ಸ್ಮೈಲ್ ಗುರು ರಕ್ಷಿತ್‌ಗೆ ಸ್ಟಾರ್ ಡೈರೆಕ್ಟರ್ ಮಹೇಶ್ ಬಾಬು ಸಾಥ್: ಚೊಚ್ಚಲ ಚಿತ್ರಕ್ಕೆ 'ಅರಸು' ನಿರ್ದೇಶಕ ಆಕ್ಷನ್ ಕಟ್

By ಫಿಲ್ಮಿಬೀಟ್ ಡೆಸ್ಕ್

ಧಾರಾವಾಹಿ ನಟರು, ರಿಯಾಲಿಟಿ ಶೋನಲ್ಲಿ ಮಿಂಚಿದವರು ಚಿತ್ರರಂಗಕ್ಕೆ ಬರೋದು ಹೊಸತೇನಲ್ಲ. ಈ ಹಿಂದೆ ಕಿರುತೆರೆಯಿಂದ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಸ್ಟಾರ್ ನಟ, ನಟಿಯರಾಗಿ ಮೆರುತ್ತಿದ್ದಾರೆ. ಪ್ರತಿ ವರ್ಷ ಇಂತಹ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದರೆ, ಕೆಲವರಿಗೆ ಚೊಚ್ಚಲ ಚಿತ್ರದಲ್ಲಿಯೇ ಅನುಭವಿ ತಂಡ ಸಿಗುತ್ತೆ. ಅಂತಹವರಿಗೆ ಚಿತ್ರರಂಗದಲ್ಲಿ ಒಂದೊಳ್ಳೆ ಅಡಿಪಾಯ ಸಿಕ್ಕಿಬಿಡುತ್ತೆ.

ಈಗ ಮತ್ತೊಬ್ಬ ನಟ ಕಿರುತೆರೆಯಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಆ ಯುವ ಪ್ರತಿಭೆಯೇ ಸ್ಮೈಲ್ ಗುರು ರಕ್ಷಿತ್. ಕಳೆದ ಒಂದೂವರೆ ವರ್ಷದಿಂದ ತೆರೆಮರೆಯಲ್ಲಿದ್ದ ರಕ್ಷಿತ್ ಹೊಸ ಪ್ರಾಜೆಕ್ಟ್ ಆರಂಭ ಆಗಿದೆ. ಕನ್ನಡ ಜನಪ್ರಿಯ ನಿರ್ದೇಶಕರೇ ಸ್ಮೈಲ್ ಗುರು ಕೈ ಹಿಡಿದಿದ್ದಾರೆ. ಅವರು ಮತ್ಯಾರೂ ಅಲ್ಲ ಮಹೇಶ್ ಬಾಬು.

smile-guru-rakshith-mahesh-babu

ಇಷ್ಟು ದಿನ ಕಿರುಚಿತ್ರ, ಧಾರಾವಾಹಿ, ರಿಯಾಲಿಟಿ ಶೋ ಅಂತಿದ್ದ ಸ್ಮೈಲ್ ಗುರು ರಕ್ಷಿತ್ ಈಗ ಸಿನಿಮಾರಂಗಕ್ಕೆ ಕಾಲಿಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇವರ ಚೊಚ್ಚಲ ಸಿನಿಮಾಗೆ 'ಆಕಾಶ್', 'ಅರಸು' ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮಹೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಸ್ಕ್ರಿಪ್ಟ್ ಪೂಜೆ ಕೂಡ ನಡೆದಿದ್ದು, ಜನವರಿಯಲ್ಲಿ ಸಿನಿಮಾ ಸೆಟ್ಟೇರುತ್ತಿದೆ. ಎಂಎಂಎಂ ಗ್ರೂಪ್ಸ್ ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದೆ.

ರಕ್ಷಿತ್ 'ಸ್ಮೈಲ್ ಗುರು' ಅನ್ನು ಕಿರುಚಿತ್ರದಲ್ಲಿ ನಟಿಸಿದ್ದರು. ಆದು ತುಂಬಾನೇ ಜನಪ್ರಿಯತೆಯನ್ನು ಕಂಡಿತ್ತು. ಅಲ್ಲಿಂದ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಿದ್ದ 'ಪದ್ಮಾವತಿ' ಸ್ಮೈಲ್ ಗುರು ನಟಿಸಿದ ಚೊಚ್ಚಲ ಧಾರಾವಾಹಿ. ಇಲ್ಲಿಂದ ಕಿರುತೆರೆ ಪಯಣ ಆರಂಭ ಆಗಿತ್ತು.

ಕಲರ್ಸ್ ಕನ್ನಡದ ಮತ್ತೊಂದು ಜನಪ್ರಿಯ ಧಾರಾವಾಹಿ 'ಕನ್ನಡತಿ'ಯಲ್ಲಿ ನಾಯಕ ಹರ್ಷನ ತಮ್ಮನಾಗಿ ಆದಿಯಾಗಿ ನಟಿಸಿದ್ದರು. ಈ ಧಾರಾವಾಹಿ ಕೂಡ ಸಾಕಷ್ಟು ಹೆಸರನ್ನು ತಂದುಕೊಟ್ಟಿತ್ತು. ಧಾರಾವಾಹಿ ಅಷ್ಟೇ ಅಲ್ಲ. 'ತಕಧಿಮಿತ', 'ಡ್ಯಾನ್ಸ್ ಡ್ಯಾನ್ಸ್' ಅನ್ನೋ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದಾರೆ.

ಸ್ಮೈಲ್ ಗುರು ರಕ್ಷಿತ್ ಕ್ರೇಜಿಸ್ಟಾರ್ ರವಿಚಂದ್ರನ ನಟಿಸಿರುವ ಆ ದೃಶ್ಯ ಅನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ, ಮಹೇಶ್ ಬಾಬು ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಚೊಚ್ಚಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದರೆ. ಅದಕ್ಕೆ ಬೇಕಾಗಿರೋ ಸಂಪೂರ್ಣ ತಯಾರಿಯನ್ನು ಮಾಡಿಕೊಂಡಿದ್ದಾರೆ.

More from Filmibeat

English summary
Smile Guru Rakshith debut Movie directing Akash Arau fame Mahesh Babu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X