ಈ ವಾರ ಸಿನಿಮಾ ನೋಡ್ಬೇಕು ಅಂದುಕೊಂಡವರಿಗೆ ದೊಡ್ಡ ಚಾಲೆಂಜ್ ಇದು

By Bharath Kumar

ಜನ ಥಿಯೇಟರ್ ಗೆ ಬರೋದೇ ಯಾವ ಸ್ಟಾರ್ ಸಿನಿಮಾ ಇದು ಅಂದುಕೊಂಡು. ದೊಡ್ಡ ಸ್ಟಾರ್ ಗಳು ಚಿತ್ರದಲ್ಲಿ ಇಲ್ಲ ಅಂದ್ರೆ ಜನರನ್ನ ಚಿತ್ರಮಂದಿರಕ್ಕೆ ಕರೆದುಕೊಂಡು ಬರೋದು ಬಹುದೊಡ್ಡ ಸವಾಲು. ಅದೇ ರೀತಿ, ಸಾಲು ಸಾಲು ಸಿನಿಮಾ ಬಂದಾಗ ಯಾವ ಚಿತ್ರವನ್ನ ನೋಡೋದು, ಯಾವ ಚಿತ್ರವನ್ನ ಬಿಡೋದು ಎಂಬದು ಅದಕ್ಕಿಂತ ದೊಡ್ಡ ಸವಾಲಾಗಿದೆ.

ಇಂತಹ ದೊಡ್ಡ ಸವಾಲನ್ನ ಸ್ಯಾಂಡಲ್ ವುಡ್ ಈ ವಾರ ಎದುರಿಸಲಿದೆ. ಹೌದು, ಬಿಗ್ ಸ್ಟಾರ್ ಗಳ ಚಿತ್ರ ಇಲ್ಲದೇ ಹೋದರು, ಹೊಸಬರ ಹಾಗೂ ಹೊಸ ರೀತಿಯ ಚಿತ್ರಗಳು ಈ ವಾರ ತೆರೆಕಾಣುತ್ತಿದೆ. ಒಟ್ಟು ಆರು ಸಿನಿಮಾ ಈ ವಾರ ಬಿಡುಗಡೆಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಹಾಗೂ ಪ್ರಚಾರವೇ ಇಲ್ಲದೇ ಯಾವುದಾದರೂ ಸಿನಿಮಾ ಬಂದರೂ ಅಚ್ಚರಿಯಿಲ್ಲ.

ಸಂಚಾರಿ ವಿಜಯ್ ಅಭಿನಯದ ಒಂದು ಸಿನಿಮಾ ಈ ವಾರ ಬರ್ತಿದೆ. ಅದರ ಜೊತೆಗೆ ವಿಶೇಷವಾದ ಟೈಟಲ್, ವಿಭಿನ್ನ ಕಥೆ, ವಿಚಿತ್ರವಾದ ಪ್ರಮೋಷನ್ ಮಾಡಿರುವ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿದೆ. ಹಾಗಿದ್ರೆ, ಈ ವಾರ ಯಾವ ಚಿತ್ರಗಳು ರಿಲೀಸ್ ಆಗ್ತಿದೆ ಎಂಬುದರ ವಿಶೇಷ ವರದಿ ಇಲ್ಲಿದೆ. ಮುಂದೆ ಓದಿ......

ಈ ವಾರ ತೆರೆಗೆ 'ಲೌಡ್ ಸ್ಪೀಕರ್'

ಈ ವಾರ ತೆರೆಗೆ 'ಲೌಡ್ ಸ್ಪೀಕರ್'

ಕೆ.ರಾಜು ಅವರು ನಿರ್ಮಿಸಿರುವ 'ಲೌಡ್ ಸ್ಪೀಕರ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿಂದೆ 'ಧೈರ್ಯಂ' ಚಿತ್ರ ಮಾಡಿದ್ದ ಶಿವತೇಜಸ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಹರ್ಷವರ್ಧನ್ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಭಾಸ್ಕರ್ ನೀನಾಸಂ, ಕಾವ್ಯಾ ಶಾ, ಸುಮಂತ್ ಭಟ್, ದಿಶಾ ದಿನಕರ್, ರಂಗಾಯಣ ರಘು, ದತ್ತಣ್ಣ, ಅಭಿಶೇಕ್ ಮುಂತಾದವರಿದ್ದಾರೆ.

ಈ ವಾರ 'ಪಾದರಸ'

ಈ ವಾರ 'ಪಾದರಸ'

ಸಂಚಾರಿ ವಿಜಯ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಪಾದರಸ' ಇದೇ ವಾರ ತೆರೆಮೇಲೆ ಬರ್ತಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಮತ್ತು ಮನಸ್ವಿ ಜೋಡಿಯಾಗಿದ್ದಾರೆ. ಇನ್ನು ಸಂಚಾರಿ ವಿಜಯ್​ ಅವರ ಸ್ನೇಹಿತನ ಪಾತ್ರದಲ್ಲಿ ನಿರಂಜನ್​ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ. ಆರ್ಟ್ ಅಂಡ್ ಸೋಲ್ ಮಿಡಿಯಾ ಸರ್ವಿಸ್ ಲಾಂಛನದಲ್ಲಿ 'ಪಾದರಸ' ಚಿತ್ರ ನಿರ್ಮಾಣವಾಗಿದ್ದು, ಹೃಷೀಕೇಶ್ ಜಂಬರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಗೆ ಎಟಿ ರವೀಶ್​ ಸಂಗೀತ ನಿರ್ದೇಶನವಿದೆ.

ಈ ವಾರ ತೆರೆಗೆ 'ಅಭಿಸಾರಿಕೆ'

ಈ ವಾರ ತೆರೆಗೆ 'ಅಭಿಸಾರಿಕೆ'

ಮಧುಸೂದನ್ ಎ.ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ 'ಅಭಿಸಾರಿಕ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಭಾಗ್ಯಲಕ್ಷ್ಮೀ ಪ್ರೊಡಕ್ಷನ್ ಲಾಂಛನದಲ್ಲಿ ಶಿವಕುಮಾರ್ ಕೆ, ಮಧುಸೂದನ್ ಎ.ಎಸ್ ಮತ್ತು ಪ್ರಶಾಂತ್ ಕೊಡಗೆದಾರ್ ಅವರು ಈ ಚಿತ್ರವನ್ನ ನಿರ್ಮಿಸಿದ್ದಾರೆ. ಕರುಣ್ ಬಿ ಕೃಪ ಸಂಗೀತ ನೀಡಿರುವ ಈ ಚಿತ್ರದಲ್ಲಿ ಸೋನಾಲ್ ಮಾಂಟೆರೊ, ತೇಜ್, ಯಶ್ವಂತ್ ಶೆಟ್ಟಿ, ಅಶೋಕ್, ರಚನ, ಚಂದ್ರಕಲಾ ಮೋಹನ್, ಶಾಲಿನಿ(ಬಿಗ್‍ಬಾಸ್) ಕಾಣಿಸಿಕೊಂಡಿದ್ದಾರೆ.

ಈ ವಾರ ತೆರೆಗೆ 'ಹೊಸ ಕ್ಲೈಮ್ಯಾಕ್ಸ್'

ಈ ವಾರ ತೆರೆಗೆ 'ಹೊಸ ಕ್ಲೈಮ್ಯಾಕ್ಸ್'

ಶ್ಯಾಲಿ ಕೊನಾರ್ಕ್ ಇಂಟರ್ ನ್ಯಾಷನಲ್ ಲಾಂಛನದಲ್ಲಿ ಡಾ||ಶ್ಯಾಲಿ ಅವರು ನಿರ್ಮಿಸಿರುವ 'ಹೊಸ ಕ್ಲೈಮ್ಯಾಕ್ಸ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಡಾ||ಶ್ಯಾಲಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ಎಂ.ಡಿ.ಕೌಶಿಕ್ ಟೆಕ್ನಿಕಲ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮಾರುತಿ ಸಂಗೀತ ನಿರ್ದೇಶನ, ಗೌರಿ ವೆಂಕಟೇಶ್ ಛಾಯಾಗ್ರಹಣ ಹಾಗೂ ಅರುಣ್ ಥಾಮಸ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ನರೇಶ್ ಗಾಂಧಿ, ಅನಿತಾ ಭಟ್, ಡಾ||ಶ್ಯಾಲಿ, ಎಂ.ಡಿ.ಕೌಶಿಕ್, ಶರತ್ ಅಭಿನಯಿಸಿದ್ದಾರೆ.

ಈ ವಾರ ತೆರೆಗೆ 'ಅತಂತ್ರ'

ಈ ವಾರ ತೆರೆಗೆ 'ಅತಂತ್ರ'

ಇಸಾಕ್ ಖಾಜೀ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ 'ಅತಂತ್ರ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅನ್‍ಕುಲ್ ಪ್ರೊಡಕ್ಷನ್ ಲಾಂಛನದಲ್ಲಿ ಬಿ.ಪಿ.ಸಿಂಗ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ರವಿ ಸಂಭಾಷಣೆ ಬರೆದಿದ್ದಾರೆ. ಸುರೇಶ್ ಬಿ.ವಿ.ಎನ್ ಹಾಗೂ ವಸ್ತಾದ್ ನೂರ್ಜಿ ಸಂಗೀತ ನಿರ್ದೇಶನ, ಶಿವಿ ಅಂಬ್ಲಿ ಮತ್ತು ವಿಷ್ಣುಪ್ರಸಾದ್ ಛಾಯಾಗ್ರಹಣ ಹಾಗೂ ಶ್ರೀಜವಳಿ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಇಸಾಕ್ ಖಾಜೀ, ಭೂಮಿಕ, ರಾಧಾರಾಮಚಂದ್ರ, ವಿಶ್ವನಾಥ್, ಅನಿಲ್‍ಕುಮಾರ್ ಬಣ್ಣ ಹಚ್ಚಿದ್ದಾರೆ.

ಈ ವಾರ ತೆರೆಗೆ 'ವಂದನ'

ಈ ವಾರ ತೆರೆಗೆ 'ವಂದನ'

ನಿಶ್ಮಾ ಕ್ರಿಯೆಷನ್ಸ್ ಲಾಂಛನದಲ್ಲಿ ಮಹೇಶ್ ಅವರು ನಿರ್ಮಿಸಿರುವ 'ವಂದನ' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ವಿಜೇತ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅಭಿಶೇಕ್ ಸಂಭಾಷಣೆ ಬರೆದಿದ್ದಾರೆ. ಎಂ.ಎಸ್.ತ್ಯಾಗರಾಜ್ ಸಂಗೀತ ನಿರ್ದೇಶನವಿರು ಈ ಚಿತ್ರದ ತಾರಾಬಳಗದಲ್ಲಿ ಅರುಣ್ ಕುಮಾರ್, ಶೊಭಿತ ಶಿವಣ್ಣ, ಗಿರೀಶ್ ಜತ್ತಿ, ಸ್ಪಂದನ, ಬೇಬಿ ಸಿಂಧು, ಸಾಗರ್, ವೆಂಕಟಾಚಲ ಮುಂತಾದವರು ಕಾಣಿಸಿಕೊಂಡಿದ್ದಾರೆ.

More from Filmibeat

English summary
kannada movie atantra, loudspeaker, padarasa, abhisaarike, vandana and hosa climax movies are releasing this week (august 10th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X