For Quick Alerts
  ALLOW NOTIFICATIONS  
  For Daily Alerts

  ದರ್ಶನ್ ವಿವಾದ: ಇಂದ್ರಜಿತ್ ಲಂಕೇಶ್ ವಿರುದ್ಧ ಗೃಹ ಸಚಿವರಿಗೆ ದೂರು

  |

  ನಟ ದರ್ಶನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ನಿರ್ದೇಶಕ-ಪತ್ರಕರ್ತ ಇಂದ್ರಜಿತ್ ಲಂಕೇಶ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ದೂರು ನೀಡಿದ್ದಾರೆ.

  ಮಂಗಳವಾರ ವಿಧಾನಸೌಧದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಟಿ.ಜೆ ಅಬ್ರಹಾಂ, ಇಂದ್ರಜಿತ್ ಲಂಕೇಶ್ ದಲಿತ ಎನ್ನುವ ಪದವನ್ನ ಪದೇ ಪದೇ ಬಳಸಿದ್ದಾರೆ, ಸಮುದಾಯವನ್ನು ಎತ್ತು ಕಟ್ಟುವ ಪ್ರಯತ್ನ ಮಾಡಿದ್ದಾರೆ, ಸಮುದಾಯಕ್ಕೆ ಕೋಪ ಬರುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.

  ದರ್ಶನ್ ಹಿಂಬಾಲಕರು, ರೌಡಿಗಳಿಂದ ಕೊಲೆ ಬೆದರಿಕೆ: ಇಂದ್ರಜಿತ್ ದೂರುದರ್ಶನ್ ಹಿಂಬಾಲಕರು, ರೌಡಿಗಳಿಂದ ಕೊಲೆ ಬೆದರಿಕೆ: ಇಂದ್ರಜಿತ್ ದೂರು

  ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ ಘಟನೆಯಲ್ಲಿ ಸಪ್ಲೈಯರ್ ದಲಿತ ಎಂದು ಪದೇ ಪದೇ ಒತ್ತಿ ಹೇಳಿದರು. ಈ ಕೇಸ್‌ನಲ್ಲಿ ದಲಿತರನ್ನು ಎತ್ತು ಕಟ್ಟುವ ಕೆಲಸ ಉದ್ದೇಶದಿಂದ ಹೀಗೆ ಹೇಳಿದರು. ಬೇರೆ ಸಮುದಾಯದವರ ಮೇಲೆ ದ್ವೇಷ ಹುಟ್ಟಿಸುವ ಹೇಳಿಕೆ ಕೊಟ್ಟಿದ್ದಾರೆ, ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.

  ಮೈಸೂರು ಪೋಲೀಸರು ಕಾಂಪ್ರುಮೈಜ್ ಆಗಿದ್ದಾರೆ. ಮೈಸೂರಿನ ಎಲ್ಲಾ ಪೋಲೀಸ್ ಸ್ಟೇಷನ್ ಗಳು ಸೆಟಲ್ ಮೆಂಟ್ ಸ್ಟೇಷನ್ ಆಗಿದೆ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದರಿಂದ ಮೈಸೂರು ಪೋಲಿಸರ ಮಾನ ಮರ್ಯಾದೆ ಹೋಗಿದೆ. ಇಂದ್ರಜಿತ್ ವಿರುದ್ದ ಮೈಸೂರು ಪೋಲೀಸರು ಮಾನ ನಷ್ಟ ಮೊಕೊದ್ದಮೆ ಹಾಕಿ ಎಂದು ಆಗ್ರಹಿಸಿದ್ದಾರೆ.

  ದರ್ಶನ್ ವಿವಾದ: ಇಂದ್ರಜಿತ್ ನಂತರ ಜೆಡಿಎಸ್‌ನಿಂದಲೂ ದೂರು ದಾಖಲುದರ್ಶನ್ ವಿವಾದ: ಇಂದ್ರಜಿತ್ ನಂತರ ಜೆಡಿಎಸ್‌ನಿಂದಲೂ ದೂರು ದಾಖಲು

  ಇಂದ್ರಜಿತ್‌ಗೆ ಬೆದರಿಕೆ

  ದರ್ಶನ್ ವಿರುದ್ಧ ಆರೋಪಗಳನ್ನು ಮಾಡಿರುವ ಹಿನ್ನೆಲೆ ಅವರ ಹಿಂಬಾಲಕರು, ರೌಡಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

  Darshan-Indrajit Controversy: Social activist T J Abraham Files complaint against Indrajit Lankesh

  ಜೆಡಿಎಸ್‌ನಿಂದಲೂ ದೂರು

  ಮೈತುಂಬ ವಿವಾದಗಳಿದ್ದರೂ ದರ್ಶನ್ ಸ್ಟಾರ್ ಗಿರಿ ಮಂಕಾಗದಿರಲು ಇಲ್ಲಿವೆ ಕಾರಣಗಳು | Filmibeat Kannada

  ಇಂದ್ರಜಿತ್ ಲಂಕೇಶ್ ಮತ್ತು ಎಚ್‌ಡಿ ಕುಮಾರಸ್ವಾಮಿ ಫೋಟೋ ದುರ್ಬಳಕೆ ಮಾಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಜೆಡಿಎಸ್ ಕಾನೂನು ಘಟಕದ ಪ್ರದೀಪ್ ಕುಮಾರ್ ದೂರು ನೀಡಿದ್ದಾರೆ.

  English summary
  Darshan-Indrajit Controversy: Social activist T J Abraham Files complaint against Indrajit Lankesh for using Dalit word many times.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X