twitter
    For Quick Alerts
    ALLOW NOTIFICATIONS  
    For Daily Alerts

    ಪಿಯುಸಿ ವಿದ್ಯಾರ್ಥಿಯರೇ ಗಾಯಕ ವಿಜಯ ಪ್ರಕಾಶ್ ಮಾತನ್ನೊಮ್ಮೆ ಕೇಳಿ

    By Bharath Kumar
    |

    2017-18ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದ್ದರೆ, ಉಡುಪಿ ದ್ವಿತೀಯ ಸ್ಥಾನದಲ್ಲಿದೆ. ಚಿಕ್ಕೋಡಿ ಅತಿ ಕಡಿಮೆ ಫಲಿತಾಂಶವನ್ನು ಪಡೆದು ಕೊನೆಯ ಸ್ಥಾನದಲ್ಲಿದೆ.

    ಸಾಮಾನ್ಯವಾಗಿ ಪಿಯುಸಿ ಫಲಿತಾಂಶ ಹೊರಬಿದ್ದರೇ ವಿದ್ಯಾರ್ಥಿಗಳ ಬಗ್ಗೆ ಪೋಷಕರಿಗೆ ಭಯ ಹೆಚ್ಚಿರುತ್ತೆ. ಫಲಿತಾಂಶಕ್ಕೆ ಎದುರಿ, ಪೋಷಕರಿಗೆ ಎದುರಿ ಮಕ್ಕಳು ಏನಾದರೂ ಅನಾಹುತ ಮಾಡಿಕೊಂಡು ಬಿಡುತ್ತಾರ ಎಂಬ ಆತಂಕ ಕಾಡುವುದು ಸಹಜ. ಇಂತಹ ವಿದ್ಯಾರ್ಥಿಗಳಿಗೆ ಗಾಯಕ ವಿಜಯ್ ಪ್ರಕಾಶ್ ಅರ್ಥಪೂರ್ಣ ಸಂದೇಶ ನೀಡಿದ್ದಾರೆ.

    ದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ

    ''ಜೀವನ ಎನ್ನುವುದು ದೊಡ್ಡ ಪ್ರಯಾಣ, ಜೀವನ ಎನ್ನುವುದು ಒಂದು ಪುಸ್ತಕ, ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ಪರೀಕ್ಷೆ ಎನ್ನುವುದು ಶೈಕ್ಷಣಿಕ ಜೀವನದ ಮುಖ್ಯವಾದ ಹಂತ ನಿಜ. ಪಾಸ್ ಆದವರಿಗೆ, ಹೆಚ್ಚು ಅಂಕಗಳು ಪಡೆದಿರುವ ವಿದ್ಯಾರ್ಥಿಗಳಿಗೆ ನನ್ನ ಧನ್ಯವಾದಗಳನ್ನ ತಿಳಿಸಿದ್ದಾರೆ.

    singer vijay prakash message to puc student

    ಇನ್ನು ಫೇಲ್ ಆದವರಿಗೆ, ಹಾಗೂ ಕಡಿಮೆ ಅಂಕ ಪಡೆದವರಿಗೆ ಬುದ್ದಿವಾದ ಹೇಳಿರುವ ವಿಜಯ್ ಪ್ರಕಾಶ್ ''ಮಾರ್ಕ್ಸ್ ಅಂತ ಬಂದಾಗ ಕಮ್ಮಿ ಬರೋದು ಸಹಜ. ಹಾಗಂತ ಯಾವುದೇ ಅನಾಹುತ ಮಾಡಿಕೊಳ್ಳೋದು ಬೇಡ. ಮನಸ್ಸಿಗೆ ಬೇಜಾರು ಮಾಡ್ಕೊಂಡು ಕಷ್ಟಕರವಾದ ತೀರ್ಮಾನಗಳನ್ನ ತೆಗೆದುಕೊಳ್ಳುವುದು ಬೇಡ'' ಎಂದು ಜಾಗೃತಿ ಮೂಡಿಸಿದ್ದಾರೆ.

    ಕರ್ನಾಟಕ ಪಿಯು ಫಲಿತಾಂಶ : ಅತೀ ಹೆಚ್ಚು ಅಂಕ ಗಳಿಸಿದವರು

    ''ಒಂದು ಪಟುದಿಂದ ಪುಸ್ತಕವನ್ನ ಅಳೆಯಲು ಸಾಧ್ಯವಿಲ್ಲ. ಅದನ್ನ ಸಂಪೂರ್ಣವಾಗಿ ಅನುಭವಿಸದಾಗಲೇ ಆ ಪುಸ್ತಕಕ್ಕೆ ಒಂದು ಅರ್ಥ. ಅದೇ ರೀತಿ ಜೀವನ ಕೂಡ. ಹಾಗೆ, ಕಮ್ಮಿ ಅಂಕಗಳು ಗಳಿಸಿಕೊಂಡಿದ್ರೆ ಜೀವನದಲ್ಲಿ ಇನ್ನು ಹಲವು ಅವಕಾಶಗಳು ನಿಮಗಾಗಿ ಕಾದಿದೆ. ಅದರಲ್ಲಿ ಕಷ್ಟಪಡಿ, ಭವಿಷ್ಯದಲ್ಲಿ ನೀವು ಸುಖ ಕಾಣ್ತೀರಾ'' ಎಂದು ಸಂದೇಶ ಸಾರಿದ್ದಾರೆ.

    English summary
    After announced Second Puc Result, singer vijay prakash has gave meaningful message to Puc student.
    Monday, April 30, 2018, 13:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X