Just In
Don't Miss!
- News
ಮಾಜಿ ಪ್ರಧಾನಿ ನೆಹರೂ ಅತಿದೊಡ್ಡ ಅತ್ಯಾಚಾರಿ ಎಂದ ಸಾಧ್ವಿ
- Technology
ರಿಯಲ್ ಮಿ x2 ಪ್ರೊ ವಿಮರ್ಶೆ : ಕೊಟ್ಟ ಕಾಸಿಗೆ ಮೋಸವಿಲ್ಲ!
- Lifestyle
ಸೋಮವಾರದ ದಿನ ಭವಿಷ್ಯ 9-12-2019
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಕ್ರಿಕೆಟಿಗ ಅನಿಲ್ ಕುಂಬ್ಳೆ ಹಾಕಿದ ಸವಾಲ್ ಸ್ವೀಕರಿಸಿದ ಗಾಯಕ ವಿಜಯ್ ಪ್ರಕಾಶ್
ನವೆಂಬರ್ ತಿಂಗಳು ಅಂದರೆ ಕನ್ನಡಿಗರಿಗೆ ದೊಡ್ಡ ಹಬ್ಬ. ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಸ್ಯಾಂಡಲ್ ವುಡ್ ಮಂದಿ ವಿಶೇಷವಾಗಿ ಆಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪದ್ಯ ಓದುವ ಸವಾಲಿನ ಅಭಿಯಾನದ ಮೂಲಕ ಆಚರಿಸಲಾಗುತ್ತಿದೆ.
ಕವನ ಓದುವ ಸವಾಲ್ ಅನ್ನು ಕ್ರಿಕೆಟ್ ದಿಗ್ಗಜ ಅನೀಲ್ ಕುಂಬ್ಳೆ ಕೂಡ ಸ್ವೀಕರಿಸಿದ್ದಾರೆ. ನಟ ಗೋಲ್ಡನ್ ಸ್ಟಾರ್ ಗಣೇಶ್, ಅನಿಲ್ ಕುಂಬ್ಳೆಗೆ ಸವಾಲ್ ಎಸೆದಿದ್ದರು. ಸವಾಲ್ ಸ್ವೀಕರಿಸಿದ ಅನೀಲ್ ಕುಂಬ್ಳೆ ನಂತರ ಕಿಚ್ಚ ಸುದೀಪ್, ವಿಜಯ್ ಪ್ರಕಾಶ್ ಮತ್ತು ಪುನೀತ್ ರಾಜ್ ಕುಮಾರ್ ಗೆ ಸವಾಲ್ ಎಸೆದಿದ್ದಾರೆ.
ಸುದೀಪ್, ಪುನೀತ್ ಗೆ ಚಾಲೆಂಜ್ ಹಾಕಿದ ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ, ರಾಷ್ಟ್ರಕವಿ ಕುವೆಂಪು ಅವರ "ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು..." ಪದ್ಯ ಓದಿದ್ದರು. ಕುಂಬ್ಳೆ ಸವಾಲ್ ಅನ್ನು ಸ್ವೀಕರಿಸಿದ ಗಾಯಕ ವಿಜಯ್ ಪ್ರಕಾಶ್ ಡಿ.ವಿ ಗುಂಡಪ್ಪ ಅವರ ಪದ್ಯವನ್ನು ಓದಿದ್ದಾರೆ. ಕೇವಲ ಓದಿದ್ದಲ್ಲದೆ ಪದ್ಯವನ್ನು ಹಾಡಿನ ರೂಪದಲ್ಲೂ ಹೇಳಿ ಕನ್ನಡ ತನ ಮೆರೆದಿದ್ದಾರೆ.
ಈ ಸವಾಲನ್ನು ಎಲ್ಲಾ ಕನ್ನಡಿಗರು ಸ್ವೀಕರಿಸುವಂತೆ ಹೇಳಿದ್ದಾರೆ. ತಾಯಿ ಮಕ್ಕಳಿಗೆ ಹೇಳುವುದಾಗಲಿ, ಶಿಕ್ಷಕರು, ಆಟೋ ಚಾಲಕರಾಗಲಿ ಎಲ್ಲರು ಈ ಆಭಿಯಾನದಲ್ಲಿ ಭಾಗಿಯಾಗಿ ಎಂದು ಹೇಳಿದ್ದಾರೆ. ಇನ್ನು ಅನೀಲ್ ಕುಂಬ್ಳೆ ಸವಾಲನ್ನು ಕಿಚ್ಚ ಸುದೀಪ್ ಕೂಡ ಸ್ವೀಕರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸವಾಲನ್ನು ಸ್ವೀಕರಿಸಿದ್ದೇನೆ. ಸಧ್ಯದಲ್ಲೇ ಪದ್ಯ ವಾಚನ ಮಾಡುವುದಾಗಿ ಹೇಳಿದ್ದಾರೆ.
ಎಲ್ಲರಿಗೂ ನಮನ 🙏
— vijay prakash (@rvijayprakash) November 17, 2019
ಇಲ್ಲಿದೆ ನನ್ನ ಕವನ 😍@anilkumble1074 pic.twitter.com/Mdci9djGwn
ಅಂದಹಾಗೆ, ಕವನ ಚಾಲೆಂಜ್ ನಟ ಯಶ್ ಮೂಲಕ ಪ್ರಾರಂಭ ಆಗಿತ್ತು. ಹಿರಿಯ ಪತ್ರಕರ್ತರೊಬ್ಬರು ನೀಡಿದ ಸವಾಲನ್ನು ಯಶ್ ಸ್ವೀಕಾರ ಮಾಡಿ ಕುವೆಂಪು ಪದ್ಯ ಓದಿದ್ದರು. ನಂತರ ಅದನ್ನು ನಿರ್ದೇಶಕ ನಾಗಾಭರಣ, ಗೀತಾ ಸಾಹಿತಿ ಡಾ.ವಿ ನಾಗೇಂದ್ರ ಪ್ರಸಾದ್, ಗೌಸ್ ಪೀರ್, ಹಾಸ್ಯ ನಟ ಚಿಕ್ಕಣ್ಣ, ರವಿಶಂಕರ್ ಗೌಡ ಹಾಗೂ ರವಿಶಂಕರ್ ರಿಗೆ ನೀಡಿದ್ದರು. ಈಗ ಈ ಚಾಲೆಂಜ್ ಹಾಗೆ ಮುಂದುವರೆಯುತ್ತ ಹೋಗುತ್ತಿದೆ.