ಹೊಸ ಡ್ಯಾನ್ಸ್ ಶಾಲೆ ಆರಂಭಿಸಿದ 'ಕನ್ನಡತಿ' ನಟ ಸ್ಮೈಲ್ ಗುರು ರಕ್ಷಿತ್!
ಧಾರಾವಾಹಿ ನಟರು ನಟನೆಯ ಹೊರತಾಗಿಯೂ ತಮ್ಮಿಷ್ಟದ ಹವ್ಯಾಸಗಳನ್ನೇ ಉದ್ದಿಮೆಗಳನ್ನಾಗಿಯೂ ಹೊಂದುವ ಪರಿಪಾಟ ಸಾಮಾನ್ಯ. ಅಂತೆಯೇ 'ಕನ್ನಡತಿ' ಧಾರಾವಾಹಿ ನಟ ಸ್ಮೈಲ್ ಗುರು ರಕ್ಷಿತ್ ಸಹ ತಮ್ಮ ಹವ್ಯಾಸವನ್ನೇ ಉದ್ದಿಮೆಯನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.
ಸ್ಮೈಲ್ ಗುರು ರಕ್ಷಿತ್ ತಮ್ಮ ಹೊಸ ಡ್ಯಾನ್ಸ್ ಶಾಲೆಯನ್ನು ಪ್ರಾರಂಭಿಸುತ್ತಿದ್ದಾರೆ. ಈಗಾಗಲೇ ಎರಡು ಡ್ಯಾನ್ಸ್ ಶಾಲೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ರಕ್ಷಿತ್ ಇದೀಗ ತಮ್ಮ ಮೂರನೇ ಬ್ರ್ಯಾಂಚ್ ತೆರೆಯಲು ಸಜ್ಜಾಗಿದ್ದಾರೆ.
ರಕ್ಷಿತ್‌ರ ಡ್ಯಾನ್ಸ್ ಶಾಲೆಯ ಮೂರನೇ ಬ್ರ್ಯಾಂಚ್ ಕೆಂಗೇರಿಯಲ್ಲಿ ಪ್ರಾರಂಭವಾಗುತ್ತಿದ್ದು, ಶಾಸಕ ಸೋಮಶೇಖರ್ ಅವರು ಡಿಸೆಂಬರ್ 11 ರಂದು 'ಸ್ಮೈಲ್ ಗುರು ರಕ್ಷಿತ್ ಡ್ಯಾನ್ಸ್ ಗ್ಯಾರೇಜ್' ಅನ್ನು ಉದ್ಘಾಟನೆ ಮಾಡಲಿದ್ದಾರೆ.

ಉದ್ಘಾಟನೆಗೆ ಶಾಸಕ ಸೋಮಶೇಖರ್ ಮಾತ್ರವೇ ಅಲ್ಲದೆ, ಕನ್ನಡ ಕಿರುತೆರೆ ಲೋಕದ ಹಲವು ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಡ್ಯಾನ್ಸ್‌ರ್‌ಗಳು, ನೃತ್ಯ ಶಿಕ್ಷಕರು ಜೊತೆಗೆ ಡ್ಯಾನ್ಸ್ ಶಾಲೆಯ ಮಕ್ಕಳು, ಪೋಷಕರು ಸಹ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.
ನೃತ್ಯವು ರಕ್ಷಿತ್‌ಗೆ ಹವ್ಯಾಸ ಹಾಗೂ ಪ್ಯಾಷನ್ ಆಗಿದ್ದು, ತಾವು ಸ್ವಪರಿಶ್ರಮದಿಂದ ಕಲಿತ ನೃತ್ಯವನ್ನು ಇದೀಗ ಇತರ ಕೆಲವು ಶಿಕ್ಷಕರ ನೆರವಿನಿಂದ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೃತ್ಯ ಹೇಳಿಕೊಡುವ ಜೊತೆಗೆ ಭಾನುವಾರಗಳಂದು ಸ್ಲಂ ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡುವ ಕಾರ್ಯವನ್ನೂ ಸಹ ರಕ್ಷಿತ್‌ರ ಡ್ಯಾನ್ಸ್ ಗ್ಯಾರೇಜ್ ಮೂಲಕ ಮಾಡಲಾಗಿತ್ತು.
ರಕ್ಷಿತ್‌ರ ನೃತ್ಯ ಶಾಲೆಯಲ್ಲಿ ಡ್ಯಾನ್ಸ್ ಕಲಿತ ವಿದ್ಯಾರ್ಥಿಗಳು ಹಲವು ಕಡೆಗಳಲ್ಲಿ ಶೋಗಳನ್ನು ನೀಡಿದ್ದಾರೆ. ಉತ್ತಮ ಡ್ಯಾನ್ಸರ್‌ಗಳಾಗಿ ಗುರುತಿಸಿಕೊಂಡಿದ್ದಾರೆ. ಶಕ್ತಿ ದೊರೆತರೆ ಡ್ಯಾನ್ಸ್ ಗ್ಯಾರೇಜ್‌ನ ಇನ್ನಷ್ಟು ಬ್ರ್ಯಾಂಚ್‌ಗಳನ್ನು ತೆರೆದು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ನೃತ್ಯಾಭ್ಯಾಸ ಮಾಡಿಸುವ ಗುರಿಯನ್ನು ರಕ್ಷಿತ್ ಹೊಂದಿದ್ದಾರೆ.


Click it and Unblock the Notifications











