twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ವಿರುದ್ಧ ಹೋರಾಟಕ್ಕೆ ವಿಜಯ್ ಪ್ರಕಾಶ್ ದೇಣಿಗೆ: ಧನ್ಯವಾದ ತಿಳಿಸಿದ ಸಿಎಂ

    |

    ಕೊರೊನಾ ವಿರುದ್ಧ ಹೋರಾಟಕ್ಕೆ ಸಾಕಷ್ಟು ಮಂದಿ ದೇಣಿಗೆ ನೀಡುತ್ತಿದ್ದಾರೆ. ಕಿಲ್ಲರ್ ಕೊರೊನಾವನ್ನು ಮಟ್ಟಹಾಕಲೇ ಬೇಕೆಂದು ಪಣತೊಟ್ಟಿರುವ ಭಾರತ 14 ದಿನಗಳ ಕಾಲ ಲಾಕ್ ಡೌನ್ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಸಾಕಷ್ಟು ಮಂದಿ ಹೊತ್ತಿನ ಊಟಕ್ಕು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

    ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗಲು ಸಾಕಷ್ಟು ಸಿನಿಲೆಬ್ರಿಟಿಗಳು ಕೋಟಿ ಕೋಟಿ ಹಣವನ್ನು ದೇಣಿಗೆ ನೀಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿಯೂ ಸಾಕಷ್ಟು ಮಂದಿ ಸಿ ಎಂ ಪರಿಹಾರ ನಿಧಿಗೆ ಹಣ ನೀಡುತ್ತಿದ್ದಾರೆ. ಸದ್ಯ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಕೂಡ ಸಿ ಎಂ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಮನವೀಯತೆ ಮೆರೆದಿದ್ದಾರೆ.

    ಕೊರೊನಾ ವೈರಸ್ ಸಂಕಷ್ಟ: 50 ಲಕ್ಷ ರೂ ದೇಣಿಗೆ ನೀಡಿ ಔದಾರ್ಯ ಮೆರೆದ ಪುನೀತ್ ರಾಜ್‌ಕುಮಾರ್ಕೊರೊನಾ ವೈರಸ್ ಸಂಕಷ್ಟ: 50 ಲಕ್ಷ ರೂ ದೇಣಿಗೆ ನೀಡಿ ಔದಾರ್ಯ ಮೆರೆದ ಪುನೀತ್ ರಾಜ್‌ಕುಮಾರ್

    10 ಲಕ್ಷ ದೇಣಿಗೆ ನೀಡಿದ ವಿಜಯ್ ಪ್ರಕಾಶ್

    10 ಲಕ್ಷ ದೇಣಿಗೆ ನೀಡಿದ ವಿಜಯ್ ಪ್ರಕಾಶ್

    ಅನೇಕ ಸ್ಟಾರ್ ನಟರು ತಮ್ಮ ಅಭಿಮಾನಿ ಸಂಘಗಳ ಮೂಲಕ ಜನರಿಗೆ ಆಹಾರ, ಧಾನ್ಯಗಳನ್ನು ತಲುಪಿಸುವ ಕಾರ್ಯ ನಡೆಸುತ್ತಿದ್ದಾರೆ. ಸದ್ಯ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಕೊರೊನಾ ವಿರುದ್ಧ ಹೋರಾಟಕ್ಕೆ 10 ಲಕ್ಷ ದೇಣಿಗೆ ನೀಡಿ ಕಷ್ಟದಲ್ಲಿರುವವರಿಗೆ ನೆರವಾಗಿದ್ದಾರೆ.

    ಖ್ಯಾತ ಗಾಯಕನಿಗೆ ಸಿಎಂ ಧನ್ಯವಾದ

    ಖ್ಯಾತ ಗಾಯಕನಿಗೆ ಸಿಎಂ ಧನ್ಯವಾದ

    ವಿಜಯ್ ಪ್ರಕಾಶ್ ಸಿ ಎಂ ಪರಿಹಾರ ನಿಧಿಗೆ ದೇಣಿಗೆ ನೀಡಿ ಕೊರೊನಾ ವಿರುದ್ಧ ಹೊರಟಕ್ಕೆ ಕೈ ಜೋಡಿದ್ದಾರೆ. ವಿಶೇಷ ಅಂದರೆ ಆನ್ ಲೈನ್ ಮೂಲಕ ದೇಣಿಗೆ ನೀಡಿ ಸಾಮಾಜಿಕ ಅಂತರದ ಮಹತ್ವ ಸಾರಿದ್ದಾರೆ. ಈ ಬಗ್ಗೆ ಸಿ ಎಂ ಯಡಿಯೂರಪ್ಪ ಮೆಚ್ಚುಗೆ ವ್ಯಚ್ಚಪಡಿಸಿದ್ದಾರೆ "ಕೊರೊನಾ ವಿರುದ್ಧ ಹೋರಾಟಕ್ಕೆ ವಿಜಯ್ ಪ್ರಕಾಶ್ ಕೈ ಜೋಡಿಸಿದ್ದಾರೆ, ಮುಖ್ಯವಾಗಿ ಆನ್ ಲೈನ್ ಮೂಲಕ ದೇಣಿಗೆ ನೀಡಿ ಸಾಮಾಜಿಕ ಅಂತರದ ಮಹತ್ವ ಸಾರಿದ್ದಾರೆ ಧನ್ಯವಾದಗಳು" ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

    "ಪ್ರೀತಿಯ ಬೊಗಸೆಯಿಂದ ಚಿಕ್ಕ ಸೇವೆ"

    ಸಿಎಂ ಮಾತಿಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ಪ್ರಕಾಶ್ "ಕೆರೆಯ ನೀರನ್ನು ಕೆರೆಗೆ ಚೆಲ್ಲಿ. ವರವ ಪಡೆದವರಂತೆ ಕಾಣಿರೋ. ಜನರು ನನಗೆ ನೀಡಿರುವ ಪ್ರೀತಿಯ ಬೊಗಸೆಯಿಂದ ಚಿಕ್ಕ ಸೇವೆ. ನಾವೆಲ್ಲರು ಕೈ ಜೋಡಿಸಿದರೆ ಕೊರೊನಾನ ಗೆಲ್ಲಬಹುದು" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಸಾಕಷ್ಟು ಮಂದಿ ದೇಣಿಗೆ ನೀಡಿದ್ದಾರೆ

    ಸಾಕಷ್ಟು ಮಂದಿ ದೇಣಿಗೆ ನೀಡಿದ್ದಾರೆ

    ಕೊರೊನಾ ವಿರುದ್ಧ ಹೋರಾಟಕ್ಕೆ ಸಾಕಷ್ಟು ಮಂದಿ ದೇಣಿಗೆ ನೀಡಿದ್ದಾರೆ. ಜತೆಗೆ ತಮ್ಮದೆ ಆದ ರೀತಿಯಲ್ಲಿ ಸಹಾಯ ಮಾಡಿ ಕಷ್ಟದಲ್ಲಿರುವವಿಗೆ ನೆರವಾಗುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಅಭಿಮಾನಿಗಳು ಸಂಕಷ್ಟದಲ್ಲಿರುವ ಜನರಿಗೆ ಆಹಾರ, ಧವಸಧಾನ್ಯ ಸೇರಿದಂತೆ ತಿಂಗಳ ರೇಷನ್ ಖರ್ಚನ್ನು ನೋಡಿಕೊಳ್ಳುತ್ತಿದ್ದಾರೆ. ಇನ್ನು ಕಷ್ಟದಲ್ಲಿರುವ ಸಾಕಷ್ಟು ಮಂದಿ ಕಲಾವಿದರ ಕಷ್ಟಕ್ಕೂ ಹೆಗಲಕೊಟ್ಟು ಮಾನವೀಯತೆ ಮೆರೆಯುತ್ತಿದ್ದಾರೆ.

    English summary
    Kannada Famous singer Vijay Prakash Donate to 10 lakhs to CM relief fund.
    Saturday, April 4, 2020, 9:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X