»   » ಬಹುಭಾಷಾ ನಟಿ ಲೈಂಗಿಕ ಪ್ರಕರಣ: ಗಾಯಕಿ ರಿಮಿ ಟೊಮಿ ವಿಚಾರಣೆ

ಬಹುಭಾಷಾ ನಟಿ ಲೈಂಗಿಕ ಪ್ರಕರಣ: ಗಾಯಕಿ ರಿಮಿ ಟೊಮಿ ವಿಚಾರಣೆ

Posted By:
Subscribe to Filmibeat Kannada

ಬಹುಭಾಷಾ ನಟಿ ಕಿಡ್ನಾಪ್ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಈಗ ಮಲಯಾಳಂ ಗಾಯಕಿ ಮತ್ತು ನಟಿ ರಿಮಿ ಟೊಮಿ ಅವರನ್ನು ಇಂದು ವಿಚಾರಣೆ ನಡೆಸಿದೆ.

ಮಲಯಾಳಂನ ಖ್ಯಾತ ಹಿನ್ನೆಲೆ ಗಾಯಕಿ ಮತ್ತು ನಟಿ ರಿಮಿ ಟೊಮಿ ಅವರು ಬಹುಭಾಷಾ ನಟಿ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ನಟ ದಿಲೀಪ್ ಮತ್ತು ಆತನ ಪತ್ನಿ ಕಾವ್ಯ ಮಾಧವನ್ ರೊಂದಿಗೆ ಹಣಕಾಸು ವ್ಯವಹಾರ ಹೊಂದಿದ್ದರು ಎಂಬ ಹಿನ್ನೆಲೆಯಲ್ಲಿ, ಪ್ರಕರಣದ ವಿಶೇಷ ತನಿಖಾ ತಂಡ ಅವರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದಿದೆ.

Singer Rimy Tomy questioned in Malayalam actress assault case

ವಿಶೇಷ ತನಿಖಾ ತಂಡದವರು ರಿಮಿ ಟೊಮಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಣೆ ನಡೆಸಿದ್ದು, ಅವರೊಂದಿಗೆ ಮತ್ತೊಮ್ಮೆ ವಿಚಾರಣೆ ನಡೆಸುವ ಸಾಧ್ಯತೆಗಳು ಇವೆಯಂತೆ. ಅಂದಹಾಗೆ ರಿಮ್ಮಿ ಟೊಮಿ ರವರು ದಿಲೀಪ್ ದಂಪತಿಗಳೊಂದಿಗೆ ಯಾವುದೇ ಹಣಕಾಸು ವ್ಯವಹಾರ ಇಲ್ಲವೆಂದು ಹೇಳಿದ್ದು, ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವು ಮಾಹಿತಿಗಳನ್ನು ಮಾತ್ರ ಅವರಿಂದ ಪಡೆದಿದ್ದಾರೆ ಎಂದು ಹೇಳಿರುವುದು ಮೂಲಗಳಿಂದ ತಿಳಿದಿದೆ.

ಅಂದಹಾಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪದಲ್ಲಿ ಬಂಧಿತರಾಗಿರುವ ನಟ ದಿಲೀಪ್ ಗೆ ಕೇರಳ ಹೈಕೋರ್ಟ್ ಜಾಮೀನು ನೀಡಲು ತಿರಸ್ಕರಿಸಿದೆ.

English summary
Malayalam Singer Rimy Tomy questioned in Malayalam actress assault case

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada