For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ಗಾಯಕ ಸಂಚಿತ್ ಹೆಗ್ಡೆ

  |
  ಸಂಚಿತ್ ಹೆಗ್ಡೆಯ ಡ್ರೀಮ್ ಪ್ರಾಜೆಕ್ಟ್ ಯಾವ್ದು?

  ಗಾಯಕ ಸಂಚಿತ್ ಹೆಗ್ಡೆ ಹಾಡುತ್ತಿರುವ ಎಲ್ಲ ಹಾಡುಗಳು ಹಿಟ್ ಆಗುತ್ತಿವೆ. ಚಿತ್ರರಂಗದಲ್ಲಿ ಸಂಚಿತ್ ಹೆಗ್ಡೆ ಟ್ರೆಂಡ್ ಜೋರಾಗಿ ನಡೆಯುತ್ತಿದೆ. ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಒಂದು ವರ್ಷದಲ್ಲಿ ಹಾಡುತ್ತಿದ್ದಾರೆ.

  ಒಂದು ಕಡೆ ಅವರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಳ್ಳಲು ಸಂಚಿತ್ ನಿರ್ಧಾರ ಮಾಡಿದ್ದಾರೆ. ತಾವೇ ಒಂದು ಆಲ್ಬಂ ಹಾಡು ಮಾಡುತ್ತಿದ್ದು, ಅದರ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ.

   ಪುನೀತ್ ಇಂಟ್ರೊಡಕ್ಷನ್ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ ಪುನೀತ್ ಇಂಟ್ರೊಡಕ್ಷನ್ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ

  ಎಲ್ಲ ಸಿನಿಮಾಗಳಿಗೂ ಹಾಡದೆ, ಕೆಲವು ಆಯ್ಕೆಯ ಸಿನಿಮಾಗಳಿಗೆ ಮಾತ್ರ ಹಾಡಲು ನಿರ್ಧಾರ ಮಾಡಿದ್ದಾರೆ. ಸಿನಿಮಾ ಸಂಗೀತದಿಂದ ಬಿಡುವು ಪಡೆದು, ತಮ್ಮ ಕನಸಿನ ಪ್ರಾಜೆಕ್ಟ್ ಶುರು ಮಾಡುತ್ತಿದ್ದಾರೆ. ಐದಾರೂ ಭಾಷೆಯಲ್ಲಿ ಒಂದು ಆಲ್ಬಂ ಹಾಡನ್ನು ಮಾಡಬೇಕು ಎನ್ನುವುದು ಸಂಚಿತ್ ಗುರಿಯಾಗಿದೆ. ಈ ಯೋಜನೆಗಾಗಿ ಒಂದು ದೊಡ್ಡ ಸಂಸ್ಥೆಯೊಂದಿಗೆ ಸಂಚಿತ್ ಕೈ ಜೋಡಿಸಿದ್ದಾರೆ.

  ಇತ್ತೀಚಿಗಷ್ಟೆ 'ಬ್ರಹ್ಮಾಚಾರಿ' ಸಿನಿಮಾದ ಒಂದು ಹಾಡನ್ನು ಸಂಚಿತ್ ಹೆಗ್ಡೆ ಹಾಡಿದ್ದಾರೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದು, ಸಂಚಿತ್ ತಮ್ಮ ಮುಂದಿನ ಕನಸಿನ ಬಗ್ಗೆ ಹೇಳಿಕೊಂಡರು.

  ಸಂಚಿತ್ ಹೆಗ್ಡೆ ಹೃದಯ ಹದಿನಾರು ಚೂರಾಗಿದೆಯಂತೆಸಂಚಿತ್ ಹೆಗ್ಡೆ ಹೃದಯ ಹದಿನಾರು ಚೂರಾಗಿದೆಯಂತೆ

  ಸರಿಗಮಪ ಕಾರ್ಯಕ್ರಮದ ಸ್ಪರ್ಧಿ ಆಗಿದ್ದ, ಸಂಚಿತ್ ಹೆಗ್ಡೆ, 'ಕಾಲೇಜ್ ಕುಮಾರ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದರು. ಆ ನಂತರ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಹಾಡನ್ನು ಸಹ ಹಾಡಿದರು.

  English summary
  Singer Sanjith Hegde took short break from film music.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X