twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ ಕುಮಾರ್ ಒಬ್ಬ ಆಕ್ಟರ್‌ ಏನ್ರೀ? ಎಂದಿದ್ದರು ಎಸ್.ಎಲ್. ಭೈರಪ್ಪ: ವಿವಾದ ಸೃಷ್ಟಿಸಿದ ವಿಡಿಯೋ

    By ಫಿಲ್ಮಿ ಬೀಟ್ ಡೆಸ್ಕ್
    |

    ಡಾ. ರಾಜ್ ಕುಮಾರ್ ಎಂದರೆ ಸಿನಿಮಾ ಪ್ರಿಯರಲ್ಲಿ ಏನೋ ರೋಮಾಂಚನ. ಕನ್ನಡಿಗರ ಆರಾಧ್ಯ ದೈವ ಎಂದೇ ಹೆಸರಾಗಿದ್ದ ರಾಜ್ ಕುಮಾರ್ ಅಗಲಿ 14 ವರ್ಷಗಳಾದರೂ ಇಂದಿಗೂ ಅವರ ನೆನಪು ಹಚ್ಚ ಹಸಿರಾಗಿ ಉಳಿದಿದೆ. ಉಳಿಯಲಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ, ರಾಜ್ ಕುಮಾರ್ ಪೋಷಿಸದ ಪಾತ್ರಗಳೇ ಇಲ್ಲ ಎನ್ನುವ ಮಾತಿದೆ. ಇದಕ್ಕೆ ಅವರು ಪಡೆದುಕೊಂಡ ಪ್ರೀತಿ, ಬಿರುದು ಮತ್ತು ಖ್ಯಾತಿಯೇ ಸಾಕ್ಷಿ.

    Recommended Video

    ರಾಜ್ ಕುಮಾರ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ದುನಿಯಾ ವಿಜಯ್

    ನಟನೆಯಷ್ಟೇ ತಮ್ಮ ಸರಳ ಮತ್ತು ಮಾನವೀಯ ವ್ಯಕ್ತಿತ್ವದ ಕಾರಣದಿಂದಲೂ ಅಣ್ಣಾವ್ರು ಜನರಿಗೆ ಹತ್ತಿರವಾದವರು. ಅವರ ಸಿನಿಮಾಗಳು ಸಾಮಾಜಿಕವಾಗಿ ಪ್ರಭಾವ ಬೀರಿದ್ದವು. ಅವರ ಒಂದು ಮಾತಿಗೆ ಜನರು ಒಂದುಗೂಡಿಸುವ ಶಕ್ತಿ ಇತ್ತು. ಹಾಗೆಯೇ ರಾಜ್ ಕುಮಾರ್ ಅವರನ್ನು ಇಷ್ಟಪಡದವರೂ ಇದ್ದರು. ಅವರ ನಟನೆಯನ್ನು ಟೀಕಿಸುವ ಅನೇಕರಿದ್ದಾರೆ. ಈಗ ರಾಜ್ ಕುಮಾರ್ ಅವರನ್ನು ಖ್ಯಾತ ಸಾಹಿತಿಯೊಬ್ಬರು ಟೀಕಿಸಿದ್ದರು ಎನ್ನುವ ಹಳೆಯ ವಿಡಿಯೋ ವೈರಲ್ ಆಗಿದೆ. ಮುಂದೆ ಓದಿ....

    ಭೈರಪ್ಪ ಆಡಿದ ಮಾತುಗಳು...

    ಭೈರಪ್ಪ ಆಡಿದ ಮಾತುಗಳು...

    ಭಗವಾನ್ ಅವರು ಸಂದರ್ಶನವೊಂದರಲ್ಲಿ ಆಡಿದ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜ್ ಕುಮಾರ್ ಅವರ ಕುರಿತು ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಆಡಿದ್ದರು ಎನ್ನಲಾದ ಮಾತನ್ನು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

    ಭೈರಪ್ಪ ವಿರುದ್ಧ ಆಕ್ರೋಶ

    ಭೈರಪ್ಪ ವಿರುದ್ಧ ಆಕ್ರೋಶ

    ರಾಜ್ ಕುಮಾರ್ ಒಳ್ಳೆಯ ನಟರಲ್ಲ ಎಂದು ಅವಹೇಳನಾಕಾರಿಯಾಗಿ ಭೈರಪ್ಪ ನುಡಿದಿದ್ದರು ಎಂದು ಅನೇಕರು ಈ ಸಂದರ್ಶನದ ವಿಡಿಯೋ ಹಂಚಿಕೊಂಡು ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದು ಜಾತಿಯ ಕಾರಣಕ್ಕೆ ಮಾಡಿದ ನಿಂದನೆ ಹಾಗೂ ಅಸಹನೆಯ ಮಾತುಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕುವೆಂಪು ಅವರ ಭೇಟಿ

    ಕುವೆಂಪು ಅವರ ಭೇಟಿ

    ಸಂದರ್ಶನವೊಂದರಲ್ಲಿ ಭಗವಾನ್, ತಮ್ಮ ಸಿನಿಮಾಗಳಿಗಾಗಿ ವಿವಿಧ ಸಾಹಿತಿಗಳನ್ನು ಭೇಟಿ ಮಾಡಿದ ಪ್ರಸಂಗಗಳನ್ನು ಹಂಚಿಕೊಂಡಿದ್ದರು. 'ಹೊಸಬೆಳಕು' ಚಿತ್ರದ ಸನ್ನಿವೇಶಕ್ಕೆ ಸೂಕ್ತವಾಗುವಂತಹ ಹಾಡನ್ನು ಭಗವಾನ್ ಹುಡುಕಿದ್ದರಂತೆ. ಅದಕ್ಕಾಗಿ ಸಾವಿರಾರು ಪದ್ಯಗಳನ್ನು ಓದಿದ್ದರಂತೆ. ಕೊನೆಗೆ 'ತೆರೆದಿದೆ ಬಾ ಮನೆ ಓ ಬಾ ಅತಿಥಿ, ಹೊಸ ಬೆಳಕಿನ ಹೊಸ ಬಾಳಿನ' ಹಾಡನ್ನು ಆಯ್ದುಕೊಂಡಿದ್ದೆ ಎಂದು ತಿಳಿಸಿದ್ದರು.

    'ತೆರೆದಿದೆ ಮನೆ ಓ ಬಾ ಅತಿಥಿ' ಕವಿತೆಯನ್ನು ಸಿನಿಮಾದಲ್ಲಿ ಬಳಸಿಕೊಳ್ಳಲು ಅನುಮತಿ ಕೋರಿ ರಾಷ್ಟ್ರಕವಿ ಕುವೆಂಪು ಅವರನ್ನು ಭಗವಾನ್ ಸಂಪರ್ಕಿಸಿದ್ದರು. ಅನುಮತಿ ನೀಡುವಂತೆ ಭಗವಾನ್ ಕೋರುತ್ತಿದ್ದಂತೆಯೇ ಕುವೆಂಪು, 'ಅಯ್ಯೋ ಹಾಕಿಕೊಳ್ಳಪ್ಪ ಏನೂ ತೊಂದರೆಯಿಲ್ಲ' ಎಂದಿದ್ದರು.

    ರಾಜ್ ಕುಮಾರ್ ಒಬ್ಬ ಆಕ್ಟರ್ರಾ?

    ರಾಜ್ ಕುಮಾರ್ ಒಬ್ಬ ಆಕ್ಟರ್ರಾ?

    ಎಸ್ ಎಲ್ ಭೈರಪ್ಪ ಅವರ ಬಳಿ ಕಾದಂಬರಿಯನ್ನು ಸಿನಿಮಾ ಮಾಡಲು ಅನುಮತಿ ಕೋರಿದಾಗ ಬೈಸಿಕೊಂಡು ಬಂದೆ ಎಂದು ಭಗವಾನ್ ತಿಳಿಸಿದ್ದಾರೆ. ಡಾ. ರಾಜ್ ಕುಮಾರ್ ಅವರನ್ನು ಹಾಕಿಕೊಂಡು 'ಗ್ರಹಣ' ಕಾದಂಬರಿಯನ್ನು ಮಾಡಲು ಭೈರಪ್ಪ ಅವರ ಒಪ್ಪಿಗೆ ಪಡೆಯಲು ಹೋಗಿದ್ದೆ. 'ರಾಜ್ ಕುಮಾರ್ ಒಬ್ಬ ಆಕ್ಟರ್ ಏನ್ರೀ? ನಾನು ಕಾದಂಬರಿ ಕೊಡೋದಾದರೆ ಕಾರ್ನಾಡ್ ಮತ್ತು ಕಾರಂತ ಇಬ್ಬರಿಗೇ ಕೊಡೋದು ಎಂದರು. ಕೊಟ್ಕೊಳಿ ಸ್ವಾಮಿ ನಿಮಗ್ಯಾರು ಬೇಡ ಎಂದೋರು ಎಂದು ಎದ್ದು ಬಂದೆ' ಎಂಬುದಾಗಿ ಭಗವಾನ್ ತಿಳಿಸಿದ್ದಾರೆ.

    ಕಮರ್ಷಿಯಲ್ ಡೈರೆಕ್ಟರ್‌ಗೆ ಕೊಡೊಲ್ಲ

    ಕಮರ್ಷಿಯಲ್ ಡೈರೆಕ್ಟರ್‌ಗೆ ಕೊಡೊಲ್ಲ

    ಈ ಘಟನೆ ಕುರಿತು ಭಗವಾನ್ 'ಫಿಲ್ಮಿ ಬೀಟ್‌'ಗೆ ವಿವರಣೆ ನೀಡಿದ್ದಾರೆ. 'ನಾವು ಗ್ರಹಣ ಕಾದಂಬರಿ ಹಕ್ಕು ಪಡೆದುಕೊಳ್ಳಲು ಹೋಗಿದ್ದೆವು. 1977-78ರ ಇಸವಿ ಇರಬೇಕು. ಆಗ ರಾಜ್ ಕುಮಾರ್ ಅವರ 'ಎರಡು ಕನಸು' ಸೂಪರ್ ಹಿಟ್ ಆಗಿತ್ತು. ನನಗೆ ಭೈರಪ್ಪ ಅವರ ಮನೆ ಗೊತ್ತಿರಲಿಲ್ಲ. ಹೀಗಾಗಿ ಮೈಸೂರಿನ ಸರಸ್ವತಿಪುರಂನಲ್ಲಿನ ಅವರ ಮನೆಗೆ ಒಬ್ಬರ ಜತೆ ಹೋಗಿದ್ದೆ. ಅವರ ಬಳಿ 'ಗ್ರಹಣ'ದ ಹಕ್ಕು ಕೇಳಿದೆ. 'ನಿಮ್ಮಂತಹ ಡೈರೆಕ್ಟರ್‌ಗಳಿಗೆ ಕೊಡೊಲ್ಲ. ನಮ್ಮ ಕಾದಂಬರಿಗಳಿಗೆ ಕಾರ್ನಾಡ್, ಕಾರಂತ ಅಂತಹವರಿಗೆ ಮಾತ್ರ ಕೊಡುತ್ತೇನೆ. ನನ್ನ ಸ್ಟೋರಿಗಳಿಗೆ ಜಸ್ಟಿಫೈ ಮಾಡುತ್ತಾರೆ. ನಿಮ್ಮಂತಹ ಕಮರ್ಷಿಯಲ್ ಡೈರೆಕ್ಟರ್‌ಗೆ ಸರಿಹೊಂದಲ್ಲ' ಎಂದಿದ್ದರು ಎಂದು ಭಗವಾನ್ ನೆನಪಿಸಿಕೊಂಡರು.

    ಏನ್ರೀ ರಾಜ್‌ಕುಮಾರ್...

    ಏನ್ರೀ ರಾಜ್‌ಕುಮಾರ್...

    ಸ್ವಾಮಿ ನೀವು ಬರೆದ ಪುಸ್ತಕ 10 ಸಾವಿರ ಜನ ಓದಬಹುದು ಅಷ್ಟೆನೇ. ಅದನ್ನು ಸಿನಿಮಾ ಮಾಡಿದರೆ ಪ್ರತಿ ದಿನ ಒಂದು ಲಕ್ಷ ಜನರು ಓದುತ್ತಾರೆ. ಅವಾರ್ಡ್ ಕೂಡ ಬರುತ್ತದೆ. ಕಥೆ ಅಷ್ಟು ಬಲಿಷ್ಠವಾಗಿದೆ. ದಯವಿಟ್ಟು ಕೊಡಿ. ರಾಜ್ ಕುಮಾರ್ ಕೂಡ ಇಷ್ಟಪಟ್ಟಿದ್ದಾರೆ ಎಂದೆ. ಆಗ ಅವರು 'ಏನ್ರೀ ರಾಜ್‌ಕುಮಾರ್...' ಎಂದು ಅಹನೆಯಿಂದ ಹೇಳಿದರು.

    'ಅಯ್ಯೋ ನೋಡಿದೆ ಬಿಡ್ರಿ'

    'ಅಯ್ಯೋ ನೋಡಿದೆ ಬಿಡ್ರಿ'

    ನಮ್ಮ 'ಎರಡು ಕನಸು' ನೋಡಿದ್ರಲ್ಲಾ ಸಾರ್ ಎಂದು ಕೇಳಿದೆ. ಅಯ್ಯೋ ನೋಡಿದೆ ಬಿಡ್ರಿ. ಏನು ಡೈರೆಕ್ಟರ್‌ಗಳು ಬಿಡ್ರಿ ಎಂದು ಬಿಟ್ಟರು. ನೀವೊಬ್ಬ ಡೈರೆಕ್ಟರ್, ರಾಜ್ ಕುಮಾರ್ ಒಬ್ಬ ಆಕ್ಟರ್ರಾ ಎಂದು ಬಿಟ್ಟರು. ನನ್ನ ಪಕ್ಕದಲ್ಲಿದ್ದವನು ರಾಜ್ ಕುಮಾರ್ ಪಕ್ಕಾ ಅಭಿಮಾನಿ. ಸಾರ್ ಹೊಡೀತೀನಿ ಎಂದು ಎದ್ದು ಬಿಟ್ಟ. ನಾನು ತೊಡೆ ಹಿಡಿದು ಭದ್ರವಾಗಿ ಕೂರಿಸಿದೆ. ಬಿಡಿ ಸರ್ ಪರ್ವಾಗಿಲ್ಲ. ನಿಮಗೆ ಇಷ್ಟವಿಲ್ಲ ಎಂದರೆ ನಾವು ಮಾಡೊಲ್ಲ. ರಾಜ್ ಕುಮಾರ್ ಒಬ್ಬ ಆಕ್ಟರ್‌ ಏನ್ರೀ ಎಂದು ಕೇಳಿದಾಗ ನಮಗೆ ಹರ್ಟ್ ಆಗಿ ಹೋಯ್ತು.

    ಮುಖಕ್ಕೆ ಹೊಡೆದಂತೆ ಆಗಿತ್ತು

    ಮುಖಕ್ಕೆ ಹೊಡೆದಂತೆ ಆಗಿತ್ತು

    37 ವಾರ ಓಡಿದ ಸಿನಿಮಾವನ್ನು ಹಾಗೆ ಅಂದರೆ ನೋವಾಗುವುದಿಲ್ಲವೇ? ಮುಖಕ್ಕೆ ಹೊಡೆದ ಹಾಗೆ ಆಯ್ತು. ಗಿರೀಶ್ ಕಾರ್ನಾಡ್ ಅವರಿಗೇ ಕೊಡಿ ಎಂದು ಎದ್ದುಬಂದೆ. ರಾಜ್ ಕುಮಾರ್ ಮಾಡಿದ್ದರೆ ಅದರ ಥರಾನೇ ಬೇರೆ ಇತ್ತು. ಕಮರ್ಷಿಯಲಿ ದೊಡ್ಡ ಯಶಸ್ಸು ಮಾತ್ರವಲ್ಲ, ಲಿಟರೇಚರಲಿ ಕೂಡ ಭಾರಿ ಸಕ್ಸಸ್ ಆಗುತ್ತಿತ್ತು. ಅಷ್ಟೇ ಹೇಳಿದ್ದರೆ ಸಾಕಿತ್ತು. ಕಾರ್ನಾಡ್, ಕಾರಂತರಿಗೆ ಕೊಡುತ್ತೇನೆ ಎಂದಿದ್ದರೆ ಸಾಕಿತ್ತು.

    ಕಾರಂತರ ಭೇಟಿಯ ಪ್ರಸಂಗ

    ಕಾರಂತರ ಭೇಟಿಯ ಪ್ರಸಂಗ

    ನಾನು, ಅಯ್ಯರ್ ಶಿವರಾಮ ಕಾರಂತರ ಚೋಮನದುಡಿ ಓದಿ ಇಷ್ಟಪಟ್ಟಿದ್ದೆವು. ನೋಡಿ ನನ್ನ ನಾವೆಲ್‌ಗಳಿಗೆ ಕಾರ್ನಾಡ್, ಕಾರಂತರು ಬಹಳ ಚೆನ್ನಾಗಿ ಮಾಡುತ್ತಾರೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ನಿಮ್ಮನ್ನು ಯಾವ ರೀತಿ ಕಮ್ಮಿ ಮಾಡಲು ಬಯಸುವುದಿಲ್ಲ. ನಿಮಗೆ ನಿಮ್ಮದೇ ಸ್ಥಾನ ಇದ್ದೇ ಇದೆ. ಮದರಾಸಿನಿಂದ ಇಲ್ಲಿಗೆ ಬಂದಿದ್ದೀರಾ. ಕಥೆ ಕೇಳಿಕೊಂಡು. ನೀವು ಒಂದು ಕೆಲಸ ಮಾಡಿ ಎಂದರು.

    ಆಗ ನಾವು ಸರ್ ನಾವು ಕಥೆ ಮಾಡಿ, ಸ್ಕ್ರೀನ್ ಪ್ಲೇ ಮಾಡಿದ್ದೇವೆ. ಬೇಕಾದರೆ ಓದುತ್ತೇವೆ ಎಂದೆವು. ಆಗ ಬೇಡಿ ಬೇಡಿ ಬೇಡಿ.. ಅದೇನೂ ಓದುವುದು ಬೇಡ. ಈಗಾಗಲೇ ಸಿದ್ಧ ಮಾಡಿದ್ದೀರಲ್ಲ. ಸಿನಿಮಾ ಶುರುಮಾಡಿ. ಆದರೆ ಇದು ಕಾರಂತರ 'ಚೋಮನದುಡಿ' ಆಧಾರಿತ ಎಂದು ಹೇಳಿಕೊಳ್ಳಬೇಡಿ ಎಂದರು.

    ಇದೇ ಇಬ್ಬರ ನಡುವಿನ ವ್ಯತ್ಯಾಸ

    ಇದೇ ಇಬ್ಬರ ನಡುವಿನ ವ್ಯತ್ಯಾಸ

    ಹೀಗೆ 'ಚೋಮನದುಡಿ' ಇನ್ ಕಮರ್ಷಿಯಲ್ ಆಯ್ತು. ಭೂದಾನ ಕಥೆ ನೋಡಿದರೆ ಗೊತ್ತಾಗುತ್ತದೆ. ಅದು ಚೋಮನದುಡಿ ಎಂದು ಗೊತ್ತಾಗುತ್ತದೆ. ಇದೇ ಇಬ್ಬರ ನಡುವಿನ ವ್ಯತ್ಯಾಸ. ಭೈರಪ್ಪ ಅಷ್ಟು ಹೇಳಿದ್ದರೆ ಸಾಕಿತ್ತು. ಟಿವಿಯಲ್ಲಿ ಬಂದಿತ್ತು, ಸಿನಿಮಾ ನೋಡಿದೆ. ನನಗೆ ಕಮರ್ಷಿಯಲ್ ನಿರ್ದೇಶಕರಿಗೆ ಕೊಡಲು ಇಷ್ಟವಿಲ್ಲ ಎಂದಿದ್ದರೆ ಖುಷಿಯಿಂದ ಬರುತ್ತಿದ್ದೆ.

    ಕಾರ್ನಾಡ್-ಕಾರಂತ್ ಫೋಬಿಯಾ

    ಕಾರ್ನಾಡ್-ಕಾರಂತ್ ಫೋಬಿಯಾ

    ಅವಮಾನ ಮಾಡುವಂಥಹದ್ದನ್ನು ತಪ್ಪಿಸಬಹುದಾಗಿತ್ತು. ದೊಡ್ಡ ಮನುಷ್ಯರಲ್ಲಿ ಅಂತಹದ್ದು ಬರಬಾರದು ಎನ್ನುವುದು ನನ್ನ ಅನಿಸಿಕೆ. ಅವರದೂ ತಪ್ಪಿಲ್ಲ. ಅಬ್ಸೆಸಿವ್ ವಿತ್ ಕಾರ್ನಾಡ್ ಮತ್ತು ಕಾರಂತ್ ಫೋಬಿಯಾ! ಅದನ್ನು ತಪ್ಪು ಎಂದು ನಾನು ಹೇಳುವುದೂ ಇಲ್ಲ.

    ಭೈರಪ್ಪ ಅವರನ್ನು ಗೌರವಿಸುತ್ತೇನೆ

    ಭೈರಪ್ಪ ಅವರನ್ನು ಗೌರವಿಸುತ್ತೇನೆ

    1978-79ರಲ್ಲಿ ಹೋಗಿರಬಹುದು. ಜನರು ಇದನ್ನು ಮರೆಯಬೇಕು. 40 ವರ್ಷವೇ ಆಗಿದೆ. ಸತ್ತ ಕುದುರೆಯನ್ನು ಹೊಡೆಯುವುದು ಸರಿಯಲ್ಲ. ನಾನು ಸುಳ್ಳು ಹೇಳುತ್ತಿಲ್ಲ. ಆದರೆ ಅವರ ಬರಹಗಳನ್ನು ಗೌರವಿಸುತ್ತೇನೆ. ಅವರ ಎಲ್ಲ ಬರಹ ಓದಿದ್ದೇನೆ. ಇಂದೂ ಅವರ ಪುಸ್ತಕ ಬಿಡುಗಡೆಯಾದರೆ ಓದುತ್ತೇನೆ. ನಾವು ಸಾಹಿತ್ಯ ಪ್ರಿಯರು. ಸಾ'ಹತ್ಯ' ಪ್ರಿಯರಲ್ಲ.

    ಅಣ್ಣಾವ್ರ ಅಭಿಮಾನಿಗಳಲ್ಲಿ ಭಗವಾನ್ ಮನವಿ

    ಅಣ್ಣಾವ್ರ ಅಭಿಮಾನಿಗಳಲ್ಲಿ ಭಗವಾನ್ ಮನವಿ

    'ಅವರ ಮೇಲೆ ಅಪಾರ ಗೌರವ ಇದೆ. ಜನರು ಇದನ್ನು ಎಳೆಯುವುದು, ವಿಸ್ತರಿಸುವುದು ಮಾಡುವುದು ಸರಿಯಲ್ಲ. ಅವರನ್ನು ಕ್ಷಮಿಸುವುದು ಮತ್ತು ಮರೆಯುವುದು ಒಳಿತು. ನಿಮ್ಮ ಮೂಲಕ ನನ್ನ ವೈಯಕ್ತಿಕ ಮನವಿ. ರಾಜ್ ಕುಮಾರ್ ಅವರ ಪರವಾಗಿ ಅವರ ಅಭಿಮಾನಿಗಳಿಗೆ ಮನವಿ ಮಾಡುತ್ತೇನೆ, ಈ ಘಟನೆಯನ್ನು ಮರೆಯಿರಿ ಮತ್ತು ಕ್ಷಮಿಸಿರಿ'

    ಭೈರಪ್ಪ ಕ್ಷಮೆ ಕೋರುತ್ತೇನೆ

    ಭೈರಪ್ಪ ಕ್ಷಮೆ ಕೋರುತ್ತೇನೆ

    ಈ ಘಟನೆ ನಡೆದಿರುವುದು ನಲವತ್ತು ವರ್ಷಗಳ ಹಿಂದೆ. ಸಂದರ್ಶನ ಕೂಡ ಯಾವಾಗಲೋ ನೀಡಿದ್ದು. ಅದನ್ನು ಈಗ ತಂದು ವಿವಾದ ಸೃಷ್ಟಿಸುವುದು ಸರಿಯಲ್ಲ. ಯಾವಾಗಲೋ ಆಗಿದ್ದನ್ನು ಈಗ ತರಬಾರದಿತ್ತು. ಅನ್ಯಾಯ ಇದು. ನನಗೆ ಭೈರಪ್ಪ ಅವರ ಬಗ್ಗೆ ಅಪಾರ ಗೌರವ ಇದೆ. ಈ ವಿವಾದ ಸೃಷ್ಟಿಯಾಗಿರುವುದಕ್ಕೆ ನಾನು ತುಂಬಾ ವಿನಯದಿಂದ ಮತ್ತು ಹೃದಯಪೂರ್ವಕವಾಗಿ ಅವರ ಕ್ಷಮೆ ಕೋರುತ್ತೇನೆ.

    English summary
    A video of filmmaker Bhagavan's interview on controversial statement by writer SL Bhyrappa goes viral on social media.
    Wednesday, May 6, 2020, 13:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X