twitter
    For Quick Alerts
    ALLOW NOTIFICATIONS  
    For Daily Alerts

    ಸರ್ ಎಂ.ವಿ ಕ್ರೀಡಾಂಗಣಕ್ಕೂ ಅಂಬಿಗೂ ಇದೇ ಹಳೆ ನಂಟು

    By ಯಶಸ್ವಿನಿ
    |

    ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥಿವ ಶರೀರ ಬೆಂಗಳೂರಿನಿಂದ ಸಂಜೆ ಮಂಡ್ಯಗೆ ತಲುಪಿದೆ. ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್​ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಅಂದಹಾಗೆ, ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣಕ್ಕೂ ಅಂಬಿಗೂ ಅವಿನಾಭಾವ ನಂಟಿದೆ. ಅಂಬರೀಶ್​ ಅವರು 1996ರಲ್ಲಿ ಇದೇ ಕ್ರೀಡಾಂಗಣದಲ್ಲೇ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದರು. ಆ ಬಳಿಕ 2002ರಲ್ಲಿ ಅಂಬರೀಶ್ ಅವರು ತಮ್ಮ 50ನೇ ಜನ್ಮ ದಿನ ಕಾರ್ಯಕ್ರಮವನ್ನು ಇದೇ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು.

    sir m vishveshwarya stadium is a milestones on ambareesh life
    2016ರಲ್ಲಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಇದೇ ಸರ್​ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಮಾಡಿದ್ದರು. ಈ ವೇಳೆ ಅವರು ಬಹುತೇಕ ಸ್ಯಾಂಡಲ್​ವುಡ್ ನಟರನ್ನು ಕಾರ್ಯಕ್ರಮಕ್ಕೆ ಕರೆಸಿ, ಅಂದು ತಾವು ಸಹ ಕುಣಿದು ಕುಪ್ಪಳಿಸಿ ಅಭಿಮಾನಿಗಳನ್ನು ರಂಜಿಸಿದ್ದರು.

    ಇದೀಗ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನೂ ಇದೇ ಕ್ರೀಡಾಂಗಣದಲ್ಲಿ ಮಾಡಿರುವುದರಿಂದ ಹಿಂದಿನ ಘಟನೆಗಳೆಲ್ಲ ಮತ್ತೆ ನೆನಪಾಗುತ್ತಿದೆ.

    English summary
    Mandya Sir MV stadium at last playing an important role in actor- politician Ambareesh life. Why this place so important? Read this story to know.
    Sunday, November 25, 2018, 20:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X