twitter
    For Quick Alerts
    ALLOW NOTIFICATIONS  
    For Daily Alerts

    ಬೇಡಿಕೆ ಈಡೇರಿಸುವ ವರೆಗೆ ಚಿತ್ರಪ್ರದರ್ಶನ ಇಲ್ಲ: ಚಿತ್ರ ಪ್ರದರ್ಶಕರ ಮಂಡಳಿ

    |

    ಕೇಂದ್ರ ಸರ್ಕಾರವು ಚಲನಚಿತ್ರಮಂದಿಗಳನ್ನು ತೆರೆಯಲು ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿವೆಯಾದರೂ ಚಿತ್ರಮಂದಿರಗಳು ಮುಂದಿನ ವರ್ಷ ಜನವರಿ ವರೆಗೆ ತೆರೆಯುವುದು ಅನುಮಾನವಾಗಿದೆ.

    ಕೆಲವು ಚಿತ್ರಮಂದಿರಗಳು ಈಗ ಕಾರ್ಯನಿರ್ವಹಿಸುತ್ತಿವೆಯಾದರೂ ಪಟ್ಟಣ ಪ್ರದೇಶಗಳು, ಹೋಬಳಿ ಮಟ್ಟದ ಸಿಂಗಲ್ ಥಿಯೇಟರ್‌ಗಳು ಇನ್ನೂ ತೆರೆದಿಲ್ಲ.

    ಚಿತ್ರಮಂದಿರಗಳು ಓಪನ್: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ ಚಿತ್ರಮಂದಿರಗಳು ಓಪನ್: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

    ನಿನ್ನೆ (ಅಕ್ಟೋಬರ್ 30) ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ ಅಧ್ಯಕ್ಷ ಆರ್‌ಆರ್‌ ಓದುಗೌಡರ್, ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಚಿತ್ರಮಂದಿರಗಳನ್ನು ತೆರೆಯುವುದಿಲ್ಲ ಎಂದು ಹೇಳಿದ್ದಾರೆ. ಈ ನಿರ್ಣಯಕ್ಕೆ ವಿವಿಧ ಕಾರಣಗಳನ್ನು ಸಹ ಅವರು ನೀಡಿದ್ದಾರೆ.

    ಚಿತ್ರಮಂದಿರಗಳ ಆಸನಗಳು 75% ಶೇಕಡಾ ಭರ್ತಿ ಆಗುವವರೆಗೆ ರಾಜ್ಯದಾದ್ಯಂತ ಚಿತ್ರಮಂದಿರಗಳನ್ನು ತೆರೆಯುವುದಿಲ್ಲ, ಚಿತ್ರಪ್ರದರ್ಶನ ಮಾಡುವುದಿಲ್ಲ ಎಂದು ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ ಅಧ್ಯಕ್ಷ ಆರ್‌ಆರ್ ಓದುಗೌಡರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಚಿತ್ರಮಂದಿರ ರೀ ಓಪನ್: 24 ನಿಯಮ ಪಾಲಿಸುವಂತೆ ಕೇಂದ್ರ ಸೂಚನೆಚಿತ್ರಮಂದಿರ ರೀ ಓಪನ್: 24 ನಿಯಮ ಪಾಲಿಸುವಂತೆ ಕೇಂದ್ರ ಸೂಚನೆ

    ಕೊರೊನಾ ಕಾರಣಕ್ಕೆ ಚಿತ್ರಮಂದಿರಗಳಿಗೆ ಭಾರಿ ನಷ್ಟ

    ಕೊರೊನಾ ಕಾರಣಕ್ಕೆ ಚಿತ್ರಮಂದಿರಗಳಿಗೆ ಭಾರಿ ನಷ್ಟ

    ಕೊರೊನಾ ಕಾರಣದಿಂದ ಚಿತ್ರಮಂದಿರ ಮಾಲೀಕರು ಭಾರಿ ನಷ್ಟ ಎದುರಿಸುತ್ತಿದ್ದಾರೆ. ಈ ಸಮಯದಲ್ಲಿ ಸರ್ಕಾರದ ಮುಂದೆ ಚಿತ್ರಮಂದಿರಗಳ ಮಾಲೀಕರು ಕೆಲವು ಬೇಡಿಕೆಗಳನ್ನು ಇಟ್ಟಿದ್ದು ಅವುಗಳನ್ನು ಈಡೇರಿಸುವವರೆಗೆ ಚಿತ್ರಪ್ರದರ್ಶನ ಮಾಡುವುದಿಲ್ಲ ಎಂದು ಓದುಗೌಡರ್ ಹೇಳಿದ್ದಾರೆ.

    ನವೀಕರಣ ಶುಲ್ಕ ಏರಿಕೆಗೆ ತೀವ್ರ ಖಂಡನೆ

    ನವೀಕರಣ ಶುಲ್ಕ ಏರಿಕೆಗೆ ತೀವ್ರ ಖಂಡನೆ

    ಸರ್ಕಾರವು, ಚಿತ್ರಮಂದಿರಗಳ ನವೀಕರಣ ಶುಲ್ಕವನ್ನು ಏರಿಸಿರುವುದನ್ನು ಖಂಡಿಸಿದ ಓದುಗೌಡರ್, ಮೂರು ವರ್ಷಗಳಿಗೊಮ್ಮೆ 100 ಚದರ ಅಡಿಗೆ 1000 ರೂಪಾಯಿ ತೆಗೆದುಕೊಳ್ಳುತ್ತಿದ್ದರು. ಈ ಶುಲ್ಕವನ್ನು ಏರಿಸಿ ಒಂದೇ ಬಾರಿ 4500 ಸಾವಿರ ರೂ. ಮಾಡಲಾಗಿದೆ ಅದೂ ಕೇವಲ ಒಂದು ವರ್ಷಕ್ಕೆ, ಇದನ್ನು ಕೂಡಲೇ ಸರ್ಕಾರ ಕಡಿಮೆ ಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

    ಸೇವಾಶುಲ್ಕ ಸಂಗ್ರಹಿಸಲು ಅನುಮತಿ ನೀಡಬೇಕು: ಓದುಗೌಡರ್

    ಸೇವಾಶುಲ್ಕ ಸಂಗ್ರಹಿಸಲು ಅನುಮತಿ ನೀಡಬೇಕು: ಓದುಗೌಡರ್

    ಎಸಿ ಉಳ್ಳ ಚಿತ್ರಮಂದಿರಕ್ಕೆ ಸೇವಾಶುಲ್ಕ 10% ಹಾಗೂ ಏಸಿ ರಹಿತ ಚಿತ್ರಮಂದಿರಕ್ಕೆ 5% ಸಂಗ್ರಹಿಸಲು ಸರ್ಕಾರ ಅನುಮತಿ ನೀಡಬೇಕು, ಚಿತ್ರಮಂದಿರಗಳಿಗೆ ಬಳಸುವ ವಿದ್ಯುತ್ ಅನ್ನು 'ವಾಣಿಜ್ಯ' ಎಂದು ವಿಧಿಸಲಾಗುತ್ತಿದೆ, ಆದರೆ ಅದನ್ನು 'ಉದ್ಯಮ' ಎಂಬ ಆಧಾರದಲ್ಲಿ ಬೆಲೆ ನಿಗದಿಪಡಿಸಬೇಕು' ಎಂದು ಓದುಗೌಡರ್ ಆಗ್ರಹಿಸಿದರು.

    Recommended Video

    ಹೆಸರು ಮಾಡಿದ್ರೆ ನಿಮ್ಮಂತೆ ಹೆಸರು ಮಾಡ್ಬೇಕು ಅಂದ ದರ್ಶನ್ ತಂಗಿ ಅಮೂಲ್ಯ | Amulya | Darshan | Filmibeat kannada
    2020-21 ರ ಆಸ್ತಿ ತೆರಿಗೆ ಸಂಪೂರ್ಣ ರದ್ದು ಮಾಡಬೇಕು

    2020-21 ರ ಆಸ್ತಿ ತೆರಿಗೆ ಸಂಪೂರ್ಣ ರದ್ದು ಮಾಡಬೇಕು

    2020-21 ರ ಆಸ್ತಿ ತೆರಿಗೆಯನ್ನು ಸರ್ಕಾರ ಸಂಪೂರ್ಣವಾಗಿ ರದ್ದು ಮಾಡಬೇಕು, ಪುರಸಭೆ, ನಗರಸಭೆಗಳಂಥಹಾ ಸ್ಥಳೀಯ ಸಂಸ್ಥೆಗಳು ವಿಧಿಸುತ್ತಿರುವ ಆಸ್ತಿ ತೆರಿಗೆಯನ್ನು ಇಳಿಸಬೇಕು, ನಿರ್ಮಾಪರು-ಚಿತ್ರಮಂದಿರಗಳ ನಡುವೆ ಆದಾಯವು ಶೇಖಡಾವಾರು ಹಂಚಿಕೆ ವ್ಯವಸ್ಥೆ ತರಬೇಕು ಇವೆಲ್ಲಾ ಈಡೇರುವವರೆಗೆ ಚಿತ್ರಪ್ರದರ್ಶನ ಮಾಡುವುದಿಲ್ಲ ಎಂದರು ಓದುಗೌಡರ್.

    English summary
    Karnataka Film Exhibitors Federation president RR Odugoudar said, theaters will remain shut until government fulfill our demands.
    Saturday, October 31, 2020, 13:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X