For Quick Alerts
  ALLOW NOTIFICATIONS  
  For Daily Alerts

  ಆರ್‌ಸಿಬಿ ತಂಡದ ಶಿವಮ್ ದುಬೆ ಕಾಲೆಳೆದ ಗಾಯಕ ರಾಜೇಶ್ ಕೃಷ್ಣನ್

  |

  ಮೊದಲ ಪಂದ್ಯ ಗೆದ್ದು ಬೀಗಿದ್ದ ಆರ್‌ಸಿಬಿ ತಂಡ, ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಹೀನಾಯ ಸೋಲು ಕಂಡಿದೆ. ಈ ಸೋಲು ಸಹಜವಾಗಿ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳಿಗೆ ನಿರಾಸೆ ತಂದಿದೆ.

  ಪಂದ್ಯ ಸೋತಿದ್ದಕ್ಕೆ RCB ಕಾಲೆಳೆದ ರಾಜೇಶ್ ಕೃಷ್ಣನ್ | Filmibeat Kannada

  ಸ್ಟಾರ್ ಆಟಗಾರರೇ ತುಂಬಿರುವ ಆರ್‌ಸಿಬಿ ಸುಲಭವಾಗಿ ಪಂದ್ಯವನ್ನು ಕೈಬಿಟ್ಟಿದ್ದಕ್ಕೆ ಕೆಲವು ಅಭಿಮಾನಿಗಳು ಟೀಕೆ ಸಹ ಮಾಡಿದ್ದಾರೆ. ಇದೀಗ, ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರು ಆರ್‌ಸಿಬಿ ತಂಡದ ಆಲ್ ರೌಂಡರ್ ಶಿವಮ್ ದುಬೆ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ದುಬೆಯ ಆಟದ ಬಗ್ಗೆ ಕುಟುಕಿದ್ದಾರೆ. ಏನದು? ಮುಂದೆ ಓದಿ...

  ದುಬೆಯನ್ನು ಯುವರಾಜ್ ಸಿಂಗ್‌ಗೆ ಹೋಲಿಕೆ

  ದುಬೆಯನ್ನು ಯುವರಾಜ್ ಸಿಂಗ್‌ಗೆ ಹೋಲಿಕೆ

  ಶಿವಮ್ ದುಬೆ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಲ್ ರೌಂಡರ್ ಎನ್ನುವುದನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ಆದ್ರೆ, ಐಪಿಎಲ್‌ನಲ್ಲಿ ದುಬೆಯಿಂದ ಅಂತಹ ಯಾವುದೇ ಆಟ ಇದುವರೆಗೂ ಬಂದಿಲ್ಲ ಎನ್ನುವುದು ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಈ ಮಧ್ಯೆ ದುಬೆ ಅವರ ಬ್ಯಾಟಿಂಗ್ ಶೈಲಿಯನ್ನು ಯುವರಾಜ್ ಸಿಂಗ್‌ಗೆ ಹೋಲಿಕೆ ಮಾಡಿರುವುದು ಇದೆ.

  'RCB' ವಿರುದ್ಧ ಅಸಮಾಧಾನ ಹೊರಹಾಕಿದ ನಟ ಪ್ರದೀಪ್'RCB' ವಿರುದ್ಧ ಅಸಮಾಧಾನ ಹೊರಹಾಕಿದ ನಟ ಪ್ರದೀಪ್

  ನೋಡುವುದಕ್ಕೆ ಮಾತ್ರ ಯುವರಾಜ್ ಸಿಂಗ್!

  ನೋಡುವುದಕ್ಕೆ ಮಾತ್ರ ಯುವರಾಜ್ ಸಿಂಗ್!

  ಚಿಕ್ಕ ವಯಸ್ಸಿನಲ್ಲಿ ಯುವರಾಜ್ ಸಿಂಗ್ ಹೇಗಿದ್ದರೂ ಶಿವಮ್ ದುಬೆ ಸಹ ಅದೇ ರೀತಿ ಕಾಣ್ತಾರೆ ಹಾಗೂ ಆಟವನ್ನು ಅದೇ ರೀತಿ ಆಡ್ತಾರೆ ಎಂದು ಬಿಂಬಿಸಲಾಗಿತ್ತು. ಯುವರಾಜ್ ಸಿಂಗ್‌ರಂತೆ ಸಿಕ್ಸರ್ ಸಹ ಬಾರಿಸಿದ್ದರು. ಆದ್ರೆ, ಇದುವರೆಗೂ ಶ್ರೇಷ್ಠ ಆಟ ದುಬೆಯಿಂದ ಹೊರಬಂದಿಲ್ಲ. ನಿನ್ನೆಯ ಆಟದ ಬಳಿಕ ರಾಜೇಶ್ ಕೃಷ್ಣನ್ ಈ ಬಗ್ಗೆ ಟ್ವೀಟ್ ಮಾಡಿದ್ದು ''ದುಬೆ ಆಡುವಾಗ ಯುವರಾಜ್ ಸಿಂಗ್ ರೀತಿ ಕಾಣ್ತಾರೆ (ಬರಿ ಕಾಣ್ತಾರೆ ಅಷ್ಟೇ)'' ಎಂದು ಕಾಲೆಳೆದಿದ್ದಾರೆ.

  ಪಂಜಾಬ್ ವಿರುದ್ಧ ದುಬೆ ಪ್ರದರ್ಶನ ಹೇಗಿತ್ತು?

  ಪಂಜಾಬ್ ವಿರುದ್ಧ ದುಬೆ ಪ್ರದರ್ಶನ ಹೇಗಿತ್ತು?

  ಪಂಜಾಬ್ ವಿರುದ್ಧ 207 ರನ್‌ಗಳ ಬೃಹತ್ ಗುರಿಯನ್ನು ಬೆನ್ನುತ್ತಿದ್ದ ಆರ್‌ಸಿಬಿ ತಂಡ 57 ಗಳಿಸುವಷ್ಟರಲ್ಲಿ 5 ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಕ್ರೀಸ್‌ಗೆ ಬಂದ ಶಿವಮ್ ದುಬೆ ಆಕ್ರಮಣಕಾರಿ ಆಟ ಸಹ ಆಡಲಿಲ್ಲ. ಕೇವಲ 12 ಎಸೆತದಲ್ಲಿ 12 ರನ್ ಬಾರಿಸುವಲ್ಲಿ ಮಾತ್ರ ಶಕ್ತರಾದರು. ಬೌಲಿಂಗ್‌ನಲ್ಲಿ 2 ವಿಕೆಟ್ ಕಬಳಿಸಿದ್ದು ಗಮನ ಸೆಳೆದಿತ್ತು.

  ಆರ್‌ಸಿಬಿ vs ಕಿಂಗ್ಸ್ XI ಪಂಜಾಬ್ ಪಂದ್ಯದ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ಆರ್‌ಸಿಬಿ vs ಕಿಂಗ್ಸ್ XI ಪಂಜಾಬ್ ಪಂದ್ಯದ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್

  ರಾಹುಲ್ ಆಟಕ್ಕೆ ಮನಸೋತ ರಾಜೇಶ್

  ರಾಹುಲ್ ಆಟಕ್ಕೆ ಮನಸೋತ ರಾಜೇಶ್

  ಆರ್‌ಸಿಬಿ ವಿರುದ್ಧ ಭರ್ಜರಿ ಆಟ ಪ್ರದರ್ಶಿಸಿದ ಕೆಎಲ್ ರಾಹುಲ್ 136 ರನ್ ಬಾರಿಸಿದ್ದರು. ಆದ್ರೆ, ಆರ್‌ಸಿಬಿ ತಂಡ 109 ರನ್‌ಗೆ ಆಲ್‌ ಔಟ್ ಆಯಿತು. ರಾಹುಲ್ ಅವರ ಒಟ್ಟಾರೆ ಸ್ಕೋರ್ ಸಹ ಮುಟ್ಟಲು ಆರ್‌ಸಿಬಿಯಿಂದ ಆಗಲಿಲ್ಲ ಎಂದು ರಾಜೇಶ್ ಕೃಷ್ಣನ್ ಬೇಸರ ವ್ಯಕ್ತಪಡಿಸಿದ್ದಾರೆ.

  English summary
  Singer Rajesh Krishnan expressed regret over the RCB and Shivam dubey performance after defeat against Punjab.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X