ಕಂಚಿ ಮಠಕ್ಕೆ ಮನೆ ದಾನ ಮಾಡಿದ ಎಸ್ ಪಿ ಬಾಲಸುಬ್ರಹ್ಮಣ್ಯಂ

ಖ್ಯಾತ ಗಾಯಕ ಎಸ್ ಪಿ ಬಾಲಸುಪ್ರಬ್ರಹ್ಮಣ್ಯಂ ತಮ್ಮ ಮನೆಯನ್ನು ದಾನ ಮಾಡಿದ್ದಾರೆ. ಕಂಚಿ ಮಠದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮಿಜಿ ಅವರಿಗೆ ತಮ್ಮ ಮನೆಯನ್ನು ಒಪ್ಪಿಸಿದ್ದಾರೆ.

ಆಂಧ್ರ ಪ್ರದೇಶದ ನೆಲ್ಲೂರ್ ನಲ್ಲಿರುವ ತಮ್ಮ ಮನೆಯನ್ನು ದಾನ ಮಾಡುವ ವಿಷಯವನ್ನು ಎಸ್ ಪಿ ಬಿ ಈ ಹಿಂದೆಯೇ ತಿಳಿಸಿದ್ದರು. ಅದೇ ರೀತಿ ಈಗ ಕಂಚಿ ಮಠಕ್ಕೆ ಮನೆ ನೀಡಿದ್ದಾರೆ. ಆ ಮನೆಯನ್ನು ಸಂಸ್ಕೃತ ಹಾಗೂ ವೇದ ಪಾಠ ಶಾಲೆ ಮಾಡಬೇಕು ಎನ್ನುವುದು ಎಸ್ ಪಿ ಬಿ ಆಸೆಯಾಗಿದೆ.

ಎಸ್ ಪಿ ಬಿ ದೇವರ ಬಗ್ಗೆ, ಧಾರ್ಮಿಕ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿ ಇರುವ ವ್ಯಕ್ತಿ. ಸಂಸ್ಕೃತಿ ಮೇಲೆ ಅಪಾರ ಪ್ರೀತಿ ಇರುವ ಇವರು ತಮ್ಮ ಮನೆಯನ್ನು ಒಂದು ಒಳ್ಳೆಯ ಕಾರಣಕ್ಕಾಗಿ ನೀಡಿದ್ದಾರೆ. ಎಸ್ ಪಿ ಬಿ ಕಾರ್ಯವನ್ನು ಅವರ ಅಭಿಮಾನಿಗಳ ಮೆಚ್ಚಿಕೊಂಡಿದ್ದಾರೆ.

Singer SP Balasubrahmanyam Donates His House To Kanchi Mutt

ಎಸ್ ಬಿ ಬಾಲಸುಪ್ರಬ್ರಹ್ಮಣ್ಯಂ ಭಾರತ ಚಿತ್ರರಂಗ ಕಂಡ ಅದ್ಬುತ ಗಾಯಕ. ಕನ್ನಡ, ತಮಿಳು, ಹಿಂದಿ, ತೆಲುಗು ಭಾಷೆಯ ಸಿನಿಮಾ ಹಾಡುಗಳ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದಾರೆ. 40000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಬರೋಬ್ಬರಿ 16 ಭಾಷೆಗಳಲ್ಲಿ ಹಾಡಿರುವ ಎಸ್ ಪಿ ಬಿ 6 ಬಾರಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅತಿ ಹೆಚ್ಚು ಸಿನಿಮಾ ಹಾಡುಗಳನ್ನು ಹಾಡಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.

More from Filmibeat

English summary
Singer SP Balasubrahmanyam donates his house to Kanchi Mutt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X