ಸರ್ ಎಂ.ವಿ ಕ್ರೀಡಾಂಗಣಕ್ಕೂ ಅಂಬಿಗೂ ಇದೇ ಹಳೆ ನಂಟು
ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥಿವ ಶರೀರ ಬೆಂಗಳೂರಿನಿಂದ ಸಂಜೆ ಮಂಡ್ಯಗೆ ತಲುಪಿದೆ. ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಂದಹಾಗೆ, ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣಕ್ಕೂ ಅಂಬಿಗೂ ಅವಿನಾಭಾವ ನಂಟಿದೆ. ಅಂಬರೀಶ್ ಅವರು 1996ರಲ್ಲಿ ಇದೇ ಕ್ರೀಡಾಂಗಣದಲ್ಲೇ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದರು. ಆ ಬಳಿಕ 2002ರಲ್ಲಿ ಅಂಬರೀಶ್ ಅವರು ತಮ್ಮ 50ನೇ ಜನ್ಮ ದಿನ ಕಾರ್ಯಕ್ರಮವನ್ನು ಇದೇ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು.

ಇದೀಗ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನೂ ಇದೇ ಕ್ರೀಡಾಂಗಣದಲ್ಲಿ ಮಾಡಿರುವುದರಿಂದ ಹಿಂದಿನ ಘಟನೆಗಳೆಲ್ಲ ಮತ್ತೆ ನೆನಪಾಗುತ್ತಿದೆ.
More from Filmibeat
English summary
Mandya Sir MV stadium at last playing an important role in actor- politician Ambareesh life. Why this place so important? Read this story to know.


Click it and Unblock the Notifications











