»   » 'ರನ್ನ' ಚಿತ್ರದ ಟೆಂಪರೇಚರ್ ಏರಿಸುತ್ತಿರುವ ಸೀರೆ ಹಾಡು

'ರನ್ನ' ಚಿತ್ರದ ಟೆಂಪರೇಚರ್ ಏರಿಸುತ್ತಿರುವ ಸೀರೆ ಹಾಡು

Posted By: ಉದಯರವಿ
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರ ತೆರೆಗೆ ಅಪ್ಪಳಿಸಲು ಸಿದ್ಧವಾಗುತ್ತಿದೆ. ಟಾಲಿವುಡ್ ಬಾಕ್ಸ್ ಆಫೀಸಲ್ಲಿ ಸುನಾಮಿ ಎಬ್ಬಿಸಿದ ಅತ್ತಾರಿಂಟಿಕಿ ದಾರೇದಿ ಚಿತ್ರದ ರೀಮೇಕ್ ಇದು. ವಿಕ್ಟರಿ ಹಾಗೂ ಅಧ್ಯಕ್ಷ ಚಿತ್ರಗಳ ಖ್ಯಾತಿಯ ನಂದಕಿಶೋರ್ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಚಿತ್ರ.

ಸುದೀಪ್ ಅವರ ಚಿತ್ರ ಎಂಬುದು ಒಂದು ಕಡೆಯಾದರೆ, ನಂದಕಿಶೋರ್ ಅವರ ನಿರ್ದೇಶನ ಇನ್ನೊಂದು ಕಡೆ ಈ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಕೆಲವು. ಸುದೀಪ್ ಜೊತೆ 'ಬುಲ್ ಬುಲ್' ರಚಿತಾ ರಾಮ್ ಹಾಗೂ ಹರಿಪ್ರಿಯಾ ನಾಯಕಿಯರು. [ಕಿಚ್ಚ ಸುದೀಪ್ ಗೆ ಟೆಂಪರೇಚರ್ ರೈಸ್ ಆದಾಗ.....]

ಸುದೀಪ್ ಅಭಿಮಾನಿಗಳು ಚಿತ್ರವನ್ನು ಬಹಳ ಆಸಕ್ತಿಯಿಂದ ಎದುರುನೋಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸುದೀಪ್ ಗೆ ಜೋಡಿಯಾಗಿದ್ದಾರೆ ರಚಿತಾ ರಾಮ್. ಇದೇ ಏಪ್ರಿಲ್ 16ರಂದು ಚಿತ್ರದ ಆಡಿಯೋ ಬಿಡುಗಡೆಯಾಗುತ್ತಿದ್ದು ಈಗಾಗಲೇ ಯೂಟ್ಯೂಬ್ ನಲ್ಲಿ ಚಿತ್ರದ ಎರಡು ಹಾಡುಗಳು ಸದ್ದು ಮಾಡುತ್ತಿವೆ.

ಮೂಲ ಚಿತ್ರದ ದಾಖಲೆ ಅಳಿಸಿದರೂ ಅಚ್ಚರಿಯಿಲ್ಲ

ಚಿತ್ರ ರೀಮೇಕ್ ಆದರೂ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುವುದಂತೂ ಗ್ಯಾರಂಟಿ ಎಂಬ ಅಖಂಡ ವಿಶ್ವಾಸ ಚಿತ್ರತಂಡದ ಮೇಲಿದೆ. ಮೂಲ ಚಿತ್ರದ ದಾಖಲೆಯನ್ನೂ ಮುರಿದರೂ ಅಚ್ಚರಿಯಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.

ಮನಸೂರೆಗೊಂಡ ಸೀರೆ ಹಾಡು

ಈ ಚಿತ್ರದ ಸೀರೆ ಹಾಡು ಈಗ ಎಲ್ಲರ ಮನಸೂರೆಗೊಳ್ಳುತ್ತಿದೆ. ಸೀರೇಲಿ ಹುಡುಗೀರ ನೋಡ್ಲೆ ಬಾರದು ನಿಲ್ಲಲ್ಲ ಟೆಂಪರೇಚರು ಎಂಬ ಹಾಡಿಗೆ ಚಕ್ಕಲಗುಳಿ ಇಟ್ಟಂತೆ ಆಡುತ್ತಿದ್ದಾರೆ ಚಿತ್ರರಸಿಕರು.

ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ

ಸ್ಕೂಲಲ್ಲಿ ಹೇಳಿ ಕೊಡಬಹುದಿತ್ತು ಹೇಳಿಕೊಡಲಿಲ್ಲ ನಮ್ ಟೂಚರು, ನನಗೆ ಆನ್ಸರ್ ಒಂದು ಬೇಕಿದೆ ಸೀರೆ ಟ್ರಾನ್ಸಪರೆಂಟು ಯಾಕಿದೆ, ಅದೆಷ್ಟೆ ಬೇಡ ಅಂದ್ರು ಕಣ್ಣು ಕದ್ ಕದ್ದು ನೋಡ್ತದೆ...ಎಂಬ ಹಾಡು ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಸುದೀಪ್ ಅವರ ಸೋದರತ್ತೆಯಾಗಿ ಮಧು

ಈ ಹಾಡಿನಲ್ಲಿ ಸುದೀಪ್ ಮತ್ತು ರಚಿತಾ ರಾಮ್ ಅವರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಸಿಕ್ಕಾಪಟ್ಟೆ ವರ್ಕ್ ಔಟ್ ಆಗಿರುವುದನ್ನು ಕಾಣಬಹುದು. 'ರೋಜಾ' ಖ್ಯಾತಿಯ ಮಧು ಅವರು ಸುದೀಪ್ ಅವರ ಸೋದರತ್ತೆಯಾಗಿ ಚಿತ್ರದಲ್ಲಿ ಕಾಣಿಸಲಿದ್ದಾರೆ.

ರು.20 ಕೋಟಿ ಬಜೆಟ್ ನ ಭರ್ಜರಿ ಚಿತ್ರ

ಸರಿಸುಮಾರು ರು.20 ಕೋಟಿ ಬಜೆಟ್ ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ ಎಂ ಚಂದ್ರಶೇಖರ್. ಚಿತ್ರದ ಮುಖ್ಯಪಾತ್ರಗಳಲ್ಲಿ ದೇವರಾಜ್ ಹಾಗೂ ಪ್ರಕಾಶ್ ರೈ ಸಹ ಇದ್ದು ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. ಸುಧಾಕರ್ ಎಸ್ ರಾಜು ಅವರ ಛಾಯಾಗ್ರಹಣ ಕೆ.ಎಂ. ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ.

ಇದೇ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ರನ್ನ

ಈ ಹಿಂದೆ 'ರನ್ನ' ಚಿತ್ರಕ್ಕೆ ನಾನಾ ಹೆಸರುಗಳು ಕೇಳಿಬಂದಿದ್ದವು. ಅತ್ತೆ ಮನೆ ದಾರಿ ರಾಯಭಾರಿ, ಭಗೀರಥ ಹಾಗೂ ಭಾರ್ಗವ ಎಂಬ ಶೀರ್ಷಿಕೆಗಳು ಕೇಳಿಬಂದಿದ್ದವು. ಸದ್ಯಕ್ಕೆ 'ರನ್ನ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ಏಪ್ರಿಲ್ ತಿಂಗಳಲ್ಲೇ 'ರನ್ನ' ಪ್ರೇಕ್ಷಕರ ಮುಂದೆ ಬರುತ್ತಿದ್ದಾನೆ.

ಸುದೀಪ್ ಅವರ ಸೋದರತ್ತೆಯಾಗಿ ಮಧು

'ರನ್ನ' ಚಿತ್ರದ ಟೆಂಪರೇಚರ್ ಏರಿಸುತ್ತಿರುವ ಸೀರೆ ಹಾಡು

English summary
The recently released song teaser of 'Seere', has went viral in all social networking sites. Sudeep and Rachita Ram's magical chemistry in the song has already received huge positive responses in the audience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada