»   » ವಿನೂತನ 'ದಾಖಲೆ' ಬರೆಯಲು ಸಜ್ಜಾದ ಕನ್ನಡ ಚಿತ್ರರಂಗ!

ವಿನೂತನ 'ದಾಖಲೆ' ಬರೆಯಲು ಸಜ್ಜಾದ ಕನ್ನಡ ಚಿತ್ರರಂಗ!

Posted By:
Subscribe to Filmibeat Kannada

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಕಂಡು ಕೇಳರಿಯದ ದಾಖಲೆಗಳನ್ನು ಮಾಡಲು ಸರ್ವ ಸನ್ನದ್ದವಾಗಿದೆ. ಶ್ರೀರಾಮನವಮಿಯ ಪುಣ್ಯದಿನವಾದ ಶುಭ ಶುಕ್ರವಾರ (ಏ 19) ದಾಖಲೆಯ ಸಂಖ್ಯೆಯ ಕನ್ನಡ ಚಿತ್ರಗಳು ಬಿಡುಗಡೆಯಾಗಲಿದೆ.

ಕರ್ನಾಟಕದಲ್ಲಿ ಇತರ ಭಾಷೆಯ ಚಿತ್ರಗಳೂ ಚೆನ್ನಾಗಿ ಓಡುವ ಬಾಕ್ಸ್ ಆಫೀಸ್ ರಿಪೋರ್ಟ್ ಇರುವಾಗ ಬರೀ ಎಷ್ಟು ಕನ್ನಡ ಚಿತ್ರಗಳು ಬಿಡುಗಡೆಯಾಗಿತ್ತಿದೆ ಎಂದು ತಿಳಿಸಿದರೆ, ನಮ್ಮ ಓದುಗರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ.

ಕನ್ನಡ ಚಿತ್ರಗಳಿಗೆ ಕೆ ಜಿ ರಸ್ತೆಯಲ್ಲಿ ಥಿಯೇಟರ್ ಸಮಸ್ಯೆಯಾದರೆ ಭೂಮಿಕಾ, ಮೂವಿಲ್ಯಾಂಡ್, ಅಭಿನಯ್ ಮತ್ತು ಸಂತೋಷ್ ಚಿತ್ರಮಂದಿರಗಳು ಇತರ ಭಾಷೆಯ ಚಿತ್ರಗಳನ್ನು ಬಿಡುಗಡೆಗೊಳಿಸಿ ಸಾರ್ಥಕತೆಯ ವ್ಯಂಗ್ಯ ನಗು ಬೀರುತ್ತಿದೆ.

ಎರಡು ವಾರದ ಹಿಂದೆ ಬಿಡುಗಡೆಯಾಗಿದ್ದ ಶಿವರಾಜ್ ಕುಮಾರ್ ಅಭಿನಯದ ಅಂದರ್ ಬಾಹರ್ ಚಿತ್ರ ಮೈನ್ ಥಿಯೇಟರ್ ಸಂತೋಷ್ ಚಿತ್ರಮಂದಿರದಿಂದ ನಾಳೆ ಬಾಹರ್ ಆಗಲಿದ್ದು, ಅಲ್ಲಿ ತೆಲುಗು ಚಿತ್ರವೊಂದು ಬಿಡುಗಡೆಯಾಗುತ್ತಿದೆ. ಇನ್ನು ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬಚ್ಚನ್ ಎಷ್ಟು ಚಿತ್ರಮಂದಿರದಲ್ಲಿ ಎತ್ತಂಗಡಿಯಾಗಲಿದೆಯೋ?

ನಾಳೆ ಮೂರು ತೆಲುಗು ಚಿತ್ರಗಳು (ಎನ್ ಎಚ್ 4, ಗುಂಡೆಜಾರಿ ಗಲ್ಲಿಂತಾಯ್ಯಿಂದೆ, ಗೌರವಂ), ಉದಯಂ ಎನ್ನುವ ತಮಿಳು ಮತ್ತು ಏಕ್ ಥಾ ದಯಾನ್ ಎನ್ನುವ ಹಿಂದಿ ಚಿತ್ರಗಳು ಬಿಡುಗಡೆಯಾಗುತ್ತಿದೆ. ಈ ಎಲ್ಲಾ ಚಿತ್ರಗಳು ಬಿಕೆಟಿ ಪ್ರಾಂತ್ಯದ ಸುಮಾರು 140 ಚಿತ್ರಮಂದಿರಗಳಲ್ಲಿ (ಮಲ್ಟಿಪ್ಲೆಕ್ಸ್ ಸೇರಿ) ಬಿಡುಗಡೆಯಾಗುತ್ತಿದೆ.

ನಾಳೆ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳಾವುವು, ಮುಂದಿನ ಪುಟಗಳಲ್ಲಿ ನೋಡಿ

ಪರಾರಿ

ನಿರ್ದೇಶಕರು: ಆ ದಿನಗಳು ಖ್ಯಾತಿಯ ಕೆ ಎಂ ಚೈತನ್ಯ
ತಾರಾಗಣದಲ್ಲಿ : ಶ್ರಾವಂತ್ ರಾವ್, ಶುಭಾ ಪೂಂಜಾ, ಬುಲೆಟ್ ಪ್ರಕಾಶ್, ಜಾಹ್ನವಿ ಕಾಮತ್

ಛತ್ರಿಗಳು ಸಾರ್ ಛತ್ರಿಗಳು

ನಿರ್ದೇಶಕರು: ಎಸ್ ನಾರಾಯಣ್
ತಾರಾಗಣದಲ್ಲಿ : ರಮೇಶ್ ಅರವಿಂದ್, ಎಸ್ ನಾರಾಯಣ್, ಮೋಹನ್, ಮಾನಸಿ, ಸುಷ್ಮಾ

ಕೂರ್ಮಾವತಾರ

ನಿರ್ದೇಶಕರು: ಗಿರೀಶ್ ಕಾಸರವಳ್ಳಿ
ತಾರಾಗಣದಲ್ಲಿ : ಡಾ. ಶಿಕಾರಿಪುರ, ಕೃಷ್ಣಮೂರ್ತಿ, ಜಯಂತಿ

ಗಜೇಂದ್ರ

ನಿರ್ದೇಶಕರು: ಜೆ ಜಿ ಕೃಷ್ಣ
ತಾರಾಗಣದಲ್ಲಿ : ವಿನೋದ್ ಪ್ರಭಾಕರ್, ಡೈಸಿ ಶಾ

ಅಮರೇಶ್ವರ ಮಹಾತ್ಮೆ

ನಿರ್ದೇಶಕರು: ಅರವಿಂದ ಮುಳಗುಂದ
ತಾರಾಗಣದಲ್ಲಿ : ಅಭಿಜಿತ್, ಉಜ್ವಲ್, ರಾಕೇಶ್, ಬ್ಯಾಂಕ್ ಜನಾರ್ಧನ್

ಬೆಳಕಿನಡೆಗೆ

ನಿರ್ದೇಶಕರು: ಎ ಜೆ ಅಜಯ್ ಕುಮಾರ್
ತಾರಾಗಣದಲ್ಲಿ : ದಿ. ಕರಿಬಸವಯ್ಯ,ರಾಮಕೃಷ್ಣ, ಗುರುರಾಜ ಹೊಸಕೋಟೆ

English summary
Six Kannada films releasing tomorrow i.e. April 19. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada