Just In
Don't Miss!
- Sports
ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ಮರುಳುತ್ತಾರಾ ಎಬಿ ಡಿವಿಲಿಯರ್ಸ್?
- News
ಜನರಲ್ಲಿ ಹೊಸ ಕನಸು ಬಿತ್ತಿದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ
- Finance
ಅಸ್ಸಾಂನಲ್ಲಿ ಚಿಕನ್ ಕೇಜಿಗೆ 500 ರುಪಾಯಿ, ಈರುಳ್ಳಿಗೆ 250 ರುಪಾಯಿ
- Technology
ಎಂಆಧಾರ್ ಆಪ್ ಅಪ್ಡೇಟ್ ಮಾಡಿ, ಹೆಚ್ಚಿನ ಸೇವೆ ಆನಂದಿಸಿ..!
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Lifestyle
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಮತ್ತೊಂದು ವಿವಾದದಲ್ಲಿ ಸಿಲುಕಿದ ಚಿರಂಜೀವಿ ಅಭಿನಯದ 'ಸೈರಾ' ಸಿನಿಮಾ
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ಸೈರಾ ಸಿನಿಮಾ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ರಿಲೀಸ್ ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಸೈರಾ ತಂಡ ಸಂಕಷ್ಟಕ್ಕೆ ಸಿಲುಕಿದೆ. ನಿರ್ಮಾಪಕ ರಾಮ್ ಚರಣ್, ನಿರ್ದೇಶಕ ಸುರೇಂದ್ರ ರೆಡ್ಡಿ ಮತ್ತು ನಟ ಚಿರಂಜೀವಿಗೆ ಅವರಿಗೆ 100 ಕೋಟಿ ಪರಿಹಾರ ಕೇಳಿ ಖ್ಯಾತ ವಕೀಲ ಶಂಕರಪ್ಪ ಸಮನ್ಸ್ ನೀಡಿದ್ದಾರೆ.
ಸೈರಾ ಸಿನಿಮಾ ಕನ್ನಡದಲ್ಲಿ ಬಂದ್ರು ಖುಷಿಗಿಂತ ನಿರಾಸೆಯೇ ಹೆಚ್ಚು
ಸೈರಾ ಸಿನಿಮಾ ಮುಂದಿನ ತಿಂಗಳು ಆಕ್ಟೋಬರ್ 2ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೆ ಗೊತ್ತಿರುವ ಹಾಗೆ ಸೈರಾ, ಸ್ವತಂತ್ರ ಹೋರಾಟಗಾರ ಉಯ್ಯಲವಾಡ ನರಸಿಂಹರೆಡ್ಡಿ ಜೀವನ ಆಧಾರಿತ ಚಿತ್ರ. ನರಸಿಂಹರೆಡ್ಡಿ ಬಲಗೈ ಬಂಟನಾಗಿದ್ದ ವಡ್ಡ ಓಬನ್ನ ಪಾತ್ರವನ್ನು ತಿರುಚಲಾಗಿದೆ ಎನ್ನುವ ಆರೋಪ ಚಿತ್ರತಂಡದ ಮೇಲೆ ಬಂದಿದೆ. ಚಿತ್ರದಲ್ಲಿ ವಡ್ಡ ಓಬನ್ನ ಪಾತ್ರವನ್ನು ತಮಿಳು ನಟ ವಿಜಯ್ ಸೇತುಪತಿ ನಿರ್ವಹಿಸಿದ್ದಾರೆ.

ಇತಿಹಾಸ ತಿರುಚಿದ ಆರೋಪ
ಸಿನಿಮಾ ದಲ್ಲಿ ಓಬನ್ನ ಹೆಸರು ರಾಜಾಪಾಂಡೆ ಎಂದು ಉಲ್ಲೇಖಮಾಡಲಾಗಿದೆ, ಇತಿಹಾಸ ತಿರುಚಿ ಸಿನಿಮಾ ಮಾಡಿ ಕೆಟ್ಟ ಸಂದೇಶ ರವಾನೆ ಮಾಡುತ್ತಿದ್ದಾರೆ ಎಂದು ಚಿತ್ರತಂಡದ ಮೇಲೆ ತಂಬಿಚೆಟ್ಟಿ ಚಕ್ರವರ್ತಿ ಆರೋಪ ಮಾಡಿದ್ದಾರೆ. ಸಿನಿಮಾ ನಿರ್ದೇಶನಕ್ಕು ಮುನ್ನ ಚಿತ್ರತಂಡ ನೀಡಿದ್ದ ಮಾತಿನಂತೆ ಓಬನ್ನ ಪಾತ್ರ ಇರಬೇಕಿತ್ತು. ಆದ್ರೀಗ ಬದಲಾಗಿದೆ ಎನ್ನುವುದು ಅವರ ಆರೋಪ.

ಓಬನ್ನ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ
ವಡ್ಡ ಓಬನ್ನ ಕೂಡ ನರಸಿಂಹರೆಡ್ಡಿ ಅವರ ಬಲಗೈ ಬಂಟರಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಮಡಿದಿದ್ದ. ಓಬನ್ನ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಆದ್ರೆ ಅವರ ಪಾತ್ರವನ್ನು ತಿರುಚಲಾಗಿದೆ ಎಂದು ತಂಬಿಚೆಟ್ಟಿ ಚಕ್ರವರ್ತಿ ಆರೋಪ ಮಾಡಿದ್ದಾರೆ. ಅಲ್ಲದೆ ಅಮರಾವತಿಯ ಹೈಕೋರ್ಟ್ ಗೆ ರಿಟ್ ಸಲ್ಲಿಕೆಗೆ ತಯಾರಿ ಮಾಡಿಕೊಂಡಿದ್ದಾರೆ.
ಚಿರಂಜೀವಿ ಪುತ್ರನ ಮೇಲೆ 50 ಕೋಟಿ ವಂಚನೆ ಆರೋಪ

ನರಸಿಂಹ ರೆಡ್ಡಿ ಕುಟುಂಬದವರ ಆರೋಪ
ಸೈರಾ ಚಿತ್ರಕ್ಕೆ ಸಾಕಷ್ಟು ವಿಘ್ನಗಳು ಎದುರಾಗುತ್ತಿವೆ. ಈ ಮೊದಲು ನಿರ್ಮಾಪಕ ರಾಮ್ ಚರಣ್ ಮೇಲೆ ಉಯ್ಯಾಲವಾಡ ಕುಟುಂಬದ ಸದಸ್ಯರು 50 ಕೋಟಿ ವಂಚನೆ ಆರೋಪ ಮಾಡಿದ್ದರು. ಸೈರಾ ಸಿನಿಮಾ ಹಿನ್ನೆಲೆ ಉಯ್ಯಾಲವಾಡ ಕುಟುಂಬದ 5ನೇ ಜನರೇಷನ್ ಅವರ 23 ಕುಟುಂಬಗಳಿಗೆ ತಲಾ 2 ಕೋಟಿ ನೀಡುವುದಾಗಿ ನಿರ್ಮಾಪಕರು ತಿಳಿಸಿದ್ದರಂತೆ.
ದಾಖಲೆ ಬೆಲೆಗೆ 'ಸೈರಾ' ಚಿತ್ರದ ಸ್ಯಾಟ್ ಲೈಟ್ ಹಕ್ಕು ಮಾರಾಟ

ದೂರು ದಾಖಲಿಸಿರುವ ಕುಟುಂಬ
ಸಿನಿಮಾ ಮುಗಿದುರಿಲೀಸ್ ಗೆ ರೆಡಿಯಾದರು, ಇದುವರೆಗೂ ಯಾರಿಗೂ ಹಣ ಕೊಟ್ಟಿಲ್ಲ ಎಂದು ಆರೋಪಿಸಿ ಉಯ್ಯಾಲವಾಡ ಕುಟುಂಬದ ಸದಸ್ಯ ದಸ್ತಗಿರಿ ರೆಡ್ಡಿ ದಂಪತಿ ಜ್ಯೂನ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರಂತೆ. ಈಗ ಮತ್ತೊಂದು ಆರೋಪ ಕೇಳಿ ಬರುತ್ತಿದೆ. ರಿಲೀಸ್ ಗೆ ಸಮೀಪವಿರುವ ಕಾರಣ ಚಿತ್ರತಂಡ ಯಾವ ನಿರ್ಧಾರ ಕೈಗೊಳ್ಳತ್ತೆ ಎನ್ನುವುದು ಕಾದುನೋಡಬೇಕು.