್ನ ಅಪ್ಲಿಕೇಶನ್ ಕಳುಹಿಸಿದ್ದೇನೆ. ಇನ್ನು ನನಗೆ ವಾಪಾಸ್ ಬಂದಿಲ್ಲ. ಹಾಗಾಗಿ ನಾನು ಈ ಬಗ್ಗೆ ಎಲ್ಲೂ ಬಹಿರಂಗ ಪಡಿಸಲು ಬಯಸುವುದಿಲ್ಲ. ವೀಸಾ ಬಂದರೆ ನಾನು ಉತ್ಸಾಹದಿಂದ ವಿಶೇಷ ಪ್ರದರ್ಶನ ನೀಡುತ್ತೇನೆ. ಸದ್ಯ ವೀಸಾ ಬರುವವರೆಗೂ ತಾಳ್ಮೆಯಿಂದ ಕಾಯುತ್ತೇನೆ ಎಂದು ಹೇಳಿದ್ದಾರೆ.

Singer Raghu Dixit to perform at Cannes Film Festival 2022

ಈ ಬಾರಿ ಕಾನ್ ಫೆಸ್ಟಿವಲ್‌ ನಲ್ಲಿ ಹಾಡಲು ಅವಕಾಶ ಸಿಕ್ಕರೆ, ರಘು ದೀಕ್ಷಿತ್ ತಮ್ಮ ಸಿಗ್ನೇಚರ್ ಸ್ಟೈಲ್ ಲುಂಗಿಯಲ್ಲಿಯೇ ಸಂಗೀತ ಪ್ರದರ್ಶನ ನೀಡಲಿದ್ದಾರೆ. ಅಲ್ಲದೆ ಪ್ರದರ್ಶನಕ್ಕೆ ಅವಕಾಶ ಸಿಕ್ಕರೆ ನಾವು ಸಂಪೂರ್ಣ ಬ್ಯಾಂಡ್‌ನೊಂದಿಗೆ ಹೋಗುವುದಿಲ್ಲ. 5 ವಿಭಾಗಗಳಾಗಿ ಮಾಡಿ ಹೋಗುತ್ತೇವೆ ಎಂದು ರಘು ದೀಕ್ಷಿತ್ ಹೇಳಿಕೊಂಡಿದ್ದಾರೆ.

ರಘು ದೀಕ್ಷಿತ್ ವಿಶ್ವದಾದ್ಯಾಂತ ಹಲವು ಕಡೆ ಸಂಗೀತ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಮೊದಲ ಬಾರಿಗೆ ಕಾನ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ನೀಡಲು ಸಜ್ಜಾಗಿದ್ದು, ಅಂತರಾಷ್ಟ್ರೀಯ ಫೆಸ್ಟಿವಲ್‌ನಲ್ಲಿ ಕನ್ನಡದ ಹಾಡುಗಳನ್ನು ಹಾಡಿ ಎಲ್ಲರ ಗಮನ ಸೆಳೆಯಲಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ರಘು ದೀಕ್ಷಿತ್ ನಮ್ಮ ಹಾಡುಗಳು ಸಹಜವಾಗಿ ಭಾರತದ ಕಥೆಗಳನ್ನು ಹೇಳುತ್ತವೆ. ಇಲ್ಲಿ ಆಧ್ಯಾತ್ಮಿಕತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಹಾಗಾಗಿ ಈ ಬಗ್ಗೆ ಹೆಚ್ಚು ಒತ್ತು ನೀಡಲಿದ್ದೇನೆ. ಅಲ್ಲದೆ ನಾವು ನೀಡುವ ಪ್ರದರ್ಶನದ ಸಮಯದಲ್ಲಿ ಜನ ಸಾಗರ ಸೇರಬೇಕು. ವಿದೇಶಿಗರ ಬಾಯಲ್ಲಿ ಕನ್ನಡ ಹಾಡು ಗುನುಗಬೇಕು ಹಾಗೇ ಮಾಡುತ್ತೇನೆ ಎಂದಿದ್ದಾರೆ.

Singer Raghu Dixit to perform at Cannes Film Festival 2022

ಸದ್ಯ ಈ ಬಾರಿಯ ಕಾನ್ ಫೆಸ್ಟಿವಲ್‌ನಲ್ಲಿ ಹೆಚ್ಚಾಗಿ ದಕ್ಷಿಣ ಭಾರತದ ನಟ ನಟಿಯರು ಹೆಚ್ಚಾಗಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಐಶ್ವರ್ಯಾ ರೈ ಯಿಂದ ಹಿಡಿದು ಪೂಜಾ ಹೆಗೆಡೆ, ತಮನ್ನಾ, ನಯನತಾರಾ ಸೇರಿದಂತೆ ಹಲವು ಸ್ಟಾರ್ ನಟಿಯರು ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಲಿದ್ದಾರೆ. ಇವರ ಜೊತೆಗೆ ಖ್ಯಾತ ಗಾಯಕ ರಘು ದೀಕ್ಷಿತ್ ಕೂಡ ಕಾರ್ಯಕ್ರಮದ ಭಾಗವಾಗಿದ್ದು, ಕನ್ನಡದ ಹಾಡುಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನ ಮಾಡುವುದನ್ನು ನೋಡಲು ಕನ್ನಡಿಗರು ಸಹ ಉತ್ಸುಕರಾಗಿದ್ದಾರೆ.

More from Filmibeat

English summary
Singer Song Writer Raghu Dixit Will Be Performing At The Upcoming 75th Edition Of The Cannes Film Festival. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X