ಶ್ವೇತಾ ಚೆಂಗಪ್ಪ ವೈಯಕ್ತಿಕ ಜೀವನದ ಬಗ್ಗೆ ಅಪಪ್ರಚಾರ: ಸಿಟ್ಟಾದ 'ಮಜಾ ಟಾಕೀಸ್' ರಾಣಿ
Recommended Video
ಕಿರುತೆರೆ ಮತ್ತು ಹಿರಿತೆರೆಯಲ್ಲು ಮಿಂಚಿದ ನಟಿ ಶ್ವೇತಾ ಚೆಂಗಪ್ಪ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗಷ್ಟೆ ಬೇಬಿ ಬಂಪ್ ಫೊಟೋ ಶೂಟ್ ಮತ್ತು ಸೀಮಂತ ಸಮಾರಂಭದ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಗರ್ಭಿಣಿ ಶ್ವೇತಾಗೆ ಸ್ನೇಹಿತರು, ಕುಟುಂಬದವರು ಮತ್ತು ಅಭಿಮಾನಿಗಳಿಂದ ಶುಭಾಶಯಗಳು ಹರಿದು ಬರುತ್ತಿದೆ.
ತರಹೇವಾರಿ ಪೋಸ್ ಗಳಲ್ಲಿ ಸುಂದರವಾದ ಫೊಟೋಶೂಟ್ ಮಾಡಿಸಿರುವ ಶ್ವೇತಾ ಬೇಬಿ ಬಂಪ್ ಗೆ ನೆಟ್ಟಿಗರು ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಶ್ವೇತಾ ಚೆಂಗಪ್ಪ ಗರ್ಭಿಣಿ ಆದ್ರೆ ನಟ ಸೃಜನ್ ಲೋಕೇಶ್ ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಇಂತಹ ಕಮೆಂಟ್ ಗಳನ್ನು ನೋಡಿದ ಶ್ವೇತಾ ನೆಟ್ಟಿಗರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನೆಟ್ಟಿಗರ ಕಮೆಂಟ್
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶ್ವೇತಾ ಸಂತಸದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಖುಷಿ ಖುಷಿಯಾಗಿರುವ ಶ್ವೇತಾಗೆ ನೆಟ್ಟಿಗರು ಅಸಬ್ಯವಾಗಿ ಕಮೆಂಟ್ ಮಾಡುತ್ತಿದ್ದಾರೆ. "ಕೊನೆಗು ಸೃಜನ್ ಲೋಕೇಶ್ ತಂದೆಯಾಗುತ್ತಿದ್ದೀರಾ ಅಭಿನಂದನೆಗಳು, ಮಜಾ ಟಾಕೀಸ್ ಗೆ ಹೊಸ ಎಂಟ್ರಿ" ಎಂದು ಶ್ವೇತಾ ಫೊಟೋಗೆ ಕಮೆಂಟ್ ಮಾಡಿದ್ದಾರೆ.

ನೆಟ್ಟಿಗರ ಮಾತಿನಿಂದ ಸಿಟ್ಟಾದ ಶ್ವೇತಾ
ಸೃಜನ್ ಲೋಕೇಶ್ ಗೆ ಅಭಿನಯಂದನೆ ತಿಳಿಸುತ್ತಿರುವವರಿಗೆ ಶ್ವೇತಾ ನೀವು ಯಾಕೆ ಸೃಜನೆ ಲೋಕೇಶ್ ಗೆ ಅಭಿನಂದನೆ ತಿಳಿಸುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. "ನನ್ನ ವಯಕ್ತಿಕ ಫೊಟೋವನ್ನು ಪೋಸ್ಟ್ ಮಾಡಿದ್ದೀನಿ. ನೀವೇನು ತಮಾಷೆ ಅಂತ ಅಂದುಕೊಂಡಿದ್ದೀರಾ. ಮೊದಲು ವೈಯಕ್ತಿಕ ಮತ್ತು ವೃತ್ತಿಪರ ವಿಚಾರಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವ ಸೂಕ್ಷ್ಮತೆಯನ್ನು ಹೊಂದಿರಬೇಕು" ಎಂದು ತಿರುಗೇಟು ನೀಡಿದ್ದಾರೆ.

ಸೃಜನ್ ಗೆ ರಾಣಿಯಾಗಿದ್ದ ಶ್ವೇತಾ
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ನಟಿ ಶ್ವೇತಾ, ಸೃಜನ್ ಲೋಕೇಶ್ ಪತ್ನಿಯ ಪಾತ್ರದಲ್ಲಿ ಕಾಣಿಕೊಳ್ಳುತ್ತಿದ್ದರು. ಮಜಾ ಟಾಕೀಸ್ ನಲ್ಲಿ ರಾಣಿಯಾಗಿ ಮಿಂಚುತ್ತಿದ್ದ ಶ್ವೇತಾ ಗರ್ಭಿಣಿಯಾದ ಬಳಿಕ ಕಾರ್ಯಕ್ರಮದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಆದ್ರೆ ನೆಟ್ಟಿಗರು ಈ ತೆರೆಮೇಲಿನ ಸಂಬಂದವನ್ನೆ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶ್ವೇತಾ ಕಾಲೆಳೆಯುತ್ತಿದ್ದಾರೆ.

ಕೊಡಗು ಶೈಲಿಯಲ್ಲಿ ಫೊಟೋ ಶೂಟ್
ಶ್ವೇತಾ ಚಂಗಪ್ಪ ಕೊಡಗು ಶೈಲಿಯ ಕಾಸ್ಟ್ಯೂಮ್ ಧರಿಸಿ ಫೊಟೋ ಶೂಟ್ ಮಾಡಿಸಿದ್ದಾರೆ. ಸಾಕಷ್ಟು ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಜೊತೆಗೆ ಇತ್ತೀಚಿಗಷ್ಟೆ ಸೃಜನ್ ಲೋಕೇಶ್ ಕುಟುಂಬ ಶ್ವೇತಾ ಮನೆಗೆ ಬಂದು ಸೀಮಂತ ಕಾರ್ಯದಲ್ಲಿ ಭಾಗಿಯಾಗಿದ್ದರು ಎಲ್ಲಾ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications